Thursday, February 27, 2025
Homeರಾಷ್ಟ್ರೀಯ | Nationalಮೋದಿ ಅಮೆರಿಕ ಪ್ರವಾಸದಿಂದ ವಾಪಸ್ಸಾದ ಬಳಿಕ ದೆಹಲಿ ಸಿಎಂ ಪದಗ್ರಹಣ

ಮೋದಿ ಅಮೆರಿಕ ಪ್ರವಾಸದಿಂದ ವಾಪಸ್ಸಾದ ಬಳಿಕ ದೆಹಲಿ ಸಿಎಂ ಪದಗ್ರಹಣ

Delhi CM to take oath after Modi returns from US trip

ನವದೆಹಲಿ, ಫೆ.9– ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಿಂದ ಹಿಂದಿರುಗಿದ ನಂತರ ದೆಹಲಿಯ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರವನ್ನು ಮುನ್ನಡೆಸಲು ಬಿಜೆಪಿ ತನ್ನ ನಾಯಕನನ್ನು ಹುಡುಕಲು ಚರ್ಚೆ ನಡೆಸುತ್ತಿದ್ದು, ಮೋದಿ ವಾಪಸ್ಸಾದ ನಂತರ ಹೊಸ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿದುಬಂದಿದೆ.ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಮೋದಿ ಅವರು, ಫೆ.13 ರಂದು ವಾಪಸ್ಸಾಗಲಿದ್ದು, ಆ ನಂತರವೇ ದೆಹಲಿ ಸಿಎಂ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

79 ಸದಸ್ಯ ಬಲದ ಅಸೆಂಬ್ಲಿಯಲ್ಲಿ 48 ಸ್ಥಾನಗಳನ್ನು ಗಳಿಸುವ ಮೂಲಕ 27 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿದ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿದೆ. ಒಂದು ದಶಕದಿಂದ ನಗರದಲ್ಲಿ ಆಡಳಿತ ನಡೆಸುತ್ತಿರುವ ಎಎಪಿ 22 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಆದರೆ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಅದರ ಪ್ರಮುಖ ನಾಯಕರು ಸೋತು ಸುಣ್ಣವಾಗಿದ್ದಾರೆ.

ಮುಖ್ಯಮಂತ್ರಿ ಆಯ್ಕೆಯನ್ನು ಘೋಷಿಸದೆ ಚುನಾವಣೆಗೆ ಮುಂದಾದ ಬಿಜೆಪಿ, ಸರ್ಕಾರದ ಮುಖ್ಯಸ್ಥರನ್ನು ನಿರ್ಧರಿಸಲು ಉನ್ನತ ಮಟ್ಟದ ಸಭೆಗಳನ್ನು ಪ್ರಾರಂಭಿಸಿದ್ದು, ಐವರು ನಾಯಕರು ಸಿಎಂ ಸ್ಥಾನದ ಪ್ರಮುಖ ಸ್ಪರ್ಧಿಗಳಾಗಿ ಹೊರಹೊಮಿದ್ದಾರೆ.

RELATED ARTICLES

Latest News