ವಾಷಿಂಗ್ಟನ್, ನ.11- ಡೆಮಾಕ್ರಟಿಕ್ ಪಾರ್ಟಿಯ ಭಾರತೀಯ ಅಮೆರಿಕನ್ ನಿಧಿ ಸಂಗ್ರಹಕಾರನ ಫೋನ್ಗೆ ಜನಾಂಗೀಯ ಮತ್ತು ಬೆದರಿಕೆ ಸಂದೇಶಗಳು ಬರುತ್ತಿದೆಯಂತೆ….! ನೀವು ಅಮೆರಿಕನ್ನರಿಗೆ ಉತ್ತಮವಾದದ್ದನ್ನು ಮಾಡುತ್ತಿದ್ದೀರಿ ಎಂದು ನೀವು ಹೇಳಿಕೊಳ್ಳುತ್ತೀರಿ, ಆದರೆ ನೀವು ಅಮೆರಿಕನ್ನರಿಗಾಗಿ ಏನನ್ನೂ ಮಾಡುತ್ತಿಲ್ಲ ಮತ್ತು ನೀವು ಅಮೆರಿಕದ ಬಗ್ಗೆ ಕಾಳಜಿ ವಹಿಸುವುದಿಲ್ಲ.
ನೀನು ಭಾರತ ಮೂಲದವರು, ನೀವು ಭಾರತೀಯರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೀರಿ. ನೀವು ಭಾರತಕ್ಕೆ ಒಳ್ಳೆಯದನ್ನು ಮಾಡುತ್ತೀರಿ. ಆದರೆ ನೀವು ಯಾಕೆ ಇಲ್ಲಿದ್ದೀಯ? ಅಮೆರಿಕದಲ್ಲಿ ಭಿಕ್ಷುಕನಾಗುವುದನ್ನು ನಿಲ್ಲಿಸಿ ಮತ್ತು ಭಾರತದಲ್ಲಿ ನಾಯಕನಾಗು ಎಂದು ಅಜಯ್ ಜೈನ್ ಭುಟೋರಿಯಾ ಅವರಿಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ.
ಅಜಯ್ ಭುಟೋರಿಯಾ ಅವರು ಡೆಪ್ಯೂಟಿ ನ್ಯಾಷನಲ್ ಫೈನಾನ್ಸ್ ಚೇರ್ ಡಿಎನ್ಸಿ ಮತ್ತು ನ್ಯಾಷನಲ್ ಫೈನಾನ್್ಸ ಕಮಿಟಿ, ಹ್ಯಾರಿಸ್-ವಾಲ್ಜ್ ಪ್ರಚಾರ ವಹಿಸಿದ್ದರು.ಅಧ್ಯಕ್ಷರ ಸಲಹಾ ಆಯೋಗದ ಆಯುಕ್ತರಲ್ಲಿ ಇವರು ಒಬ್ಬರು. ಈ ಪಾತ್ರದಲ್ಲಿ, ಕಾನೂನು ವಲಸಿಗ ಸಮುದಾಯದ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಗ್ರೀನ್ ಕಾರ್ಡ್, ಬ್ಯಾಕ್ಲಾಗ್ಗಾಗಿ ಹೋರಾಡಲು ಭಾರತಕ್ಕೆ ಹಿಂತಿರುಗುವಂತೆ ಟ್ರಂಪ್ ಬೆಂಬಲಿಗರು ನನ್ನನ್ನು ಕೇಳುತ್ತಿದ್ದಾರೆ ಎಂದು ಭೂಟೋರಿಯಾ ತಿಳಿಸಿದರು. ಈ ಕೆಲವು ಸಂದೇಶಗಳನ್ನು ಭೂಟೋರಿಯಾ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದಾರೆ.