Thursday, April 3, 2025
Homeಇದೀಗ ಬಂದ ಸುದ್ದಿಟ್ರೆಂಡ್‌ ಆಯ್ತು 511 ಖೈದಿ ನಂಬರ್‌

ಟ್ರೆಂಡ್‌ ಆಯ್ತು 511 ಖೈದಿ ನಂಬರ್‌

ಬೆಂಗಳೂರು,ಆ.30- ದರ್ಶನ್‌ ಅಭಿಮಾನಿಗಳ ಹುಚ್ಚಾಟ ಮಿತಿ ಮೀರುತ್ತಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ದರ್ಶನ್‌ಗೆ ನೀಡಲಾಗಿರುವ ಖೈದಿ ನಂಬರ್‌ ಇದೀಗ ಅವರ ಅಭಿಮಾನಿಗಳ ಟ್ರೆಂಡ್‌ ಆಗಿ ಪರಿವರ್ತನೆಗೊಂಡಿದೆ.
ದರ್ಶನ್‌ಗೆ ನೀಡಲಾಗಿರುವ ಖೈದಿ ನಂಬರ್‌ 511 ಗೆ ಅಭಿಮಾನಿಗಳು ಫಿದಾ ಆಗಿದ್ದು ತಮ ವಾಹನಗಳ ಮೇಲೆ ಬಳ್ಳಾರಿ ಖೈದಿ 511 ಎಂದು ಬರೆಸಿಕೊಳ್ಳತೊಡಗಿದ್ದಾರೆ.

ಈ ಹಿಂದೆ ದರ್ಶನ್‌ ಜೈಲು ಪಾಲಾಗಿದ್ದ ಸಂದರ್ಭದಲ್ಲಿ ನೀಡಲಾಗಿದ್ದ 6106ಗೆ ಫಿದಾ ಆಗಿದ್ದ ಅಭಿಮಾನಿಗಳು ತಮ ವಾಹನಗಳ ಮೇಲೆ ಅದೇ ನಂಬರ್‌ ಬರೆಸಿಕೊಂಡು ಖುಷಿ ಪಟ್ಟಿದ್ದರು. ತಮ ಬೈಕ್‌, ಆಟೋ, ಟ್ಯಾಟು, ಹಾಗೂ ಮಗುವಿಗೆ 6106 ಖೈದಿ ನಂಬರ್‌ ಬಟ್ಟೆ ಹಾಕಿಸಿ ಫೋಟೋ ಶೂಟ್‌ ಮಾಡಲಾಗಿತ್ತು ಇದೀಗ 511 ನಂಬರ್‌ ಕೂಡ ಟ್ರೆಂಡ್‌ ಆಗಿ ಪರಿವರ್ತನೆಯಾಗಿದೆ.

ದರ್ಶನ್‌ ಅಭಿಮಾನಿಗಳು ತಮ ವಾಹನಗಳ ಮೇಲೆ ಬಳ್ಳಾರಿ ಖೈದಿ ನಂಬರ್‌ 511 ಎಂದು ಬರೆಸಿಕೊಂಡು ತಮ ಅಭಿಮಾನ ಪ್ರದರ್ಶಿಸುತ್ತಿದ್ದಾರೆ.

RELATED ARTICLES

Latest News