Tuesday, July 22, 2025
Homeರಾಷ್ಟ್ರೀಯ | Nationalಬಾಂಗ್ಲಾದೇಶದಲ್ಲಿ ಯುದ್ದ ವಿಮಾನ ಅಪಘಾತ ; ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿಕೆ

ಬಾಂಗ್ಲಾದೇಶದಲ್ಲಿ ಯುದ್ದ ವಿಮಾನ ಅಪಘಾತ ; ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿಕೆ

Death toll in Bangladesh Air Force jet crash rises to 27

ಢಾಕಾ, ಜು.22- ಬಾಂಗ್ಲಾದೇಶ ವಾಯುಪಡೆಯ ತರಬೇತಿ ಯುದ್ದ ವಿಮಾನವು ಢಾಕಾದಲ್ಲಿ ಶಾಲಾ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ಏರಿದೆ.

ಚೀನಾದಲ್ಲಿ ತಯಾರಾದ ತರಬೇತಿ ಯುದ್ದ ವಿಮಾನವಾದ ಎಫ್ -7 ಬಿಜೆಐ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಯಾಂತ್ರಿಕ ದೋಷ ಅನುಭವಿಸಿ ಢಾಕಾದ ಉತ್ತರ ಪ್ರದೇಶದ ದಿಯಾಬಾರಿಯಲ್ಲಿರುವ ಮೈಲ್‌ಸ್ಟೋನ್ ಶಾಲೆ ಮತ್ತು ಕಾಲೇಜಿನ ಎರಡು ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿತು. ಈಗ ಸಾವಿನ ಸಂಖ್ಯೆ 27 ಕ್ಕೆ ಏರಿದೆ, ಅವರಲ್ಲಿ 25 ಮಕ್ಕಳು ಎಂದು ಸರ್ಕಾರದ ವಿಶೇಷ ಸಲಹೆಗಾರ ಸೈದೂರ್ ರೆಹಮಾನ್ ವರದಿಗಾರರಿಗೆ ತಿಳಿಸಿದರು.

ಸುಮಾರು 170 ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ.ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಲ್ಲಿ ಹತಾಶೆ ಮತ್ತು ನೋವಿನ ಗೋಳಾಟಗಳು ಪ್ರತಿಧ್ವನಿಸುತ್ತವೆ. ಆರಂಭದಲ್ಲಿ ಇಪ್ಪತ್ತು ಸಾವುಗಳು ವರದಿಯಾಗಿವೆ ಮತ್ತು ರಾತ್ರಿ ಏಳು ಮಂದಿ ಸಾವನ್ನಪ್ಪಿದರು.

ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಪೈಲಟ್ ಅನ್ನು ಫೈಟ್ ಲೆಫ್ಟಿನೆಂಟ್ ಮೊಹಮ್ಮದ್ ಟೋಕಿರ್ ಇಸ್ಲಾಂ ಎಂದು ತಿಳಿದುಬಂದಿದೆ.ಅಪಘಾತದಲ್ಲಿ ಸಾವನ್ನಪ್ಪಿದವರ ಸ್ಮರಣಾರ್ಥಕ್ಕಾಗಿ ಸರ್ಕಾರ ಇಂದು ಶೋಕಾಚರಣೆ ದಿನವನ್ನು ಘೋಷಿಸಿದೆ.

ದೇಶಾದ್ಯಂತ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು ಎಂದು ಮುಖ್ಯ ಸಲಹೆಗಾರರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.ಗಾಯಗೊಂಡವರು ಮತ್ತು ಮೃತರಿಗಾಗಿ ದೇಶದ ಎಲ್ಲಾ ಧಾರ್ಮಿಕ ಪೂಜಾ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಆಯೋಜಿಸಲಾಗಿದೆ.

RELATED ARTICLES

Latest News