Friday, November 22, 2024
Homeರಾಜಕೀಯ | Politicsಬಿಜೆಪಿಯವರು ಹಿಮಾಲಯದ ಎತ್ತರದವರೆಗೂ ಹಗರಣ ಮಾಡಿದ್ದಾರೆ : ಡಿಸಿಎಂ

ಬಿಜೆಪಿಯವರು ಹಿಮಾಲಯದ ಎತ್ತರದವರೆಗೂ ಹಗರಣ ಮಾಡಿದ್ದಾರೆ : ಡಿಸಿಎಂ

ಬೆಂಗಳೂರು,ಅ.17- ರಾಜ್ಯದಲ್ಲಿ ಲೂಟಿ ಹಗರಣಗಳ ಬಗ್ಗೆ ತನಿಖೆಯಾಗಬೇಕು. ನಾವು ಕೂಡ ಅದಕ್ಕೆ ಸಿದ್ದರಿದ್ದೇವೆ. ಬಿಜೆಪಿಯವರನ್ನು ಒಳಗೊಂಡಂತೆ ತನಿಖೆಯಾಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಹಿಮಾಲಯದ ಎತ್ತರದವರೆಗೂ ಹಗರಣ ಮಾಡಿದ್ದಾರೆ. 2000 ಕೋಟಿ ರೂ.ಗಳು ಹರಿದುಹೋಗಿದೆ ಎಂದು ಗಂಭೀರ ಆರೋಪ ಮಾಡಿದರು.

ಆರ್.ಅಶೋಕ್, ಲೂಟಿ ರವಿ, ನಕಲಿ ಸ್ವಾಮಿ, ಬ್ಲಾಕ್‍ಮೇಲ್ ಸ್ವಾಮಿ ಇವರೆಲ್ಲ ಇದ್ದಾರೆ. ಇವರೆಲ್ಲ ಏನು ನಡೆಸಿದ್ದಾರೆ ಎಂದು ತನಿಖೆ ನಡೆಸಲಿ. ಮೊದಲು ತನಿಖೆಯಾಗಬೇಕು. ನಾವು ಕೂಡ ಅದನ್ನೇ ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ದೇಶದೊಂದಿಗೆ ಪಾಲುದಾರರಾಗಲು ಹೂಡಿಕೆದಾರರಿಗೆ ಮೋದಿ ಕರೆ

ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದೇ ಬಿಜೆಪಿ. ಆದಾಯ ತೆರಿಗೆ ದಾಳಿಯ ಬಗ್ಗೆ ನಾವು ಮಾತನಾಡದೆ ಮೌನವಾಗಿದುದ್ದಕ್ಕೆ ಕಾರಣ ಮೊದಲು ಇಲಾಖೆ ಮಾಹಿತಿ ನೀಡಲಿ ಎಂಬುದಾಗಿತ್ತು. ನಿನ್ನೆ ಮಾಹಿತಿ ಹೊರಬಂದಿದೆ. ಜಾರಿನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಎಲ್ಲವೂ ಅವರ ಬಳಿಯೇ ಇದೆ ತನಿಖೆ ಮಾಡಲಿ ಯಾರು ಬೇಡ ಎಂದಿದ್ದಾರೆ. ಅದೆನೋ ಬಿಚ್ಚುತ್ತಾರೋ ಬಿಚ್ಚಲಿ ಎಂದು ಸವಾಲು ಹಾಕಿದರು.

ಕಲೆಕ್ಷನ್ ಮಾಸ್ಟರ್ ಎಂದು ಬಿಜೆಪಿಯವರು ಪೋಸ್ಟರ್ ಹಾಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಮಾಲಯ ಪರ್ವತದ ಮೇಲೂ ಇವರು ಭ್ರಷ್ಟಾಚಾರ ಮಾಡಿದ್ದಾರೆ. ಇಡೀ ದೇಶದಲ್ಲಿ ಹಿಮಾಲಯದವರೆಗೂ ಹಗರಣಗಳಾಗಿವೆ. ಹಿಂದೆ 2000 ಕೋಟಿ ರೂ. ಹೋಗಿದೆಯಂತೆ. ಮುಖ್ಯಮಂತ್ರಿ ಕಚೇರಿಯಲ್ಲೇ ಇದೆಲ್ಲ ನಡೆದಿತ್ತು. ಎಷ್ಟೆಷ್ಟು ಪರ್ಸಂಟೇಜ್ ಹೋಗಿತ್ತು ಎಂದು ಶಾಸಕರು ಮತ್ತು ಮಾಜಿ ಸಚಿವರಿಂದಲೇ ಹೇಳಿಸಲು ಸಿದ್ದನಿದ್ದೇನೆ. ಸದ್ಯಕ್ಕೆ ಈಗ ಬೇಡ. ಸಮಯ ಬರುತ್ತದೆ ಆಗ ಮಾತನಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದೇ ಭ್ರಷ್ಟಾಚಾರದ ಕಾರಣಕ್ಕಾಗಿ. ಆದಾಯ ತೆರಿಗೆ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೆ ಬಿಜೆಪಿ ನಾಯಕರ ಸಂಪರ್ಕವಿದೆ. ಕಾಂಗ್ರೆಸ್‍ಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಗುತ್ತಿಗೆದಾರರು ಕಮೀಷನನ್ನು ಬಿಜೆಪಿ ಪರವಾಗಿಯೇ ವಸೂಲಿ ಮಾಡಿದ್ದಾರೆ. ಈ ಭ್ರಷ್ಟಾಚಾರ ಬಿಜೆಪಿಯ ಕೂಸು. ಆದಾಯ ತೆರಿಗೆ ದಾಳಿಯಲ್ಲಿ ಜಪ್ತಿ ಮಾಡಲಾಗಿರುವ ಡೈರಿಯಲ್ಲಿ ಎಲ್ಲ ಮಾಹಿತಿ ಇದೆ. ಅದು ಹೊರಬರಬೇಕು ಎಂದು ಆಗ್ರಹಿಸಿದರು.

RELATED ARTICLES

Latest News