Friday, November 22, 2024
Homeಬೆಂಗಳೂರುಬಿಬಿಎಂಪಿಗೆ ಕೋಟಿ ಕೋಟಿ ವಂಚಿಸಿರುವ ಪ್ರಾಧ್ಯಾಪಕ ಚಿರಾಗ್ ಬಂಧನಕ್ಕೆ ಆಗ್ರಹ

ಬಿಬಿಎಂಪಿಗೆ ಕೋಟಿ ಕೋಟಿ ವಂಚಿಸಿರುವ ಪ್ರಾಧ್ಯಾಪಕ ಚಿರಾಗ್ ಬಂಧನಕ್ಕೆ ಆಗ್ರಹ

Dalit Leaders Demand for the arrest of Professor Chirag

ಬೆಂಗಳೂರು,ಅ.4- ಬಿಬಿಎಂಪಿಗೆ ಕೊಟ್ಯಂತರ ರೂಪಾಯಿ ವಂಚನೆ ಮಾಡಿರುವ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಬಂಧನಕ್ಕೆ ಅಗ್ರಹಿಸಿ ದಲಿತ ಪರ ಸಂಘಟನೆಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಒಕ್ಕೊರಲಿನ ಮನವಿ ಮಾಡಿವೆ.

ಜ್ಯೋತಿ ನಿವಾಸ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಚಿರಾಗ್ ಅವರು ಪೌರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಂಚಿಸಿ ಪೋರ್ಜರಿ ದಾಖಲೆ ಸೃಷ್ಟಿಸಿ ಬಿಬಿಎಂಪಿ ಬೊಕ್ಕಸಕ್ಕೆ ಒಂದು ಕೋಟಿ ರೂ.ಗಳಿಗೂ ಹೆಚ್ಚು ಣ ವಂಚಿಸಿದ್ದಾರೆ ಎಂದು ನ್ಯಾಯಕ್ಕಾಗಿ ಹೋರಾಟ ಸಮಿತಿ ಆರೋಪಿಸಿದೆ.

ಈ ಕುರಿತಂತೆ ಸಭೆ ನಡೆಸಿದ ದಲಿತ ಸಂಘಟನೆಗಳ ಮುಖಂಡರುಗಳು ಅಪರಾಧ ಮಾಡಿರುವ ಚಿರಾಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಪೌರ ಕಾರ್ಮಿಕರ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಮೋಹನ್ , ರಾಜ್ಯಾಧ್ಯಕ್ಷ ಎಂ.ಸಿ. ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ದಾಸ್, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನಜಾಗತಿ ಸಮಿತಿ ರಾಜ್ಯಾಧ್ಯಕ್ಷ ಸೂರ್ಯಚಂದ್ರ ಮಂಜಣ್ಣ, ಜೈಭೀಮ್ ನೀಲಿ ಸೇನೆಯ ಜಿಲ್ಲಾಧ್ಯಕ್ಷ ತ್ಯಾಗರಾಜು, ಸುವರ್ಣ ಕರ್ನಾಟಕ ರಾಜ್ಯದಲಿತ ಕ್ರಿಯ ಸಮಿತಿ ಅಧ್ಯಕ್ಷ ಜಿ.ವೇಲು, ದಲಿತ ಸಫಾಯಿ ಕರ್ಮಚಾರಿ ಸಂಘ ರಾಜ್ಯಾಧ್ಯಕ್ಷರಾದ ಚಂದ್ರು, ದಲಿತ ಪರ ಹೋರಾಟಗಾರ ವಿಜಯ್ ಕುಮಾರ್, ದಲಿತ ಸಂರಕ್ಷಣೆ ವೇದಿಕೆ ಅಧ್ಯಕ್ಷ ರಾಬರ್ಟ್, ಬಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವದ್ಧಿ ಸಂಘ ಅಧ್ಯಕ್ಷ ಎ.ಅಮತ್ ರಾಜ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಚಿರಾಗ್ ಅವರು ಕೊರೊನಾ ಕಾಲದ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆದುಕೊಂಡು ಯಾವುದೇ ಕೆಲಸ ನಿರ್ವಹಿಸದೆ ನಕಲಿ ಸಂಸ್ಥೆಯ ಮುಖಾಂತರ ಕೋಟ್ಯಾಂತರ ರೂ ವಂಚಿಸಿರುವುದರಿಂದ ಪೌರಕಾರ್ಮಿಕರು ಅವಲಂಬಿತರು ಮತ್ತು ನಿರುದ್ಯೋಗಿಗಳು ಕಾಮಗಾರಿ ಸೌಲಭ್ಯವನ್ನು ಪಡೆಯಲು ವಂಚಿತರಾಗಿರುತ್ತಾರೆ. ಎಸ್.ಚಿರಾಗ್ ರವರು ಪಾಲಿಕೆಗೆ ಈ ಕೆಳಕಂಡಂತೆ ನಕಲಿ ದಾಖಲೆ ನೀಡಿ ಪಾಲಿಕೆಗೆ ಕೋಟ್ಯಾಂತರ ರೂ ವಂಚಿಸಿರುತ್ತಾರೆ.

