Monday, June 24, 2024
Homeಮನರಂಜನೆಅಪ್ಪ ನೀವೆ ನನ್ನ ಹೀರೋ : ಅಪ್ಪಂದಿರ ದಿನದಂದು ದರ್ಶನ್‌ ಪುತ್ರನ ಭಾವನಾತಕ ಪೋಸ್ಟ್‌

ಅಪ್ಪ ನೀವೆ ನನ್ನ ಹೀರೋ : ಅಪ್ಪಂದಿರ ದಿನದಂದು ದರ್ಶನ್‌ ಪುತ್ರನ ಭಾವನಾತಕ ಪೋಸ್ಟ್‌

ಬೆಂಗಳೂರು, ಜೂ. 16- ವಿಶ್ವದೆಲ್ಲೆಡೆ ಇಂದು ಅಪ್ಪಂದಿರ ದಿನಾಚರಣೆ ಆಚರಣೆ ಮಾಡುತ್ತಿದ್ದು, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪುತ್ರ ವಿನೀಶ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಂದೆಗೆ ಭಾವನಾತಕ ಸಂದೇಶ ಕಳುಹಿಸುವ ಮೂಲಕ ಶುಭ ಕೋರಿದ್ದಾರೆ.

ನಟ ದರ್ಶನ್‌ ಅವರನ್ನು ರೇಣುಕಾ ಸ್ವಾಮಿಯ ಕೊಲೆ ಆರೋಪ ದಡಿ ಕಾರಾಗೃಹದಲ್ಲಿರು ವುದರಿಂದ ವಿನೀಶ್‌ ತಮ ತಂದೆಗೆ ಅಪ್ಪಂದಿರ ದಿನಾಚರಣೆಯ ಶುಭಾಶಯ ಕೋರಲು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.

ನೀವೇ ನನಗೆ ಹೀರೋ:
ತಮ ಅಧಿಕೃತ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ `ಹ್ಯಾಪಿ ಫಾದರ್ಸ್‌ ಡೇ ಅಪ್ಪ , ನಾನು ನಿಮನ್ನು ತುಂಬಾ ಮಿಸ್‌‍ ಮಾಡಿಕೊಳ್ಳುತ್ತಿದ್ದೇನೆ ಐ ಲವ್‌ ಯು. ಯಾವಾಗಲೂ ನೀವೇ ನನಗೆ ಹೀರೋ’ ಎಂದು ಪೋಸ್ಟ್‌ ಮಾಡಿದ್ದಾರೆ.

ದರ್ಶನ್‌ ಅವರು ಕೊಲೆ ಆರೋಪದಡಿ ಜೈಲಿನಲ್ಲಿರುವುದರ ಕುರಿತು ಇತ್ತೀಚೆಗೆ ಪೋಸ್ಟ್‌ ಮಾಡಿದ್ದ ವಿನೀಶ್‌, `ನನ್ನ ತಂದೆಯ ಬಗ್ಗೆ ಅಸಭ್ಯ ರೀತಿಯಲ್ಲಿ ಕಾಮೆಂಟ್‌ ಮಾಡಿ ನಿಂದಿಸುತ್ತಿರುವವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೀನಿ.

ನನಗೆ ಈಗಿನ್ನೂ 15 ವರ್ಷ, ನನಗೂ ಮನಸ್ಸಿದೆ, ಈ ಸಂಕಷ್ಟದ ಪರಿಸ್ಥಿತಿ ನಮ ತಂದೆ ಹಾಗೂ ತಾಯಿಗೆ ನಿಮ ಬೆಂಬಲದ ಅವಶ್ಯಕತೆ ಇದೆ. ನನಗೆ ಶಾಪ ಹಾಕಿದರೆ ಯಾವುದೇ ಬದಲಾವಣೆ ಆಗುವುದಿಲ್ಲ’ ಎಂದು ನೋವಿನಿಂದ ಇನ್ಸಾಟಾಗ್ರಾಂನಲ್ಲಿ ತನ್ನ ನೋವನ್ನು ತೋಡಿಕೊಂಡರು.

ವಿನೀಶ್‌ ಅವರು ಈಗಾಗಲೇ ಐರಾವತ, ಯಜಮಾನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಮುಂದಿನ ದಿನಗಳಲ್ಲಿ ನಾಯಕನಟನಾಗಲು ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾನೆ.

RELATED ARTICLES

Latest News