ಮುಂಬೈ,ನ.12- ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್ಗಢದಲ್ಲಿ ಬಂಧಿಸಲಾಗಿದೆ.ಶಾರುಖ್ಗೆ ಕರೆ ಮಾಡಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಕ್ಕಾಗಿ ಮೊಹಮದ್ ಫೈಜಾನ್ ಖಾನ್ ಎಂಬ ವಕೀಲನನ್ನು ಛತ್ತೀಸ್ಗಢದ ರಾಯ್ಪುರದ ಅವರ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಪೊಲೀಸರ ಮುಂದೆ ಹಾಜರಾಗಲು ವಿಫಲವಾದ ನಂತರ ಅವರನ್ನು ಬಂಧಿಸಲಾಯಿತು. ಕಳೆದ ವಾರ ಬೆದರಿಕೆ ಕರೆ ಮಾಡಲು ಬಳಸಲಾದ ತನ್ನ ಮೊಬೈಲ್ ಫೋನ್ನ್ನು ಯಾರೋ ಕದ್ದಿದ್ದಾರೆ ಎಂದು ಅವರು ಹೇಳಿದ್ದರು.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 308(4) (ಸಾವಿನ ಬೆದರಿಕೆ ಅಥವಾ ಗಂಭೀರ ಗಾಯದ ಬೆದರಿಕೆಗಳನ್ನು ಒಳಗೊಂಡ ಸುಲಿಗೆ) ಮತ್ತು 351(3)(4) (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಕೊಲೆ ಬೆದರಿಕೆ ಬಂದಿತ್ತು, ಇದಾದ ಬಳಿಕ ಶಾರುಖ್ಗೆ ವೈಪ್ಲಸ್ ಭದ್ರತೆ ಕಲ್ಪಿಸಲಾಗತ್ತು. ಕಳೆದ ವಾರ, ಸಲಾನ್ ಖಾನ್ಗೆ ಜೀವ ಬೆದರಿಕೆ ಹಾಕಿದ ನಂತರ ರಾಜಸ್ಥಾನದ 32 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್್ಸ ಬಿಷ್ಣೋಯ್ ಅವರಿಂದ ಬೆದರಿಕೆಯನ್ನು ಸ್ವೀಕರಿಸಿದ ಒಂದು ದಿನದ ಬಳಿಕ ದೇವಸ್ಥಾನದಲ್ಲಿ ಸಲಾನ್ ಖಾನ್ ಕ್ಷಮೆಯಾಚಿಸಬೇಕು ಅಥವಾ 5 ಕೋಟಿ ರೂ. ನೀಡಬೇಕು, ಇಲ್ಲವಾದರೆ ಬಾಬಾ ಸಿದ್ದಿಕಿಗಿಂತಲೂ ಭೀಕರ ಸಾವು ನಿಮದಾಗುತ್ತದೆ ಎಂದು ಬೆದರಿಕೆ ಹಾಕಿದ್ದರು.
ಬಾಲಿವುಡ್ ನಟ ಸಲಾನ್ ಖಾನ್ ಹಲವು ದಿನಗಳಿಂದ ಗ್ಯಾಂಗ್ಸ್ಟ್ರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಲಾನ್ ಹೆಸರಿನಲ್ಲಿ ಒಂದರ ಹಿಂದೆ ಒಂದರಂತೆ ಬೆದರಿಕೆಗಳು ಬರುತ್ತಿವೆ. ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪೊಲೀಸರು ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸುತ್ತಿದ್ದಾರೆ.