ನವದೆಹಲಿ, ಮೇ 13– ಭಾರತ- ಪಾಕ್ ಗಡಿಭಾಗದ ಸೂಕ್ಷ್ಮ ಪ್ರದೇಶಗಳಿಗೆ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಅವರು ಪಾಕ್ ಗಡಿ ಪ್ರದೇಶದಲ್ಲಿ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಯ ವಿಮರ್ಶೆ ನಡೆಸಿದರು ಎಂದು ವರದಿಯಾಗಿದೆ.
ರಕ್ಷಣಾ ಸಚಿವರ ಜೋತೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚವ್ಹಾಣ್, ಸೇನೆಯ ಹಿರಿಯ ಅಧಿಕಾರಿ ಜನರಲ್ ಉಪೇಂದ್ರ ದ್ವಿವೇದಿ, ನೌಕಾದಳದ ಮುಖ್ಯಸ್ಥ ಅಡ್ತಿರಲ್ ದಿನೇಶ ಕೆ. ತ್ರಿಪಾರಿ ಮತ್ತು ಡಿಫೆನ್ಸ್ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಜರಿದ್ದರು.
ಗಡಿ ಪರಿಶೀಲನೆ ನಂತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಕ್ಷಣಾ ಸಚಿವರು ಪಶ್ಚಿಮ ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯ ಮತ್ತು ಸಂಬಂಧಿಸಿದ ವಿಷಯಗಳ ವಿಮರ್ಶೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.