ಬೆಂಗಳೂರು,ಜು.22- ನಗರ ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ರೋಗ ಪ್ರಕರಣಗಳು ಹೆಚ್ಚಾಗಿದ್ದು, ಡೆಂಗ್ಯೂ ಪರೀಕ್ಷೆಯನ್ನು ಸರ್ಕಾರದಿಂದ ಉಚಿತವಾಗಿ ಮಾಡುವಂತೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿದ ಅವರು, ಬೆಂಗಳೂರಿನಲ್ಲಿ 300 ರಿಂದ 400 ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಡೆಂಗ್ಯೂಗೆ 10 ಮಂದಿ ಮೃತಪಟ್ಟಿದ್ದಾರೆ. ಸತ್ತವರಲ್ಲಿ ಮಕ್ಕಳೇ ಹೆಚ್ಚಿದ್ದಾರೆ. ಇದುವರೆಗೆ ರಾಜ್ಯದಲ್ಲಿ 14,223 ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿದಿನ 400 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ. ಒಂದು ವರ್ಷದೊಳಗಿನ 238 ಮಕ್ಕಳಿಗೆ ಈ ರೋಗ ಕಂಡುಬಂದಿದೆ ಎಂದರು.
ಬೆಂಗಳೂರಿನಲ್ಲಿ 3, ಶಿವಮೊಗ್ಗದಲ್ಲಿ 2, ಧಾರವಾಡ, ಹಾಸನ, ಮೈಸೂರಿನಲ್ಲಿ ಡೆಂಗ್ಯೂ ರೋಗದಿಂದ ಮೃತಪಟ್ಟಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರ್ಕಾರ 300 ರೂ. ನಿಗದಿ ಮಾಡಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ 600 ರಿಂದ 700 ರೂ ನಿಗದಿ ಮಾಡಿ, ಲಂಗುಲಗಾಮಿಲ್ಲದೆ ರೋಗಿಗಳಿಂದ ಹೆಚ್ಚಿನ ದರ ಪಡೆಯಲಾಗುತ್ತಿದೆ. ಸೊಳ್ಳೆ ನಿಯಂತ್ರಣಕ್ಕೆ -Áಗಿಂಗ್ ಮಾಡಲಾಗುತ್ತಿಲ್ಲ. ನೀರು ನಿಲ್ಲುವ ಜಾಗಕ್ಕೆ ಔಷಧಿ ಸಿಂಪಡಣೆ ಮಾಡುತ್ತಿಲ್ಲ. ಒಟ್ಟಾರೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನಲ್ಲೇ ಶೇ.60 ರಿಂದ 70 ರಷ್ಟು ಡೆಂಗ್ಯೂ ರೋಗ ಹೆಚ್ಚಾಗಿದೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಡೆಂೀ, ಮಲೇರಿಯಾ ಹೆಚ್ಚಾಗುತ್ತಿದೆ ಎಂದರು.
ಸೊಳ್ಳೆಪರದೆ ಕೊಟ್ಟರೆ ಡೆಂಗ್ಯೂ ನಿಯಂತ್ರಣವಾಗುತ್ತದೆಯೇ? ಹಗಲಿನ ವೇಳೆ ಆ ಸೊಳ್ಳೆ ಕಚ್ಚುತ್ತದೆ ಎಂದಾಗ ಆರೋಗ್ಯಸಚಿವ ದಿನೇಶ್‍ಗುಂಡೂರಾವ್ ಮಾತನಾಡಿ, ಸೊಳ್ಳೆ ಪರದೆ ಕೊಡುವ ಬಗ್ಗೆ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವಿಚಾರವನ್ನು ನಿಲುವಳಿ ಸೂಚನೆ ಬದಲಾಗಿ ನಿಯಮ 69 ರಡಿ ಚರ್ಚೆಗೆ ಕೊಡುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಕಟಿಸಿದರು.