Thursday, February 27, 2025
Homeರಾಷ್ಟ್ರೀಯ | Nationalಪಂಜಾಬ್ ಎಎಪಿ ಸರ್ಕಾರಕ್ಕೂ ಕಾದಿದೆ ಆಪತ್ತು ..!

ಪಂಜಾಬ್ ಎಎಪಿ ಸರ್ಕಾರಕ್ಕೂ ಕಾದಿದೆ ಆಪತ್ತು ..!

Danger awaits the AAP government in Punjab..!

ನವದೆಹಲಿ,ಫೆ.10– ಆಪ್ ಸರ್ಕಾರ ಇರುವ ಪಂಜಾಬ್ನಲ್ಲಿ 30 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರು ಶಾಸಕರ ಸಭೆ ಕರೆದಿದ್ದಾರೆ.ನಾಳೆ ನಡೆಯಲಿರುವ ಸಭೆಯಲ್ಲಿ ಪಕ್ಷ ತೊರೆಯದಂತೆ ಶಾಸಕರ ಮನವೊಲಿಸುವ ಕಾರ್ಯವನ್ನು ಕೇಜ್ರಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

27 ವರ್ಷಗಳ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ವಿರೋಧ ಪಕ್ಷದ ನಾಯಕ ಪರತಾಪ್ ಸಿಂಗ್ ಬಾಜ್ವಾ ಅವರು ರಾಜ್ಯದ 30 ಎಎಪಿ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು.

ಪಂಜಾಬ್ನಲ್ಲಿ ಎಎಪಿಯೊಳಗೆ ಒಡಕು ಮತ್ತು ರಾಜ್ಯ ಸರ್ಕಾರದಲ್ಲಿ ಪುನಾರಚನೆಯಾಗುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷದ ನಾಯಕರು ಭವಿಷ್ಯ ನುಡಿದಿದ್ದಾರೆ. ಪಂಜಾಬ್ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ, 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ ಕಾಂಗ್ರೆಸ್ನಿಂದ ಅಧಿಕಾರವನ್ನು ಕಸಿದುಕೊಂಡಿತು. ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದ್ದರೆ, ಶಿರೋಮಣಿ ಅಕಾಲಿದಳ ಮೂರು ಶಾಸಕರನ್ನು ಹೊಂದಿದೆ.

ಪಂಜಾಬ್ನ ಜನರು ಕತ್ತರ್ ಇಮಾಂದಾರ್ ಪಕ್ಷದ ನಿಜವಾದ ಮುಖವನ್ನು ಸಹ ನೋಡಿದ್ದಾರೆ. ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪಂಜಾಬ್ನಲ್ಲಿ ಪಂಜಾಬಿಗಳನ್ನು ಮೂರ್ಖರನ್ನಾಗಿಸಲು ಮತ್ತು 2022 ರಲ್ಲಿ ಅವರ ಮತಗಳನ್ನು ಗಳಿಸಲು ಉತ್ಕೃಷ್ಟ ಭರವಸೆಗಳನ್ನು ನೀಡಿದ್ದಾರೆ ಎಂದು ಬಾಜ್ವಾ ಹೇಳಿದರು, ದೆಹಲಿಯ ಫಲಿತಾಂಶಗಳು ಎಎಪಿಯ ಅಂತ್ಯದ ಆರಂಭವನ್ನು ಸೂಚಿಸುತ್ತವೆ ಎಂದಿದ್ದರು.

ಸದ್ಯ ತೆರವಾಗಿರುವ ಲೂಧಿಯಾನದಿಂದ ಕೇಜ್ರಿವಾಲ್ ಸ್ಪರ್ಧಿಸಿ ಪಂಜಾಬ್ ಸರ್ಕಾರಕ್ಕೆ ಸೇರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಪಂಜಾಬ್ ಬಿಜೆಪಿ ನಾಯಕ ಸುಭಾಷ್ ಶರ್ಮಾ ಕೂಡ ಕೇಜ್ರಿವಾಲ್ ಪಂಜಾಬ್ನಲ್ಲಿ ಮುಖ್ಯಮಂತ್ರಿ ಪಾತ್ರವನ್ನು ಗುರಿಯಾಗಿಸಬಹುದು ಎಂದು ಹೇಳಿದ್ದಾರೆ.

RELATED ARTICLES

Latest News