Saturday, July 12, 2025
Homeರಾಜ್ಯದಾವಣಗೆರೆ : ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟ ತಾಯಿ -ಮಗಳು

ದಾವಣಗೆರೆ : ಸಾಲ ತೀರಿಸಲಾಗದೆ ರೈಲಿಗೆ ತಲೆಕೊಟ್ಟ ತಾಯಿ -ಮಗಳು

Davangere: Mother and daughter commit suicide by jumping under a train

ದಾವಣಗೆರೆ,ಜು.11-ಮಾಡಿದ್ದ ಸಾಲ ತೀರಿಸಲಾಗದೆ ತಾಯಿ ಹಾಗೂ ಅಂಗವಿಕಲೆ ಮಗಳು ರೈಲಿಗೆ ತಲೆಕೊಟ್ಟು ಆತಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ತುಂಗಭದ್ರ ನದಿ ಸೇತುವೆ ಬಳಿ ನಡೆದಿದೆ.

ಗಂಗನರಸಿ ಗ್ರಾಮದ ಸುವರ್ಣಮ (56), ಅಂಗವಿಕಲ ಮಗಳು ಗೌರಮ (26) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಕೆಲ ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಸುವರ್ಣಮ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು ಇವರಿಗಿದ್ದ ಮೂವರು ಪುತ್ರಿಯರಲ್ಲಿ ಇಬ್ಬರ ವಿವಾಹವಾಗಿದ್ದು ಬೇರೆಡೆ ನೆಲೆಸಿದ್ದಾರೆ.

ಅಂಗವಿಕಲೆಯಾದ ಗೌರಮ ತಾಯಿಯೊಂದಿಗೆ ನೆಲೆಸಿದ್ದರು.ಇತ್ತೀಚೆಗೆ ಸಾಲದ ಹೊರೆಗೆ ಬಳಲಿದ್ದರು ಎನ್ನಲಾಗುತ್ತಿದ್ದು, ಮೈಕ್ರೊ ಫೈನಾನ್ಸ್ ಮತ್ತು ಸ್ವಸಹಾಯ ಸಂಘಗಳಲ್ಲಿ 3 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು.

2 ಸಾಲಕ್ಕೆ ವಾರಕ್ಕೊಮೆ ಹಾಗೂ 1 ಸಾಲಕ್ಕೆ ತಿಂಗಳ ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಸಾಲದ ಕಂತು ಸರಿಯಾಗಿ ಪಾವತಿಸಲು ಕಷ್ಟಪಡುತ್ತಿದ್ದರು ಕೊನೆಗೆ ನಿನ್ನೆ ಸಾಲಗಾರರ ಕಾಟ ತಾಳಲಾರದೆ ತುಂಗಾಭದ್ರಾ ನದಿಗೆ ನಿರ್ಮಿಸಿದ ರೈಲ್ವೆ ಸೇತುವೆಯ ಮೇಲೆ ತೆರಳಿ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾರೆ.

RELATED ARTICLES

Latest News