Friday, November 22, 2024
Homeರಾಷ್ಟ್ರೀಯ | Nationalಲಾಲೂಪ್ರಸಾದ್ ಯಾದವ್ ಕುಟುಂಬಕ್ಕೆ ಬಿಗ್ ರಿಲೀಫ್

ಲಾಲೂಪ್ರಸಾದ್ ಯಾದವ್ ಕುಟುಂಬಕ್ಕೆ ಬಿಗ್ ರಿಲೀಫ್

ನವದೆಹಲಿ,ಅ.4- ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂಪ್ರಸಾದ್ ಯಾದವ್ ಪತ್ನಿ ರಾಬ್ಡಿದೇವಿ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‍ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. 2004ರಿಂದ 2009ರವರೆಗೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಅವಧಿಯಲ್ಲಿ ಲಾಲು ಪ್ರಸಾದ್ ಅವರ ಕುಟುಂಬಕ್ಕೆ ಭೂಮಿ ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ರೈಲ್ವೆಯಲ್ಲಿ ಕೆಲವರಿಗೆ ಉದ್ಯೋಗ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಹೀಗಾಗಿ ಲಾಲುಪ್ರಸಾದ್ ಯಾದವ್, ರಾಬ್ಡಿದೇವಿ ಮತ್ತು ಡಿಸಿಎಂ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿತ್ತು. ಕಳೆದ ಜುಲೈ 3ರಂದು ಲಾಲುಪ್ರಸಾದ್ ಮತ್ತು ಇತರರ ವಿರುದ್ಧ ಹೊಸ ಚಾರ್ಜ್ ಶೀಟ್ ಸಲ್ಲಿಸಿದ್ದ ಸಿಬಿಐ ಕೇಂದ್ರ ರೈಲ್ವೆಯಲ್ಲಿ ಅಭ್ಯರ್ಥಿಗಳ ಅನಿಯಮಿತ/ಅಕ್ರಮ ನೇಮಕಾತಿಗಳನ್ನು ಮಾಡಲಾಗಿದೆ, ರೈಲ್ವೆಯ ನಿಯಮಗಳು, ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂದು ಉಲ್ಲೇಖಿಸಿತ್ತು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಸಾಧಕ-ಬಾಧಕಗಳ ಕುರಿತು ಚರ್ಚೆ : ಪರಮೇಶ್ವರ್

ಜುಲೈ 3ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎರಡನೇ ಚಾರ್ಜ್‍ಶೀಟ್‍ನಲ್ಲಿ ತೇಜಸ್ವಿ ಯಾದವ್ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ಮೊದಲ ಚಾರ್ಜ್‍ಶೀಟ್‍ನಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಿರಲಿಲ್ಲ. ಮೂವರು ಕುಟುಂಬ ಸದಸ್ಯರ ಜೊತೆಗೆ 14 ವ್ಯಕ್ತಿಗಳು ಮತ್ತು ಘಟಕಗಳನ್ನು ಚಾರ್ಜ್‍ಶೀಟ್‍ನಲ್ಲಿ ಹೆಸರಿಸಲಾಗಿತ್ತು.

ಲಾಲುಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಕ್ಷಮ ಅಧಿಕಾರಿಗಳಿಂದ ಅಗತ್ಯ ಅನುಮತಿಯನ್ನು ಪಡೆಯಲಾಗಿದೆ ಎಂದು ಸಿಬಿಐ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದ ನಂತರ ವಿಶೇಷ ಸಿಬಿಐ ನ್ಯಾಯಾೀಧಿಶರಾದ ನ್ಯಾಯಮೂರ್ತಿ ಗೀತಾಂಜಲಿ ಗೋಯೆಲ್ ಅವರು ಲಾಲು ಮತ್ತು ಇತರರಿಗೆ ಸಮನ್ಸ್ ನೀಡಿದ್ದರು.

ಸಮನ್ಸ್ ನೀಡುವಾಗ, ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಫೋರ್ಜರಿ ಸೇರಿದಂತೆ ವಿವಿಧ ಅಪರಾಧಗಳ ಆಯೋಗವನ್ನು ಪ್ರಾಥಮಿಕವಾಗಿ ಸಾಕ್ಷ್ಯ ತೋರಿಸಿರುವುದನ್ನು ನ್ಯಾಯಾಲಯ ಗಮನಿಸಿತ್ತು. ಇನ್ನು ನ್ಯಾಯಾಲಯ ತಮಗೆ ಜಾಮೀನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್, ಇದು ಕಾನೂನಿನ ವಿಷಯ. ನಾವು ನ್ಯಾಯಾಲಯದ ಮುಂದೆ ಹಾಜರಾಗಿದ್ದೇವೆ. ನಮಗೆ ನ್ಯಾಯಾಲಯವು ಜಾಮೀನು ನೀಡಿದೆ ಎಂದಷ್ಟೇ ಹೇಳಿದರು.

ಸಿಕ್ಕಿಂನಲ್ಲಿ ಮೇಘಸ್ಪೋಟ, 23 ಸೇನಾ ಸಿಬ್ಬಂದಿ ನಾಪತ್ತೆ

ಲಾಲು ಪ್ರಸಾದ್ ಯಾದವ್ ಮತ್ತು ಇತರರು ತಮ್ಮ ವಿರುದ್ಧ ನೀಡಲಾದ ಸಮನ್ಸ್‍ನ ಅನ್ವಯ ಇಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು.

RELATED ARTICLES

Latest News