Saturday, August 2, 2025
Homeರಾಷ್ಟ್ರೀಯ | Nationalಪತ್ನಿಯೊಂದಿಗೆ ಜಗಳವಾಡಿ ಯಮುನಾ ನದಿಗೆ ಹಾರಿದ ಪತಿ

ಪತ್ನಿಯೊಂದಿಗೆ ಜಗಳವಾಡಿ ಯಮುನಾ ನದಿಗೆ ಹಾರಿದ ಪತಿ

Delhi Man Jumps Into Yamuna After Fight With Wife, Rescued By Boatmen: Cops

ನವದೆಹಲಿ, ಜು.31– ಪತ್ನಿಯೊಂದಿಗಿನ ಜಗಳದ ನಂತರ ಪತಿ ವ್ಯಕ್ತಿ ಯಮುನಾ ನದಿಗೆ ಹಾರಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.ಅದೃಷ್ಟವಶಾತ್‌ ನದಿಯಲ್ಲಿದ್ದ ದೋಣಿ ಚಾಲಕರು ಆತನನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್‌ನಲ್ಲಿ ಬಂದ ಲೋಕೇಂದ್ರ ಸಿಂಗ್‌ (30). ದೆಹಲಿಯ ಸಿಗ್ನೇಚರ್‌ ಸೇತುವೆಯಿಂದ ನದಿಗೆ ಹಾರಿದ್ದರು.

ಅಲ್ಲೇ ಇದ್ದ ಕೆಲವು ಅಧಿಕಾರಿಗಳು ನದಿಯಲ್ಲಿ ಮುಳುಗುತ್ತಿರುವ ವ್ಯಕ್ತಿಯನ್ನು ಗಮನಿಸಿ, ಅವರು ಹತ್ತಿರದ ದೋಣಿ ಚಾಲಕರಿಗೆ ಮಾಹಿತಿ ನೀಡಿದರು, ಅವರಲ್ಲಿ ಇಬ್ಬರು ಸ್ಥಳಕ್ಕೆ ಧಾವಿಸಿ ಲೋಕೇಂದ್ರ ಸಿಂಗ್‌ರನ್ನು ನೀರಿನಿಂದ ಹೊರತೆಗೆದರು ಎಂದು ಪೊಲೀಸರು ಹೇಳಿದರು.ತನ್ನ ಹೆಂಡತಿಗೆ ಆತಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇ ಶವನ್ನು ಕಳುಹಿಸಿ ಮಬೈಲ್‌ನ್ನು ಬೈಕ್‌ನಲ್ಲೆ ಬಿಟ್ಟು ಹೋಗಿದ್ದರು.

ಅಸ್ವಸ್ತಗೊಂಡಿದ್ದ ಲೋಕೇಂದ್ರ ಅವರನ್ನು ಮಜ್ನು ಕಾ ತಿಲಾದ ಟಿಬೆಟಿಯನ್‌ ಶಿಬಿರದಲ್ಲಿರುವ ಔಷಧಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಪ್ರಜ್ಞೆ ಬಂದಿತು. ಪತ್ನಿಯೊಂದಿಗೆ ಜಗಳವಾಡಿದ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಗಿ ಮತ್ತು ಆತಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.ಲೋಕೇಂದ್ರ ಅವರ ಪತ್ನಿ ತನ್ನ ಸಹೋದರನೊಂದಿಗೆ ಸ್ಥಳಕ್ಕೆ ಬಂದು ಮನೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.

RELATED ARTICLES

Latest News