ಕೋಲ್ಕತ್ತಾ, ಫೆ- 20 ಮಂಗಳವಾರ ಭಾರತ-ಬಂಗ್ಲಾದೇಶದ ಗಡಿ ಉತ್ತರ ದಿನಾಜ್‍ಪುರ ಜಿಲ್ಲೆಯ ಚೋಪ್ರಾದ ಚೇತನಾಗಚ್ ಗ್ರಾಮದಲ್ಲಿ ಬಳಿ ಒಳಚರಂಡಿ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಮಣ್ಣಿನ ಗುಡ್ಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದು ಇಂದು ಸ್ಥಳಕ್ಕೆ ಬೇಟಿ ನೀಡಿದ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ಭೇಡಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು.
ಕಳೆದ ರಾತ್ರಿ ಕೋಲ್ಕತಾದಿಂದ ಕಿಶನ್‍ಗಂಜ್‍ಗೆ ರೈಲಿನಲ್ಲಿ ಪ್ರಯಾಣಿಸಿ ನಂತರ ಅವರು ರಸ್ತೆ ಮೂಲಕ ಚೋಪ್ರಾಗೆ ತಲುಪಿದ್ದಾರೆ.ಕಳೆದ ಫೆಬ್ರವರಿ 12 ರಂದು, ಚೋಪ್ರಾ ಬ್ಲಾಕ್‍ನ ಚೇತನಾಗಚ್ ಗ್ರಾಮದಲ್ಲಿ ಭೂಮಿ ಅಗೆಯುವ ಯಂತ್ರವು ಕಂದಕವನ್ನು ಅಗೆಯುತ್ತಿದ್ದಾಗ ಮಣ್ಣಿನ ಗುಡ್ಡೆ ಬಿದ್ದ ಸಮೀಪದಲ್ಲಿದ್ದ ಐದು ಮತ್ತು 12 ವರ್ಷದೊಳಗಿನ ನಾಲ್ಕು ಮಕ್ಕಳು ಜೀವಂತ ಸಮಾ„ಯಾದರು. ನಿರ್ಮಾಣ ಕಾರ್ಯವನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ನಡೆಸುತ್ತಿತ್ತು.
ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚು ಬೀಸಿದ ಪತಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಲ್ವರು ಅಪ್ರಾಪ್ತರ ಸಾವಿಗೆ ಬಿಎಸ್‍ಎಫೆ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ್ದಾರೆ ಈಗ ಅದು ರಾಜಕೀಯ ತಿರುವು ಪಡೆದುಕೊಂಡಿತು. ಟಿಎಂಸಿ ನಾಯಕರ ತಂಡ ರಾಜಭವನದಲ್ಲಿ ಬೋಸ್ ಅವರನ್ನು ಭೇಟಿ ಮಾಡಿ ಅಪಘಾತದ ತನಿಖೆಗೆ ಒತ್ತಾಯಿಸಿದ್ದರು ಆದರೆ ಅವರೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.