ಬೆಂಗಳೂರು, ಜ.25- ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ವಿಶ್ವದ ಮಟ್ಟದ ಎತ್ತರಕ್ಕೆ ಏರಿಸಿದ ಕೀರ್ತಿ ಸಿಎಂ ನಾಗರಾಜರು ಅವರಿಗೆ ಸಲ್ಲುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕರೆತರಿಸಿ ಕರ್ನಾಟಕ ಸಂಘದ ಅಮೃತ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿ ಸುಮಾರು 3500 ಕಲಾವಿದರನ್ನು ಕರೆಸಿ ಕನ್ನಡ ಕಂಪನ್ನು ದೆಹಲಿಯಲ್ಲಿ ಪಸರಿಸಿದ ಸಿಎಂ ನಾಗರಾಜು ರವರು ಮತ್ತೆ ದೆಹಲಿ ಕರ್ನಾಟಕ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡ ಸಂಘದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿ ರಾಷ್ಟ್ರ ರಾಜಧಾನಿಗೆ ಕರ್ನಾಟಕದಿಂದ ಬರುವ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ, ಉನ್ನತ ಶಿಕ್ಷಣಕ್ಕೆ ಬರುವರಿಗೆ ಮಾರ್ಗದರ್ಶನ ಜೊತೆಗೆ ವಸತಿ ಕಲ್ಪಿಸಿ ನೆರೆವಾಗಿದ್ದರು. ಇವರ ಸೇವಾ ಗುಣವನ್ನು ಮೆಚ್ಚಿ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರನ್ನಾಗಿ ದೆಹಲಿ ಕನ್ನಡಿಗರು ಆಯ್ಕೆ ಮಾಡಿದ್ದಾರೆ.
ಇವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಚವರಮಂಗಳದ ಗ್ರಾಮದವರು. ದೆಹಲಿಯಲ್ಲಿ ಇವರ ಸ್ನೇಹ ಕೂಟ, ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿ ಮೆಚ್ಚುಗೆ ಪಡೆದಿದ್ದಾರೆ.
ಇವರು ಯಾವುದೇ ಜಾತಿ ಮತ ಪ್ರಾಂತ್ಯ ಎನ್ನದೆ ದೆಹಲಿಯಲ್ಲಿ ಎಲ್ಲಾ ಒಂದೇ ಜಾತಿ ಅದು ಕನ್ನಡ ಜಾತಿ ಎಂಬ ಒಂದು ದ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ಇವರನ್ನ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಇನ್ನು ಹೆಚ್ಚಿನ ಜವಾಬ್ದಾರಿಗಳು ಸದಸ್ಯರು ನೀಡಿದ್ದಾರೆ. ಸಿ.ಎಂ. ನಾಗರಾಜ್ ಸತತವಾಗಿ ಎಂಟನೇ ಬಾರಿ ಚುನಾವಣೆಯಲ್ಲಿ ಗೆ ಜಯಶೀಲರಾಗಿದ್ದಾರೆ.