Thursday, August 14, 2025
Homeರಾಜಕೀಯ | Politicsಗೃಹ ಸಚಿವ ಪರಮೇಶ್ವರ್‌ ಮನೆಯಲ್ಲಿ ದಲಿತ ನಾಯಕರ ಸಭೆ

ಗೃಹ ಸಚಿವ ಪರಮೇಶ್ವರ್‌ ಮನೆಯಲ್ಲಿ ದಲಿತ ನಾಯಕರ ಸಭೆ

Dalit leaders meet at Home Minister Parameshwar's house

ಬೆಂಗಳೂರು.ಆ. 14– ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಅವರ ನೇತೃತ್ವದ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ನಿನ್ನೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಮನೆಯಲ್ಲಿ ವಿಶೇಷ ಸಭೆ ನಡೆದಿದೆ.

ಸಚಿವರಾದ ಹೆಚ್‌.ಸಿ. ಮಹಾದೇವಪ್ಪ, ಕೆ.ಹೆಚ್‌.ಮುನಿ ಯಪ್ಪ, ಶಿವರಾಜ ತಂಗಡಗಿ, ವಿಧಾನಸಭೆಯ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ವರದಿಯನ್ನು ಆಧರಿಸಿ ಒಳಮೀಸಲಾತಿ ಜಾರಿಗೆ ಕಾಂಗ್ರೆಸ್‌‍ ಸರ್ಕಾರ ಬದ್ಧವಾಗಿದೆ.
ಆದರೆ, ಅದಕ್ಕೂ ಮುನ್ನ ಕೆಲವು ಗೊಂದಲಗಳನ್ನು ಬಗೆಹರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಇದೇ 16ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಂಡು ಜಾರಿಗೊಳಿಸಲಾಗುವುದು. ಅದಕ್ಕೂ ಮುನ್ನ ಸಚಿವ ಹಾಗೂ ಶಾಸಕರಲ್ಲಿ ಒಮತದ ಅಗತ್ಯವಿದೆ ಎಂಬ ಅಭಿಪ್ರಾಯ ಕೇೕಳಿಬಂದಿದೆ.
ಕಾಂಗ್ರೆಸ್‌‍ನಲ್ಲಿ ಒಡಕು ಉಂಟಾಗದಂತೆ ನಿರ್ಣಯ ಕೈಗೊಳ್ಳಬೇಕಿದೆ. ವರದಿ ಜಾರಿಗೊಳಿಸಿದ ಕ್ಷಣ ಎಲ್ಲವೂ ಮುಗಿಯುವುದಿಲ್ಲ.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿಯಲ್ಲಿನ ಜಾತಿ ಸಮೀಕ್ಷೆ ಮಾಹಿತಿ ಆಧರಿಸಿ ಮೀಸಲಾತಿಯನ್ನು ಪರಿಷ್ಕರಣೆ ನಡೆಸುವ ಷರತ್ತಿಗೆ ಒಳಪಟ್ಟು ಸದ್ಯಕ್ಕೆ ನಿರ್ಧಾರ ತೆಗೆದಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ. ಸಭೆಯ ಬಳಿಕೆ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಹೆಚ್‌.ಸಿ.ಮಹಾದೇವಪ್ಪ, ನಾವೆಲ್ಲಾ ಒಳಮೀಸಲಾತಿಯ ಪರವಾಗಿದ್ದೇವೆ. ಅಧ್ಯಯನ ನಡೆಸಿ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲು ಎಲ್ಲರೂ ಬದ್ಧವಾಗಿದ್ದೇವೆ.

ನಾಗಮೋಹನ್‌ ದಾಸ್‌‍ ಅವರ ವರದಿಯ ಅಂಶಗಳನ್ನು ಚರ್ಚೆ ಮಾಡುತ್ತಿದ್ದೇವೆ. ನಮಲ್ಲಿ ಯಾವುದೇ ಭೀನ್ನಾಭಿಪ್ರಾಯ ಇಲ್ಲ ಎಲ್ಲರೂ ಒಳಮೀಸಲಾತಿಯ ಪರವಾಗಿದ್ದೇವೆ ಎಂದು ಪುನರುಚ್ಚರಿಸಿದರು.

RELATED ARTICLES

Latest News