Wednesday, November 27, 2024
Homeರಾಜಕೀಯ | Politicsಮೂರೂ ಕ್ಷೇತ್ರಗಳಲ್ಲಿ ಸೋಲು : ವಿಜಯೇಂದ್ರ ನಾಯಕತ್ವದ ಮೇಲೆ ಕವಿದ ಕಾರ್ಮೋಡ

ಮೂರೂ ಕ್ಷೇತ್ರಗಳಲ್ಲಿ ಸೋಲು : ವಿಜಯೇಂದ್ರ ನಾಯಕತ್ವದ ಮೇಲೆ ಕವಿದ ಕಾರ್ಮೋಡ

Defeat in all three constituencies in Vijayendra's leadership

ಬೆಂಗಳೂರು, ನ.23- ಪ್ರತಿಷ್ಠೆಯ ಕಣವಾಗಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನೇತೃತ್ವದ ಎನ್ಡಿಎ ಮೈತ್ರಿ ಕೂಟ ಹೀನಾಯ ಸೋಲು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ನಾಯಕತ್ವಕ್ಕೆ ಕಾರ್ಮೋಡ ಆವರಿಸಿದೆ.

ಉಪಚುನಾವಣೆಯನ್ನು ಗೆದ್ದು ಪಕ್ದದಲ್ಲಿ ಇನ್ನಷ್ಟು ಪ್ರಾಬಲ್ಯ ಸಾಧಿಸಬೇಕೆಂಬ ವಿಜಯೇಂದ್ರ ಮಹದಾಸೆಗೆ ಉಪಚುನಾವಣಾ ಫಲಿತಾಂಶ ತೀವ್ರ ಹಿನ್ನೆಡೆಯುಂಟಾಗಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಕ್ಷದೊಳಗಿನ ವಿರೋಧಿ ಬಣ ಕೂಗು ಎಬ್ಬಿಸುವ ಸಾಧ್ಯತೆ ಇದೆ.

ಈ ಚುನಾವಣೆಯಲ್ಲಿ ಗೆದಿದ್ದರೆ ವಿಜಯೇಂದ್ರ ನಾಯಕತ್ವಕ್ಕೆ ಮತದಾರರನ್ನು ಮನ್ನಣೆ ಇದೆ ಎಂದು ಬಿಂಬಿಸಲು ಪಕ್ಷದೊಳಗಿನ ಒಂದು ಗುಂಪು ವ್ಯವಸ್ಥಿತವಾಗಿ ರಣತಂತ್ರ ರೂಪಿಸಿತ್ತು. ಅಂದರೆ ಬಿಜೆಪಿ ಗೆಲುವಿನ ಸಂಪೂರ್ಣ ಕೊಡುಗೆಯನ್ನು ವಿಜಯೇಂದ್ರ ಮತ್ತು ಯಡಿಯೂರಪ್ಪ ನವರ ಹೆಗಲಿ ಕಟ್ಟಿ ಪಕ್ಷದೊಳಗೆ ಪ್ರಾಬಲ್ಯ ಸಾಧಿಸಲು ಸದ್ದಿಲ್ಲವೆ ಮುಂದಾಗಿತ್ತು. ಈಗ ಫಲಿತಾಂಶ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ವಿಜಯೇಂದ್ರ ರಾಜಕೀಯ ಭವಿಷ್ಯವೇ ಡೋಲಾಯನಮನ ಸ್ಥಿತಿಗೆ ತಲುಪಿದೆ.

ಅದರಲ್ಲೂ ಲಿಂಗಾಯಿತರ ಪ್ರಾಬಲ್ಯವಿರುವ ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಲಿಂಗಾಯಿತರ ಪ್ರಾಬಲ್ಯವಿದ್ದರೂ ಆ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅವರು ವಿಫಲರಾಗಿದ್ದಾರೆಂಬುವುದು ಫಲಿತಾಂಶದಿಂದಲೇ ಸಾಬೀತಾಗಿದೆ.

ವಿಶೇಷವಾಗಿ ಪಂಚಮಶಾಲಿ ಸಮುದಾಯದ ಶಿಗ್ಗಾವಿಯಲ್ಲಿ ವಿಜಯೇಂದ್ರ ಹಲವರ ದಿನಗಳ ಕಾಲ ಪ್ರಚಾರ ನಡೆಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮಾಯಿ ಸೇರಿದಂತೆ ಹಲವು ನಾಯಕರುಗಳು ಈ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ.

