ನವದೆಹಲಿ, ಏ.30- ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಬೆಂಗಳೂರನ್ನು ತೆರಿಗೆಯೂರು ಮಾಡಿದ್ದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಾಧನೆಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಇನ್ನೂ ದುರಸ್ತಿಯಾಗಿಲ್ಲ. ಎಲ್ಲೆಂದರಲ್ಲಿ ಕಸದ ರಾಶಿಯೇ ತುಂಬಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಿನ ಬೆಳಗಾದರೇ ಒಂದಲ್ಲ ಒಂದು ತೆರಿಗೆ ಹೆಚ್ಚಿಸಿ, ಜನಸಾಮಾನ್ಯರ ಬದುಕನ್ನು ನರಕಮಾಡಿದೆ ಎಂದು ಆರೋಪಿಸಿದೆ.
ಸಾಕಪ್ಪ ಸಾಕು, ಕಾಂಗ್ರೆಸ್ ಸರ್ಕಾರ ಎಂದಿರುವ ಜೆಡಿಎಸ್, ದರಾಸುರ ಸರ್ಕಾರ ಬೆಲೆ ಏರಿಕೆ ಗ್ಯಾರಂಟಿ ಮೂಲಕವೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಅದು ಯಾವ ಪರಿ ಎಂದರೇ ಕಸ ಸಂಗ್ರಹ ನೆಪದಲ್ಲಿ ಜನಸಾಮಾನ್ಯರಿಂದ ಸಾವಿರಾರು ಕೋಟಿ ರೂ. ವಸೂಲಿಗೆ ಇಳಿದಿದೆ ಎಂದು ಆಪಾದಿಸಿದೆ.
30್ಡ40 ಅಳತೆಯ ನಿವೇಶನಕ್ಕೆ 2024ರಲ್ಲಿ ಘನತ್ಯಾಜ್ಯ ಉಪಕರ 600 ರೂ. ವಿಧಿಸಲಾಗುತ್ತಿತ್ತು. 2025ರಲ್ಲಿ ಹೊಸ ಆದೇಶದ ಪ್ರಕಾರ 30್ಡ40 ಅಳತೆಯ ನಿವೇಶನಕ್ಕೆ ಬರೋಬ್ಬರಿ 3,000 ರೂ.
ವಸೂಲಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.