ನವದೆಹಲಿ, ಡಿ.22- ಚುನಾವಣಾ ಪ್ರಚಾರ ಬಿಟ್ಟು ಹದಗೆಟ್ಟಿರುವ ನಗರದ ಸಮಸ್ಯೆಗಳನ್ನು ಪರಿಹರಿಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರು ಸಿಎಂ ಅತಿಶಿ ಹಾಘೂ ಎಎಪಿ ನಾಯಕ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದಾರೆ.
ಆಮ್ ಆದಿ ಪಕ್ಷದ (ಎಎಪಿ) ವಿಧಾನಸಭೆ ಚುನಾವಣೆಯ ಪ್ರಚಾರದ ನಡುವೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇಂದು ದಿಲ್ಲಿಯ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ನರಕಸದಶ ಜೀವನದತ್ತ ಬೊಟ್ಟು ಮಾಡಿದರು.
ತೆರೆದ ಚರಂಡಿಗಳ ದಶ್ಯಗಳನ್ನು ಮತ್ತು ಅಪಾರ ಪ್ರಮಾಣದ ವಿದ್ಯುತ್ ಬಿಲ್‌ಗಳ ಬಗ್ಗೆ ನಿವಾಸಿಗಳು ದೂರುತ್ತಿರುವ ದಶ್ಯಗಳನ್ನು ಹಂಚಿಕೊಂಡ ಸಕ್ಸೇನಾ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಮುಖ್ಯಮಂತ್ರಿ ಅತಿಶಿ ಈ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಗಲ್ಲಿಗಳು ಮತ್ತು ಬೀದಿಗಳಲ್ಲಿ ಸಂಗ್ರಹವಾಗಿರುವ ದುರ್ವಾಸನೆಯ ನೀರು ಮಳೆನೀರಲ್ಲ, ಆದರೆ ತುಂಬಿ ಹರಿಯುವ ಚರಂಡಿಗಳಿಂದ ಬಂದಿದೆ. ಮಹಿಳೆಯರು ತಮ ಸಮಸ್ಯೆಗಳನ್ನು ಹೇಳುತ್ತಿರುವುದು ದೆಹಲಿಯವರೇ ಹೊರತು ಬೇರೆ ಯಾವುದೇ ರಾಜ್ಯದವರಲ್ಲ ಎಂದು ದಕ್ಷಿಣ ದೆಹಲಿಯ ರಂಗಪುರಿ ಪಹಾರಿಗೆ ಭೇಟಿ ನೀಡಿದ ನಂತರ ಲೆಫ್ಟಿನೆಂಟ್ ಗವರ್ನರ್ ಎಕ್‌್ಸನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪ್ರದೇಶದ ನಿವಾಸಿಗಳು ಅಸಮರ್ಪಕ ವಿದ್ಯುತ್ ಸರಬರಾಜು, ಅನಿಯಮಿತ ನೀರು ಸರಬರಾಜು ಮತ್ತು ಕಳಪೆ ಕಸ ವಿಲೇವಾರಿ ಬಗ್ಗೆ ದೂರಿದ್ದಾರೆ. ಅನೇಕ ನಿವಾಸಿಗಳು ಪ್ರತಿದಿನ 8-10 ಗಂಟೆಗಳ ವಿದ್ಯುತ್ ಕಡಿತದ ಬಗ್ಗೆ ದೂರು ನೀಡಿದ್ದಾರೆ ಮತ್ತು ಉಚಿತ ವಿದ್ಯುತ್ ನೀಡುವುದಾಗಿ ದೆಹಲಿ ಸರ್ಕಾರದ ಹೇಳಿಕೆಗಳ ಹೊರತಾಗಿಯೂ ಹೆಚ್ಚಿನ ವಿದ್ಯುತ್ ಬಿಲ್‌ಗಳನ್ನು ತೋರಿಸಿದ್ದಾರೆ ಎಂದು ಲೆಫ್ಟಿನೆಂಟ್ ಗವರ್ನರ್ ಬರೆದಿದ್ದಾರೆ.
ನಾಳೆಯಿಂದ ಪ್ರಾರಂಭವಾಗುವ ಸ್ವಚ್ಛತಾ ಅಭಿಯಾನದ ಬಗ್ಗೆ ನಾನು ಭರವಸೆ ನೀಡಿದ್ದೇನೆ ಮತ್ತು ನಾನು ಈ ಪ್ರಯತ್ನಗಳನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತೇನೆ ಇದರಿಂದ ನಿವಾಸಿಗಳು ಕನಿಷ್ಠ ಮೂಲಭೂತ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಮತ್ತು ದೆಹಲಿ ಸರ್ಕಾರದ ಸಂಬಂಧಿಸಿದ ಸಚಿವರು ಈ ಪ್ರದೇಶಗಳಿಗೆ ಭೇಟಿ ನೀಡಿ ನರಕಯಾತನೆಯ ಪರಿಸ್ಥಿತಿಗಳನ್ನು ನೋಡಬೇಕೆಂದು ನಾನು ಒತ್ತಾಯಿಸುತ್ತೇನೆ. ಅವರು ಈ ದಯನೀಯ ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ಒಗ್ಗೂಡಿ ದೆಹಲಿಯನ್ನು ಮತ್ತೊಮೆ ಶ್ರೇಷ್ಠಗೊಳಿಸೋಣ ಎಂದು ಅವರು ಸಲಹೆ ನೀಡಿದ್ದಾರೆ.