ಇದೀಗ ಬಿಜೆಪಿಯ ಖಾಯಂ ಭಿನ್ನಮತಿಯ ನಾಯಕರೆನಿಸಿದ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಧುಬಂಗಾರಪ್ಪ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ್, ಅಣ್ಣ ಸಾಹೇಬ್ ಜೊಲ್ಲೆ ಸೇರಿದಂತೆ ಮತ್ತಿತರರು ಸಕ್ರಿಯರಾಗುತ್ತಿದ್ದು, ವಿಜಯೇಂದ್ರ ಹಠಾವೋ, ಬಿಜೆಪಿ ಬಜಾವೋ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ವಿಜಯೇಂದ್ರ ಅವರ ನಾಯಕತ್ವವನ್ನು ಕೇಂದ್ರ ನಾಯಕರು ಕಿತ್ತುಹಾಕಲಿದ್ದಾರೆಂದು ವಿರೋಧಿ ಬಣ ಹೇಳುತ್ತಲೇ ಬಂದಿತ್ತು. ಈಗ ಫಲಿತಾಂಶದ ಹಿನ್ನಡೆಯನ್ನು ವಿಜಯೇಂದ್ರ ಅವರೇ ಹೋರಬೇಕಾಗಿದ್ದು, ಅಧ್ಯಕ್ಷದ ಸ್ಥಾನ ಉಳಿಯುತ್ತದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಮೂಲಗಳ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ದೆಹಲಿ ನಾಯಕರುಗಳು ವಿಜಯೇಂದ್ರ ನಾಯಕತ್ವವನ್ನು ಪಲ್ಲಟ್ಟಗೊಳಿಸುವಂತಹ ದುಸ್ಸಾಹಸಕ್ಕೆ ಕೈಹಾಕುವ ಸಾಧ್ಯತೆಗಳು ಇಲ್ಲ ಎನ್ನುತ್ತಿವೆ.ಆದರೆ ಪಕ್ಷದೊಳಗೆ ಇನ್ನು ಮುಂದೆ ಯಾವುದೇ ತೀರ್ಮಾನವಾಗಬೇಕಾದರೂ ಎಲ್ಲಾ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುನ್ನಡೆಯಬೇಕೆಂಬ ಕಠಿಣ ನಿರ್ಬಂಧಗಳನ್ನು ಹಾಕಲು ವರಿಷ್ಠರು ತೀರ್ಮಾನಿಸಿದ್ದಾರೆ.

ವಿಜಯೇಂದ್ರ ವಿರೋಧ ಪಕ್ಷಗಳ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆಂಬ ವಿರೋಧಿ ಬಣದ ಕೂಗು ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ್ದು, ಮೊದಲೇ ಮನೆಯೊಂದು ಮೂರು ಬಾಗಿಲು ಎಂಬಂತಿರುವ ಬಿಜೆಪಿಗೆ ಉಪಚುನಾವಣಾ ಫಲಿತಾಂಶ ಭಾರೀ ಆಘಾತವನ್ನು ನೀಡುವುದರಲ್ಲಿ ಅಚ್ಚರಿಯಿಲ್ಲ.

ಮುಂದಿನ ದಿನಗಳಲ್ಲಿ ವಿಜಯೇಂದ್ರ ಹಣಿಯಲು ಯತ್ನಾಳ್ ಮತ್ತು ಅವರ ತಂಡ ಚುರುಕಾಗಲಿದ್ದು, ಆರ್ಎಸ್ಎಸ್ ಹಿನ್ನೆಲೆಯುಳ್ಳವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕೆಂಬ ಬೇಡಿಕೆಯನ್ನು ಇಟ್ಟರೂ ಅಚ್ಚರಿಯಿಲ್ಲ. ಬೇಡಿಕೆಯನ್ನು ಇಡಬಹುದು.ಸಾಮಾನ್ಯವಾಗಿ ಉಪಚುನಾವಣೆ ಫಲಿತಾಂಶ ಆಡಳಿತಾರೂಢ ಪಕ್ಷದ ಕಡೆಯೇ ಮತದಾರನ ಒಲವು ಇರುತ್ತದೆ ಎಂಬುದನ್ನು ಬಿಂಬಿಸಿ ವಿಜಯೇಂದ್ರ ಬದಲಾವಣೆ ಮಾಡದಂತೆ ಅವರ ಇನ್ನೊಂದು ಬಣ ರಣತಂತ್ರ ರೂಪಿಸಿದೆ.

RELATED ARTICLES

Latest News