Sunday, July 7, 2024
Homeರಾಷ್ಟ್ರೀಯದೆಹಲಿ ವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿತದಲ್ಲಿ ರಾಜಕೀಯ ಕಚ್ಚಾಟ : ಸ್ಪಷ್ಟನೆ ನೀಡಿದ L&T ಕಂಪನಿ

ದೆಹಲಿ ವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿತದಲ್ಲಿ ರಾಜಕೀಯ ಕಚ್ಚಾಟ : ಸ್ಪಷ್ಟನೆ ನೀಡಿದ L&T ಕಂಪನಿ

ನವದೆಹಲಿ,ಜೂ.29– ಭಾರೀ ಮಳೆಗೆ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿದು ಕ್ಯಾಬ್‌ ಚಾಲಕ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ಬಿಜೆಪಿ ಕಾಂಗ್ರೆಸ್‌‍ ಮಧ್ಯೆ ಕೆಸರೆರಚಾಟ ಆರಂಭವಾದ ಬೆನ್ನಲ್ಲೇ ಮೂಲ ಸೌಕರ್ಯ ಕಂಪನಿ ಎಲ್‌ ಆಂಡ್‌ ಟಿ ಸ್ಪಷ್ಟನೆ ನೀಡಿದೆ.

ಸ್ಪಷ್ಟನೆಯಲ್ಲಿ ಕುಸಿದ ರಚನೆಯನ್ನು ನಿರ್ಮಿಸಿಲ್ಲ ಅಥವಾ ಅದರ ನಿರ್ವಹಣೆಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ. ಕುಸಿದು ಬಿದ್ದ ಭಾಗವನ್ನು ಮತ್ತೊಂದು ಕಂಪನಿಯು 2009 ರಲ್ಲಿ ನಿರ್ಮಿಸಿದೆ ಎಂದು ತಿಳಿಸಿದೆ.

ದೆಹಲಿ ಇಂಟರ್‌ನ್ಯಾಶನಲ್‌‍ ಏರ್‌ಪೋರ್ಟ್‌ ಲಿಮಿಟೆಡ್‌ನ ಕೋರಿಕೆಯ ಮೇರೆಗೆ, 2019ರಲ್ಲಿ ಟರ್ಮಿನಲ್‌ 1ರ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಟರ್ಮಿನಲ್‌ ವಿಸ್ತೃತ ಭಾಗದಿಂದ ಸರಿಸುಮಾರು 110 ಮೀಟರ್‌ ದೂರದಲ್ಲಿ ಕುಸಿತವು ಸಂಭವಿಸಿದೆ.

ಹೊಸದಾಗಿ ನಿರ್ಮಾಣದ ವಿಸ್ತೃತ ಭಾಗದ ಮೇಲೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನಾಗರಿಕ ವಿಮಾನ ಸಚಿವ ರಾಮ್‌ಮೋಹನ್‌‍ ನಾಯ್ಡು, ವೈಜ್ಞಾನಿಕ ಕಾರಣ ಹುಡುಕಲು ಸೂಚಿಸಿದ್ದೇನೆ.

ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗೆ ನಿರ್ದೇಶಿಸಿದ್ದೇನೆ. ಮೃತನ ಕುಟುಂಬಕ್ಕೆ 20 ಲಕ್ಷ ಹಾಗೂ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

Latest News