ಬೆಂಗಳೂರು,ಮಾ.4- ಕನ್ನಡ ಚಲಚಿತ್ರರಂಗದ ವಿಚಾರ ಚರ್ಚೆಯಾಗಲಿ ಎಂಬ ಕಾರಣಕ್ಕಾಗಿಯೇ ತಾವು ನಟ್ಟು, ಬೋಲ್ಟು ವಿಷಯ ಪ್ರಸ್ತಾಪಿಸಿದ್ದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರರಂಗದವರಿಗೆ ತಾವು ಎಚ್ಚರಿಕೆ ನೀಡಿದ್ದಕ್ಕೆ ಸಂಬಂಧಪಟ್ಟಂತೆ ಟೀಕೆಗಳಾಗುತ್ತಿವೆ. ಟೀಕೆಗಳು, ಚರ್ಚೆಗಳು ನಡೆಯಬೇಕು, ನನ್ನ ಹೇಳಿಕೆಗೆ ಟೀಕಾತಕ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ನನಗೆ ಗೊತ್ತಿತ್ತು. ಅದಕ್ಕೆ ನನಗೆ ಯಾವ ಬೇಜಾರು ಇಲ್ಲ ಎಂದು ಹೇಳಿದ್ದಾರೆ.
ಚರ್ಚೆಗಳಾದರೆ ತಾನೆ ತಪ್ಪು ಯಾರದು ಎಂದು ಗೊತ್ತಾಗಲು ಸಾಧ್ಯ. ಸಿನಿಮಾ ಇಲ್ಲದೆ ಬದುಕುವ ಶಕ್ತಿ ನಮಗೆ ಇದೆ. ಸಿನಿಮಾದವರಿಗೆ ಸರ್ಕಾರ ಮತ್ತು ಜನ ಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ನಾನು ಚಿತ್ರರಂಗದವರಿಗೆ ಎಷ್ಟು ಸಹಾಯ ಮಾಡಿದ್ದೇನೆ ಎಂಬುದು ಗೊತ್ತಿದೆ. ಸಹಾಯ ಪಡೆದುಕೊಂಡವರಿಗೂ ಅದರ ಅರಿವಿದೆ. ನೆಲ, ಜಲ, ಭಾಷೆಯ ವಿಷಯ ಬಂದಾಗ ಚಿತ್ರರಂಗ ದನಿಗೂಡಿಸಬೇಕು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಮಗಾಗಿ ಮಾಡಿಕೊಳ್ಳಲಿಲ್ಲ. ಚಿತ್ರರಂಗದ ಬೆಳವಣಿಗೆಗಾಗಿ ಮಾಡಲಾಯಿತು. ಅವರ ಕಾರ್ಯಕ್ರಮವನ್ನು ಅವರೇ ಪ್ರಚಾರ ಮಾಡಿಕೊಳ್ಳದೆ ದಿನ ಬೆಳಿಗ್ಗೆ, ಸಂಜೆ ನಾವು ಪ್ರಚಾರ ಮಾಡಬೇಕೇ? ಎಂದು ಪ್ರಶ್ನಿಸಿದರು.
ಆಹ್ವಾನ ಪತ್ರಿಕೆ ತಲುಪಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಕಾರ್ಯಕ್ರಮ ಎಲ್ಲರೂ ಒಟ್ಟಾಗಿ ಮಾಡಬೇಕು. ಚರ್ಚೆಗಳಾಗಲಿ, ಯಾರದು ತಪ್ಪು, ಸರಿ ಎಂದು ವಿಮರ್ಶೆಯಾಗಿ ತಿದ್ದುಪಡಿಯಾಗಲಿ ಎಂದರು. ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಂದು ತಮನ್ನು ಭೇಟಿ ಮಾಡಿದ್ದರು. ತಮ ಉಸ್ತುವಾರಿಯಲ್ಲಿರುವ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನೂಲ ಇಲಾಖೆಗಳಲ್ಲೇ 1.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಹಿಂದಿನ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ. ನಮಗೆ ವಾರ್ಷಿಕ ಬಿಲ್ ಪಾವತಿಗೆ ಅವಕಾಶ ಇರುವುದು 6 ಸಾವಿರ ಕೋಟಿ ರೂ. ಮಾತ್ರ. ಅವರು ಕೇಂದ್ರ ಸರ್ಕಾರದಿಂದ ಜಲಸಂಪನೂಲ ಇಲಾಖೆ ಭದ್ರಮೇಲ್ದಂಡೆ ಯೋಜನೆಗೆ 2,300 ಕೋಟಿ ರೂ. ಬರಬೇಕು. ಹಣ ಬಂದ ತಕ್ಷಣ ಸಣ್ಣ ಸಣ್ಣ ಬಿಲ್‌ಗಳನ್ನು ಜೇಷ್ಠತೆ ಮತ್ತು ಆದ್ಯತೆ ಮೇರೆಗೆ ಬಿಡುಗಡೆ ಮಾಡಲಾಗುವುದು ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ ಪಕ್ಷದ ವರೀಷ್ಠರು. ಅವರನ್ನು ಭೇಟಿ ಮಾಡದೆ ಬಿಜೆಪಿಯವರನ್ನು ಭೇಟಿ ಮಾಡಲು ಸಾಧ್ಯವೇ? ನಮ ರಾಜ್ಯಕ್ಕೆ ಬಂದಾಗ ಅವರಿಗೆ ಗೌರವ ಕೊಡುವುದು ನಮ ಕರ್ತವ್ಯ. ಹೊಸ ಕಚೇರಿಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು. ತೆರಿಗೆ ಪಾವತಿಸದ ಕಂಪನಿಗಳಿಗೆ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸವಾಲು ಬೃಹತ್ ಪ್ರಮಾಣದಲ್ಲಿದೆ. ಹೀಗಾಗಿ ತೆರಿಗೆ ವಸೂಲಿ ಮಾಡುವುದು ಅಧಿಕಾರಿಗಳ ಕರ್ತವ್ಯ ಎಂದರು.