ಬೊಮನಹಳ್ಳಿ ವಲಯದಲ್ಲಿ ಚಿರಾಗ್ ಅವರು ಕೊರೊನಾ ಅವಧಿಯಲ್ಲಿ ಸುಮಾರು ರೂ.24,64,000/- ಕ್ಕೂ ಮೇಲ್ಪಟ್ಟು ಬಿಲ್ ಪಡೆದುಕೊಂಡು ವಂಚಿಸಿರುತ್ತಾರೆ. ಆರ್. ಆರ್ ನಗರ ವಲಯದಲ್ಲಿ 2022 ನೇ ಸಾಲಿನಲ್ಲಿ ಕೋವಿಡ್ ಡಾಕ್ಟರ್ ನಿಯೋಜಿಸಿರುವುದಾಗಿ ರೂ.33,12,366/- ಕ್ಕೂ ಮೇಲ್ಪಟ್ಟು ಬಿಲ್ಲುಗಳನ್ನು ಪಡೆಡುಕೊಂಡು ವಂಚಿಸಿರುತ್ತಾರೆ.

ಯಲಹಂಕ ವಲಯದಲ್ಲಿ2021 ನೇ ಸಾಲಿನಲ್ಲಿ ಕಂಟ್ರೋಲ್ ರೂಮ್ ನಿರ್ವಹಿಸಿರುವುದಾಗಿ ನಕಲಿ ದಾಖಲೆಗಳನ್ನು ನೀಡಿ ಕೆಲಸ ನಿರ್ವಹಿಸುವ ಬಗ್ಗೆ ಜ್ಞಾನ ತಿಳುವಳಿಕೆ ಇಲ್ಲದೆ ರೂ.11,09,728/- ಗಳ ಬಿಲ್ಲನ್ನು ಪಡೆದು ಪಾಲಿಕೆ ವಂಚಿಸಿರಿವುದು ಅಲ್ಲದೆ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆಸಿರುವುದು ಸಾಬೀತಾಗಿದೆ.

ಹೀಗಾಗಿ ಚಿರಾಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿ ಪಾಲಿಕೆಗೆ ವಂಚನೆ ಮಾಡಿರುವ ಕೋಟ್ಯಾಂತರ ರೂಗಳನ್ನು ಮುಟ್ಟುಗೋಲು ಹಾಕಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗಹ ಸಚಿವ ಜಿ.ಪರಮೇಶ್ವರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಲಾಗುವುದು. 15 ದಿನದಲ್ಲಿ ಕ್ರಮ ಕೈಗೊಳ್ಳದೇ ಹೋದರೆ ದಲಿತ ಸಂಘಟನೆ ಒಕ್ಕೂಟದಿಂದ ಹೋರಾಟವನ್ನು ಹಮಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

RELATED ARTICLES

Latest News