ಬಲ್ಲಿಯಾ, ಮಾ 24- ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 20 ವರ್ಷದ ಬಾಲೆಯ ಶವ ಪತ್ತೆಯಾಗಿ ಗ್ರಾಮಸ್ಥರು ಆತಂಕಗೊಂಡ ಘಟನೆ ಇಲ್ಲಿನ ಸರಯನ್ ಗುಲಾಬ್ ರೈ ಗ್ರಾಮದಲ್ಲಿ ನಡೆದಿದೆ.
ಜಮೀನು ವಿವಾದದಿಂದಾಗಿ ತನ್ನ ಮಗಳನ್ನು ಕೊಲ್ಲಲಾಗಿದೆ ಎಂದು ತಂದೆ ಶಂಕಿಸಿದ್ದು,ಈ ಬಗ್ಗೆ ದೂರು ದಾಖಲಿಸಿದ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ತಡ ರಾತ್ರಿ ಜಮೀನಿನ ಬಳಿಯ ಮರದಲ್ಲಿ ಅನುಮಾನಾಸ್ಪರ ರೀತಿಯಲ್ಲಿ ಶವ ಕಂಡುಬಂದ ನಂತರ ಗ್ರಾಮದ ಜನರು ಅಲ್ಲಿ ಸೇರಿ ಕಣ್ಣೀರು ಹಾಕಿದ್ದಾರೆ ಕೊಲೆ ಎಂದು ಆರೋಪಿಸಿ ದುರ್ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಬಿಎನ್‌ಎಸ್‌ನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.