ಬೆಂಗಳೂರು,ಜು.29-ನಟಿ ರಮ್ಯಾ ಅವರು ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಸೈಬರ್ ಠಾಣೆಗೆ ಪ್ರಕರಣ ನೀಡಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ಡಿಸಿಪಿ ಮಟ್ಟದ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದರು. ನಟಿ ರಮ್ಯಾ ಅವರು ನಿನ್ನೆ ಸಂಜೆ ತಮ ಕಚೇರಿಗೆ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವ ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ನಿನ್ನೆ ದೂರು ನೀಡಿದ್ದಾರೆ.ಡ್ರಗ್ಸ್ ನಿರ್ಮೂಲನೆಗೆ ಪಣ: ಮೈಸೂರಿನಲ್ಲಿ ಡ್ರಗ್‌್ಸ ಫ್ಯಾಕ್ಟರಿ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ ಆ ರೀತಿಯ ಫ್ಯಾಕ್ಟರಿ ಯಾವುದಾದರೂ ಇದೇಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ನಾವು ಅಲರ್ಟ್ ಆಗಿದ್ದೇವೆ. ಡ್ರಗ್‌್ಸನಿರ್ಮೂಲನೆಗೆ ಪಣತೊಟ್ಟಿದ್ದು ಎಲ್ಲಾ ಕಡೆ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದರು.
ನಾಗರಿಕರಿಂದ ಉತ್ತಮ ಬೆಂಬಲ:
ನೂತನವಾಗಿ ಜಾರಿಗೆ ತಂದಿರುವ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಭಾಂದವ್ಯ ಬೆಳೆಯುತ್ತಿದೆ. ಮಾಧ್ಯಮಗಳಲ್ಲೂ ಸಹ ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಾರ್ವಜನಿಕರು ಸ್ಪಂದಿಸುವಂತೆ ಮಾಡಬೇಕೆಂದು ಆಯುಕ್ತರು ಮನವಿ ಮಾಡಿದರು.
- ಕಳ್ಳತನ ಮಾಡಿ ರೈಲು, ಬಸ್ಗಳಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್ ಮನೆಗಳ್ಳರ ಸೆರೆ
- ಮೈಸೂರು : ರೈತನನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿ ಸೆರೆ
- ಪಿಡಿಒ ಕಿರುಕುಳ ಆರೋಪ, ಲೈಬ್ರರಿಯನ್ ಆತ್ಮಹತ್ಯೆ
- ಕಳ್ಳರು ಕದ್ದಿದ್ದ 1949ಕ್ಕೂ ಹೆಚ್ಚು ಮೊಬೈಲ್ಗಳ ವಶ, 42 ಆರೋಪಿಗಳ ಬಂಧನ
- ಆನೇಕಲ್ ಬಳಿ ಅಚ್ಚರಿ ಮೂಡಿಸಿದ ದೇಶದ್ರೋಹಿಗಳ ‘ಪಾಕಿಸ್ತಾನ್ ಜಿಂದಾಬಾದ್’ ವೈಫೈ ಐಡಿ
