Monday, September 1, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಜೂಜಾಡಲು ಹಣಕ್ಕಾಗಿ ಪತ್ನಿಯನ್ನು ಕೊಂದಿದ್ದ ಪತಿಗೆ ಮರಣದಂಡನೆ ಶಿಕ್ಷೆ

ಜೂಜಾಡಲು ಹಣಕ್ಕಾಗಿ ಪತ್ನಿಯನ್ನು ಕೊಂದಿದ್ದ ಪತಿಗೆ ಮರಣದಂಡನೆ ಶಿಕ್ಷೆ

Death penalty for husband who killed wife for gambling money

ಮೈಸೂರು,ಆ.31– ಜೂಜಾಡಲು ಹೆಚ್ಚು ಹಣ ತರುವಂತೆ ಒತ್ತಾಯಿಸಿ ಪತ್ನಿಯನ್ನು ಕೊಂದಿದ್ದ ಪತಿಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪ ಅವರು, ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಮಹೇಶ್‌ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಈತನಿಗೆ ನ್ಯಾಯಾಲಯ ಒಂದು ಲಕ್ಷ ರೂ. ದಂಡ ವಿಧಿಸಿದೆ.ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಶಿಲ್ಪ ಮತ್ತು ಮಹೇಶ ಮದುವೆ ಆದ ಹೊಸದರಲ್ಲಿ ಚೆನ್ನಾಗಿಯೇ ಸಂಸಾರ ಮಾಡಿಕೊಂಡಿದ್ದರು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಆದರೆ ಮಹೇಶ ಇಸ್ಪೀಟ್‌ ಆಟದ ಚಟಕೆ ಬಿದ್ದು ಬಹಳ ಸಾಲ ಮಾಡಿಕೊಂಡಿದ್ದ, ಸದಾ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಹಿಂಸೆ ಮಾಡುತ್ತಿದ್ದ ಜೊತೆಗೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದ.

ಈ ಬಗ್ಗೆ ಶಿಲ್ಪ ತಂದೆಗೆ ವಿಷಯ ತಿಳಿಸಿದ್ದಳು. ನಂತರ ರಾಜೀ ಪಂಚಾಯಿತಿ ಮಾಡಿ ತಂದೆ ಸಮಾಧಾನ ಮಾಡಿದ್ದರು.ಆದರೂ ಮಹೇಶ ತನ್ನ ಚಟ ಬಿಟ್ಟಿರಲಿಲ್ಲ, ಜಮೀನು ಮಾರಾಟ ಮಾಡುತ್ತೇನೆ ಸಹಿ ಹಾಕು ಎಂದು ಪೀಡಿಸುತ್ತಿದ್ದ, ಹಾಗಾಗಿ ಶಿಲ್ಪ 14-4-2024 ರಂದು ತವರಿಗೆ ಬಂದು ವಿಷಯ ತಿಳಿಸಿದಳು ತಂದೆ ಈ ಬಗ್ಗೆ ಶಿಲ್ಪಳಿಗೆ ಸಮಾಧಾನ ಮಾಡಿ ಕಳುಹಿಸಿದ್ದರು.
ಮರುದಿನವೂ ಕೂಡ ಜಮೀನು ಮಾರಾಟಕ್ಕೆ ಸಹಿ ಹಾಕುವಂತೆ ಪತಿ ಒತ್ತಾಯಿಸಿದ್ದಾನೆ. ಆಕೆ ಒಪ್ಪದಿದ್ದಾಗ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ.

ಶಿಲ್ಪ ಒಂದು ವಾರದಿಂದ ಗಾರ್ಮೆಂಟ್‌್ಸ ಕೆಲಸಕ್ಕೆ ಹೋಗುತ್ತಿದ್ದಳು. ಆದರೂ ಅಳಿಯ ಮಹೇಶ್‌ ಬಿಡದೆ ಮತ್ತೆ ತೊಂದರೆ ಕೊಟ್ಟಿದ್ದಾನೆ ಎಂದು ಆಕೆಯ ತಂದೆ ತಿಳಿಸಿದ್ದಾರೆ.ನಂತರ 2024ರ ಏಪ್ರಿಲ್‌15ರಂದು ಶಿಲ್ಪ ಗಾರ್ಮೆಂಟ್ಸ್ ಗೆ ಹೋಗುವುದಾಗಿ ಹೇಳಿ ಹೋಗಿದ್ದಳು. ಆದರೆ ಆಕೆಯನ್ನು ಯಾರೊ ಮಚ್ಚಿನಲ್ಲಿ ಕೊಚ್ಚಿ ಓಡಿ ಹೋಗಿದ್ದರು. ಆದರೆ ಈ ಕೃತ್ಯವನ್ನು ಅಳಿಯನೇ ಮಾಡಿದ್ದಾನೆ ಎಂದು ಶಿಲ್ಪಾಳ ತಂದೆ ಆಲನಹಳ್ಳಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.

ಶಿಲ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಅಲನಹಳ್ಳಿ ಠಾಣೆ ಪೊಲೀಸ್‌‍ ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರೂಪ ಅವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಮಹೇಶನೇ ಕೊಲೆ ಮಾಡಿರುವುದು ಸಾಬೀತಾದ ಕಾರಣ ಆತನಿಗೆ ಮರಣ ದಂಡನೆ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

RELATED ARTICLES

Latest News