ಬೆಂಗಳೂರು, ಅ.30- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆಯಾದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ವಿಘ್ನ ಎದುರಾಗಿದೆ. 17 ಕಿ.ಮೀ ಉದ್ದದ ಸುರಂಗ ಮಾರ್ಗದ ಬದಲಿಗೆ ಕೇವಲ ಒಂದು ಕಿ.ಮೀ ಉದ್ದದ ಸುರಂಗ ಮಾತ್ರ ನಿರ್ಮಾಣ ಮಾಡಲು ಬಿ ಸೈಲ್ ಸಂಸ್ಥೆ ನಿರ್ಧರಿಸಿದೆ.
17 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಪರಿಸರವಾದಿಗಳು, ತಜ್ಞರು ಹಾಗೂ ನಾಗರಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೇವಲ ಒಂದು ಕಿ.ಮೀ ಉದ್ದದ ಸುರಂಗ ಮಾರ್ಗ ಮಾತ್ರ ನಿರ್ಮಿಸಿ ಉಳಿದ ಕಡೆಗಳಲ್ಲಿ ಮಾಮೂಲು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಆರಂಭದಲ್ಲಿ ಹೆಬ್ಬಾಳದಿಂದ ಸಿಲ್‌್ಕ ಬೋರ್ಡ ಜಂಕ್ಷನ್‌ವರೆಗಿನ ಒಂದು ಕಿಲೋಮೀಟರ್ ಉದ್ದದ ಸುರಂಗ ಕೊರೆಯಲು ಯೋಜನೆ ರೂಪಿಸಲಾಗಿದೆ.ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಪಶುವೈದ್ಯಕೀಯ ಆಸ್ಪತ್ರೆ ವರೆಗೆ ಮಾತ್ರ ಸುರಂಗ ನಿರ್ಮಿಸಲಾಗುತ್ತಿದೆ.
ಒಂದು ಕಿ.ಮೀ ಉದ್ದದ ಸುರಂಗ ಮಾರ್ಗ ಕಾಮಗಾರಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
