Friday, November 22, 2024
Homeರಾಜ್ಯಇನ್ನು ಮುಂದೆ ಕುಮಾರಪಾರ್ಕ್‌ ಸರ್ಕಾರಿ ನಿವಾಸದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ ಡಿಸಿಎಂ ಡಿಕೆಶಿ

ಇನ್ನು ಮುಂದೆ ಕುಮಾರಪಾರ್ಕ್‌ ಸರ್ಕಾರಿ ನಿವಾಸದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ ಡಿಸಿಎಂ ಡಿಕೆಶಿ

ಬೆಂಗಳೂರು, ಜೂ. 12- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇನ್ನು ಮುಂದೆ ಕುಮಾರಪಾರ್ಕ್‌ ಪೂರ್ವದಲ್ಲಿರುವ ಸರ್ಕಾರಿ ನಿವಾಸದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ನಿವಾಸದ ವಿಳಾಸ ನಂಬರ್‌ 1, ಕುಮಾರಪಾರ್ಕ್‌ ಪೂರ್ವ, ಗಾಂಧಿಭವನ ರಸ್ತೆ, ಶಿವಾನಂದ ಸರ್ಕಲ್‌ ಬಳಿ, ಬೆಂಗಳೂರು ಆಗಿದ್ದು, ಇನ್ನು ಮುಂದೆ ಅವರು ಇಲ್ಲಿಯೇ ಎಲ್ಲರಿಗೂ ಲಭ್ಯವಾಗಲಿದ್ದಾರೆ.

ಸದಾಶಿವನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಇನ್ನು ಮುಂದೆ ಯಾರನ್ನೂ ಭೇಟಿ ಮಾಡುವುದಿಲ್ಲ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಡಿ.ಕೆ.ಶಿವಕುಮಾರ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News