ಮ್ಯಾಂಡಲೆ,ಮಾ.31- ಮ್ಯಾನಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 1,700ಕ್ಕಿಂತ ಹೆಚ್ಚಿದೆ. ಅವಶೇಷಗಳಿಂದ ಶವಗಳನ್ನು ಹೊರತೆಗೆ ಯಲಾಗಿದ್ದು, ಘಟನೆಯಲ್ಲಿ ಇನ್ನೂ 3,400 ಮಂದಿ ಗಾಯಗೊಂಡಿದ್ದಾರೆ ಮತ್ತು 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಕರ್ತರು ಕುಸಿದ ಕಟ್ಟಡಗಳ ಅವಶೇಷಗಳನ್ನು ಅಗೆದು ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. . ಕನಿಷ್ಠ 139 ಜನರು ಕಾಣೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಬ್ಯಾಂಕಾಕ್‌ನಲ್ಲಿ ಸುಮಾರು 100 ಸಾವುಗಳು ದೃಢಪಟ್ಟಿವೆ.
ಹಲವಾರು ಕಟ್ಟಡಗಳು, ಸೇತುವೆಗಳು ನೆಲಸಮವಾಗಿದೆ. ಕಟ್ಟಡಗಳ ಅವಶೇಷಗಳ ಅಡಿಯಿಂದ ಈಗಾಗಲೇ ಹಲವು ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ. ಸಾವಿನ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸಂವಹನ ವ್ಯವಸ್ಥೆ ಕಡಿತವಾಗಿರುವುದರಿಂದ ವಿಪತ್ತಿನ ನಿಜವಾದ ಪ್ರಮಾಣ ನಿಧಾನವಾಗಿ ಗೊತ್ತಾಗುತ್ತಿದೆ. ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.
ಸೇನೆಯು ಈ ಹಿಂದೆ 1,644 ಮಂದಿ ಸಾವನ್ನಪ್ಪಿರುವುದಾಗಿ ವರದಿ ಮಾಡಿತ್ತು. ಆದರೆ ನಿರ್ದಿಷ್ಟ ಅಂಕಿಅಂಶಗಳನ್ನು ನೀಡಿರಲಿಲ್ಲ. ಕಳೆದ ಶುಕ್ರವಾರ ಮಧ್ಯಾಹ್ನ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ನೈಪಿಟಾವ್ ಮತ್ತು ಎರಡನೇ ದೊಡ್ಡ ನಗರವಾದ ಮ್ಯಾಂಡಲೆ ಸೇರಿದಂತೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಸರ್ಕಾರಿ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ಟುನ್ ಸರ್ಕಾರಿ ಎಂಆರ್‌ಟಿವಿಗೆ ತಿಳಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲಿ ದೇಶದ ಮುಸ್ಲಿಂ ಅಲ್ಪಸಂಖ್ಯಾತರಿಗೆ ಶುಕ್ರವಾರ ಪ್ರಾರ್ಥನೆಯ ಸಮಯವಾಗಿತ್ತು. ಈ ವೇಳೆ ?ತು ಮಸೀದಿಗಳು ಕುಸಿದು ಸುಮಾರು 700 ಆರಾಧಕರು ಸಾವನ್ನಪ್ಪಿದ್ದಾರೆ ಎಂದು ವಸಂತ ಕ್ರಾಂತಿ ಮ್ಯಾನಾರ್ ಮುಸ್ಲಿಂ ನೆಟ್‌ವರ್ಕ್‌ನ ಸ್ಟೀರಿಂಗ್ ಸಮಿತಿಯ ಸದಸ್ಯ ತುನ್ ಕಿ ಹೇಳಿದ್ದಾರೆ.
ಭೂಕಂಪ ಸಂಭವಿಸಿದಾಗ ಸುಮಾರು 60 ಮಸೀದಿಗಳು ಹಾನಿಗೊಳಗಾಗಿವೆ. ಐರಾವಡ್ಡಿ ಆನ್‌ಲೈನ್ ಸುದ್ದಿ ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊಗಳು ಭೂಕಂಪದ ಸಮಯದಲ್ಲಿ ಹಲವಾರು ಮಸೀದಿಗಳು ಉರುಳಿ ಬಿದ್ದಿದ್ದು, ಜನರು ಪ್ರಾಣ ಉಳಿಸಿಕೊಳ್ಳಲು ಆ ಪ್ರದೇಶಗಳಿಂದ ಓಡಿಹೋಗುವುದನ್ನು ತೋರಿಸಿದೆ.
ಹಾನಿಗೊಳಗಾದ ಪ್ರದೇಶಗಳಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡ ಜನರ ನಿಜವಾದ ಸಂಖ್ಯೆಯು ಅಧಿಕೃತ ಅಂಕಿಅಂಶಗಳಿಗಿಂತ ಹಲವು ಪಟ್ಟು ಹೆಚ್ಚು ಎಂದು ಭಾವಿಸಲಾಗಿದೆ, ಆದರೆ ದೂರಸಂಪರ್ಕ ಸ್ಥಗಿತಗೊಂಡಿರುವ ಕಾರಣ, ಅನೇಕ ಪ್ರದೇಶಗಳಲ್ಲಿನ ಹಾನಿಯ ಬಗ್ಗೆ ತಿಳಿದಿಲ್ಲ. ಈ ಹಂತದಲ್ಲಿ ವಿನಾಶದ ಪ್ರಮಾಣವು ನಮಗೆ ನಿಜವಾಗಿಯೂ ಸ್ಪಷ್ಟವಾಗಿಲ್ಲ ಎಂದು ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಮಿಟಿಗಾಗಿ ಮ್ಯಾನಾರ್‌ನಲ್ಲಿನ ಕಾರ್ಯಕ್ರಮಗಳ ಉಪ ನಿರ್ದೇಶಕ ಲಾರೆನ್ ಎಲ್ಲೆರಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.
ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಇದ್ದು, ತುರ್ತು ವೈದ್ಯಕೀಯ ಆರೈಕೆ, ಮಾನವೀಯ ಸರಬರಾಜು ಮಾಡುತ್ತಿದ್ದಾರೆ. 80% ಕಟ್ಟಡಗಳು ಕುಸಿದಿವೆ. ಆದರೆ ದೂರಸಂಪರ್ಕ ನಿಧಾನವಾಗಿರುವುದರಿಂದ ಅದು ಸುದ್ದಿಯಲ್ಲಿಲ್ಲ. ಸುಮಾರು 1.5 ಮಿಲಿಯನ್ ಜನಸಂಖ್ಯೆಯಿರುವ ನಗರದ ಮ್ಯಾಂಡಲೇ ಬಳಿ ಭೂಕಂಪವು ಕೇಂದ್ರೀಕೃತವಾಗಿದ್ದು, ಕಟ್ಟಡಗಳನ್ನು ನೆಲಸಮಗೊಳಿಸಿತ್ತು ಮತ್ತು ನಗರದ ವಿಮಾನ ನಿಲ್ದಾಣದಂತಹ ಇತರ ಮೂಲಸೌಕರ್ಯಗಳನ್ನು ಹಾನಿಗೊಳಿಸಿದೆ.
ಭಾರತದಿಂದ ಆಪರೇಷನ್ ಬ್ರಹ: ಪ್ರಕೃತಿಯ ಅಟ್ಟಹಾಸಕ್ಕೆ ತುತ್ತಾಗಿರುವ ಮ್ಯಾನಾರ್‌ಗೆ ಹಲವು ದೇಶಗಳು ನೆರವಿನಹಸ್ತ ಚಾಚಿದ್ದು, ಭಾರತ ಈಗಾಗಲೇ ಟೆಂಟ್‌ಗಳು, ಕಂಬಳಿಗಳು, ನೆಲಹಾಸಿಗೆಗಳು, ಆಹಾರ ಪೊಟ್ಟಣಗಳು, ನೈರ್ಮಲ್ಯ ಕಿಟ್‌ಗಳು, ಜನರೇಟರ್‌ಗಳು ಹಾಗೂ ಅಗತ್ಯ ಔಷಧಿಗಳನ್ನು ಒದಗಿಸಿದೆ. 15 ಟನ್ ಪರಿಹಾರ ಸಾಮಗ್ರಿಗಳ ಮೊದಲ ಕಂತು ಯಾಂಗೋನ್‌ನಲ್ಲಿ ಬಂದಿಳಿದಿದ್ದು, ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೋನ್ ಮುಖ್ಯಮಂತ್ರಿಯು ಸೋ ಥೀನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಭಾರತದಿಂದ 80 ಸದಸ್ಯರ ಎನ್‌ಡಿಆರ್‌ಎಫ್ ತಂಡದೊಂದಿಗೆ ಸಿ 130 ವಿಮಾನ ಕೂಡ ಮ್ಯಾನಾರ್‌ಗೆ ಶನಿವಾರ ಬಂದಿಳಿದಿದ್ದು, ಎನ್‌ಡಿಆರ್‌ಎಫ್ ತಂಡವನ್ನು ಮ್ಯಾನಾರ್ ಮೋಫಾದಲ್ಲಿರುವ ಭಾರತೀಯ ರಾಯಭಾರಿ ಮೌಂಗ್ ಮೌಂಗ್ ಲಿನ್ ಬರಮಾಡಿಕೊಂಡರು. ಭೂಕಂಪದ ನಂತರ ವಿಮಾನ ನಿಲ್ದಾಣಗಳು ಇನ್ನೂ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ, ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಮಂಡಲೆಗೆ ತೆರಳಿದೆ. ೞಭೂಕಂಪದ ಬಳಿಕ ಮ್ಯಾನಾರ್ ರಾಜಧಾನಿಗೆ ರಕ್ಷಣಾ ಸಿಬ್ಬಂದಿಯನ್ನು ಕರೆತಂದ ಮೊದಲ ದೇಶ ಭಾರತ ಎಂದು ವಿದೇಶಾಂಗ ಸಚಿವಾಲಯದ ಹೇಳಿದೆ.
ಆಪರೇಷನ್ ಬ್ರಹದ ಭಾಗವಾಗಿ 60 ಪ್ಯಾರಾಫೀಲ್ಡ್ ಆಂಬ್ಯುಲೆನ್ಸ್ ಗಳು ಮ್ಯಾನಾರ್‌ಗೆ ತೆರಳಲು ಸಿದ್ಧವಾಗುತ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಮಂಡಲೆಯಲ್ಲಿ ಭಾರತ ಫೀಲ್ಡ್ ಆಸ್ಪತ್ರೆಯನ್ನು ಸ್ಥಾಪಿಸಲು ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ ವೈದ್ಯರು ಸೇರಿದಂತೆ 118 ತಜ್ಞರ ತಂಡ ಶನಿವಾರ ಸಂಜೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯಮಾಹಿತಿನೀಡಿದೆ.