ಬೆಂಗಳೂರು,ಜೂ.28- ಸಂವಿಧಾನದಿಂದ ಜಾತ್ಯತೀತ ಪದ ಬಿಡಬೇಕು ಎಂಬ ಹೇಳಿಕೆಯೇ ಅಪ್ರಸ್ತುತವಾದುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸರಿಯಲ್ಲ.
ಭಾರತದ ಸಂವಿಧಾನ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ರಚನೆ ಮಾಡಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್‌ರವರು ಬೇರೆಬೇರೆ ರಾಷ್ಟ್ರಗಳ ಸಂವಿಧಾನವನ್ನು ಪರಿಶೀಲಿಸಿ ಭಾರತದ ಪರಿಸ್ಥಿತಿ ಹಾಗೂ ವಿವಿಧ ಪದರಗಳನ್ನು ಅರ್ಥೈಸಿಕೊಂಡು ಜಾತ್ಯತೀತ ಪದವನ್ನು ಅಳವಡಿಸಿದ್ದಾರೆ ಎಂದರು.
1957 ರಿಂದಲೂ ಈವರೆಗೂ ಭಾರತೀಯರಾದ ನಾವು ಸಂವಿಧಾನವನ್ನು ಪಾಲನೆ ಮಾಡಿಕೊಂಡು ಬಂದಿದ್ದೇವೆ. ಇದೊಂದು ಟೈಮ್ ಟೆಸ್ಟೆಡ್ ಸಂವಿಧಾನ. ಯಾವುದೇ ರೀತಿಯ ತೊಂದರೆ ಇಲ್ಲದಂತೆ ನಡೆದುಕೊಂಡು ಬರುತ್ತಿದೆ. ಹಾಗೆಯೇ ಮುಂದುವರೆಯಬೇಕೂ ಕೂಡ ಎಂದರು.
ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿ, ಮುಕ್ತ ಅವಕಾಶ ಸಿಗಬೇಕು ಎಂಬುದು ಜಾತ್ಯತೀತತೆಯ ಅರ್ಥವಾಗಿದೆ. ಹೊಸಬಾಳೆಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ವಿಶ್ವದಲ್ಲೇ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಕಾರಗೊಳಿಸಿದ ಸಂವಿಧಾನ ಭಾಷೆ, ಸಂಸ್ಕೃತಿ, ಧರ್ಮದ ವಿಭಿನ್ನತೆ ನಡುವೆ ನಮನ್ನು ಏಕತೆಯಿಂದ ಬದುಕುವಂತೆ ಮಾಡಿದೆ. ಇದನ್ನು ಬದಲಾವಣೆ ಮಾಡುವ ವಿಚಾರದಲ್ಲಿ ರಾಜಿ ಇಲ್ಲ ಎಂದು ಹೇಳಿದರು.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