Thursday, July 3, 2025
Homeರಾಷ್ಟ್ರೀಯ | Nationalದೆಹಲಿ : ಕೆಲಸಕ್ಕಿದ್ದವನಿಂದಲೆ ತಾಯಿ-ಮಗನ ಹತ್ಯೆ

ದೆಹಲಿ : ಕೆಲಸಕ್ಕಿದ್ದವನಿಂದಲೆ ತಾಯಿ-ಮಗನ ಹತ್ಯೆ

Delhi double murder: Mother, teenage son found murdered in Lajpat Nagar home;

ನವದೆಹಲಿ, ಜು.3 ಕೆಲಸಗಾರನೇ ತಾಯಿ ಹಾಗೂ ಮಗನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಲಜ್‌ಪತ್ ನಗರದಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿಗಳನ್ನು ತಾಯಿ ರುಚಿಕಾ (42) ಹಾಗೂ ಮಗ ಕ್ರಿಶ್ (14) ಎಂದು ಗುರುತಿಸಲಾಗಿದೆ.

ತಾಯಿ-ಮಗನನ್ನು ಕೊಲೆ ಮಾಡಿದ ಕೊಲೆಪಾತಕ ಮುಖೇಶ್ (24) ನನ್ನು ಪೊಲೀಸರು ಬಂಧಿಸಿದ್ದಾರೆ.ರುಚಿಕಾ ಹಾಗೂ ಆಕೆಯ ಪತಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಇದೇ ಅಂಗಡಿಯಲ್ಲಿ ಆರೋಪಿ ಮುಖೇಶ್ ಚಾಲಕ ಹಾಗೂ ಸಹಾಯನಾಗಿ ಕೆಲಸ ಮಾಡುತ್ತಿದ್ದ.

ಕೊಲೆ ನಡೆದ ದಿನ ಆರೋಪಿ ಮುಖೇಶ್ ಮನೆಗೆ ಬಂದಿದ್ದ. ಈ ವೇಳೆ ರುಚಿಕಾ ಆತನಿಗೆ ಬೈದಿದ್ದಳು ಎನ್ನಲಾಗಿದ್ದು, ಇದೇ ಕೋಪದಿಂದ ಆಕೆ ಹಾಗೂ ಮಗನನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ರುಚಿಕಾ ಪತಿ ಕುಲದೀಪ್ ಮಾತನಾಡಿ, ನನ್ನ ಹೆಂಡತಿ ಹಾಗೂ ಮಗನಿಗೆ ನಿರಂತರವಾಗಿ ಕರೆ ಮಾಡಿದ್ದು, ಅವರು ಉತ್ತರಿಸಿರಲಿಲ್ಲ.

ಅದೇ ಗಾಬರಿಯಿಂದ ಮನೆಯ ಬಳಿ ಬಂದಾಗ ಬಾಗಿಲು ಲಾಕ್ ಆಗಿತ್ತು ಹಾಗೂ ಮೆಟ್ಟಿಲು, ನೆಲದ ಮೇಲೆ ರಕ್ತದ ಕಲೆ ಇತ್ತು. ತಕ್ಷಣವೇ ನಾನು ಪೊಲೀಸರಿಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಈ ವೇಳೆ ಪತ್ನಿ ರುಚಿತಾಳ ಮೃತದೇಹ ಬೆಡ್ ರೂಮ್‌ನಲ್ಲಿ ಹಾಗೂ ಮಗನ ಮೃತದೇಹ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಎರಡು ದೇಹಗಳ ಮೇಲೆಯೂ ಮಾರಣಾಂತಿಕ ಹಲ್ಲೆ ಇರುವುದು ಪತ್ತೆಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News