Friday, July 18, 2025
Homeಬೆಂಗಳೂರುನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ

ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ

DCP office of South-West Division inaugurated

ಬೆಂಗಳೂರು,ಜು.17-ನಗರದಲ್ಲಿ ಹೊಸದಾಗಿ ಆರಂಭಿಸಿರುವ ನೈರುತ್ಯ ವಿಭಾಗದ ಡಿಸಿಪಿ ಕಚೇರಿಯನ್ನು ಜ್ಞಾನಭಾರತಿ ಪೊಲೀಸ್‌‍ ಠಾಣೆಯ ಕಟ್ಟಡದಲ್ಲಿ ತೆರೆಯಲಾಗಿದೆ.ಈ ಹೊಸ ವಿಭಾಗಕ್ಕೆ ಸಂಚಾರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಿಸಿಪಿ ಅನಿತಾ ಬಿ.ಹದ್ದಣ್ಣವರ್‌ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇವರು ನಿನ್ನೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗಕ್ಕೆ ಏಳು ಪೊಲೀಸ್‌‍ ಠಾಣೆಗಳು ಸೇರ್ಪಡೆಗೊಂಡಿವೆ. ಪಶ್ಚಿಮ ವಿಭಾಗದಿಂದ ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡು ಹಾಗೂ ದಕ್ಷಿಣ ವಿಭಾಗದಿಂದ ಸುಬ್ರಮಣ್ಯಪುರ,ತಲಘಟ್ಟ ಪುರ, ಕೋಣನಕುಂಟೆ, ಕುಮಾರ್‌ಸ್ವಾಮಿ ಲೇಔಟ್‌ ಸೇರಿವೆ.

ಈ ಠಾಣೆಗಳ ವ್ಯಾಪ್ತಿಗಳ ಸಾರ್ವಜನಿಕರು ತಮ ಸಮಸ್ಯೆಗಳಿಗೆ ಜ್ಞಾನಭಾರತಿ ಪೊಲೀಸ್‌‍ ಠಾಣೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸಿಪಿ ಅವರನ್ನು ಸಂಪರ್ಕಿಸಿ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಸರ್ಕಾರ ನಗರದಲ್ಲಿ ವಾಯವ್ಯ ವಿಭಾಗ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಎರಡು ಹೊಸ ವಿಭಾಗಗಳನ್ನು ಸಹ ಆರಂಭಿಸಿದೆ. ನಗರದಲ್ಲಿ ಇದೀಗ ಒಟ್ಟು 11 ಕಾನೂನು ಮತ್ತು ಸುವ್ಯವಸ್ಥೆ ವಿಭಾಗಗಳಿವೆ.

RELATED ARTICLES

Latest News