Friday, November 22, 2024
Homeಬೆಂಗಳೂರುಬೆಂಗಳೂರಿನಲ್ಲಿ ಮತ್ತೆ ಜೋರಾಯ್ತು ಡೆಂಗ್ಯೂ ಜ್ವರದ ಕಾಟ

ಬೆಂಗಳೂರಿನಲ್ಲಿ ಮತ್ತೆ ಜೋರಾಯ್ತು ಡೆಂಗ್ಯೂ ಜ್ವರದ ಕಾಟ

ಬೆಂಗಳೂರು,ಜೂ.21– ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಡೆಂಘಿ ಜ್ವರದ ಜೊತೆಗೆ ವೈರಲ್‌ ಫೀವರ್‌ ಕಾಟ ಜೋರಾಗಿದೆ. ಇದುವರೆಗೂ ನಗರದಲ್ಲಿ 1,230 ಡೆಂಘಿ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 20 ದಿನಗಳಲ್ಲೇ 230 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಡೆಂಘಿ ಜ್ವರದ ಜೊತೆ ಜೊತೆಗೆ ವೈರಲ್‌ ಫೀವರ್‌ ಕೂಡ ಕಾಣಿಸಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಇದುವರೆಗೆ 3839 ಪ್ರಕರಣಗಳು ವರದಿಯಾಗಿದೆ. ಬೆಂಗಳೂರು ಒಂದರಲ್ಲೇ 1530 ವೈರಲ್‌ ಫೀವರ್‌ ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ವೈರಲ್‌ ಫೀವರ್‌ ಹೆಚ್ಚಾಗಲು ಕಾರಣ ಎನ್ನಲಾಗಿದ್ದು, ಇದ್ದಕ್ಕಿದ್ದಂತೆ ಶೀತಗಾಳಿ ಆಗಾಗ್ಗೆ ಸುರಿಯುವ ಮಳೆ, ಧಿಡೀರ್‌ ಬಿಸಿಲು ಮುಂತಾದ ವ್ಯತಿರಿಕ್ತ ಪ್ರಾಕತಿಕ ಏರಿಳಿತಗಳು ವೈರಾಣುಗಳು ಹೆಚ್ಚಾಗಲು ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಸೋಂಕು ಪತ್ತೆಯಾದ ಸ್ಥಳಗಳಲ್ಲಿ ಲಾರ್ವ ಉತ್ಪಾದನೆ ತಡೆಯಲು ಫಾಗಿಂಗ್‌ ಕೆಲಸ ತೀವ್ರಗೊಳಿಸಲಾಗಿದ್ದು ಆರೋಗ್ಯ ಇಲಾಖೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದೆ. ರೋಗನಿರೋಧಕ ಶಕ್ತಿ ವ್ಛದದೀಸುವ ಆಹಾರ ವಿತರಿಸುವಂತೆ ಇಲಾಖೆ ಸಲಹೆ ನೀಡಿದ್ದು, ಮುಂಜಾಗ್ರತೆ ವಹಿಸುವಂತೆ ಜನರಲ್ಲಿ ಬಿಬಿಎಂಪಿ ಮನವಿ ಮಾಡಿದೆ.

RELATED ARTICLES

Latest News