ಕಾರವಾರ,ಏ.18– ಗರ್ಭಧರಿಸಿದ್ದ ಗೋವನ್ನು ಹತ್ಯೆಗೈದು ಮಾಂಸ ಸಾಗಾಟ ಮಾಡಿ ದುರುಳರು ವಿಕೃತಿ ಮೆರೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ನಡೆದಿದೆ.
ಮಾಂಸಕ್ಕಾಗಿ ದನವನ್ನು ವಧೆ ಮಾಡಿದ ದುರುಳರು ಕರುವಿನ ಭ್ರೂಣ ಹಾಗೂ ಅಂಗಾಂಗಗಳನ್ನು ಗೋಣಿ ಚೀಲದಲ್ಲಿ ಸುತ್ತಿ ಎಸೆದು ಹೋಗಿದ್ದಾರೆ. ಬೀದಿ ನಾಯಿಯೊಂದು ಚೀಲವನ್ನು ಎಳೆದುತಂದಾಗ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಹೊನ್ನಾವರದಲ್ಲಿ ಇಂತದ್ದೇ ಪ್ರಕರಣ ದಾಖಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.