Thursday, December 26, 2024
Homeರಾಷ್ಟ್ರೀಯ | National'ಮಹಾ' ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌‍ ಇಂದು ಸಂಜೆ ಪ್ರಮಾಣ

‘ಮಹಾ’ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌‍ ಇಂದು ಸಂಜೆ ಪ್ರಮಾಣ

Devendra Fadnavis to take oath as Maharashtra Chief Minister today

ಮುಂಬೈ,ಡಿ.5- ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುವ ನಾಯಕ ದೇವೇಂದ್ರ ಫಡ್ನವೀಸ್‌‍ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ರಾಧಕೃಷ್ಣನ್‌ ಅವರು ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ಮುಂಬೈನ ಆಜಾದ್‌ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು, ಸಂಜೆ 5.30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಸೇರಿದಂತೆ ಬಿಜೆಪಿ ಎನ್‌ಡಿಎ ಆಡಳಿತದ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೊರತುಪಡಿಸಿ ಇನ್ನೂ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಮೂರು ಪಕ್ಷಗಳ ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿರುವುದು. ಹಂಗಾಮಿ ಸಿಎಂ ಏಕನಾಥ್‌ ಶಿಂಧೆ ಅವರು ಮತ್ತೊಬ್ಬ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ಸ್ಪಷ್ಟತೆ ಇಲ್ಲ.

ಏಕನಾಥ್‌ ಶಿಂಧೆ ಅವರು ಮಹಾರಾಷ್ಟ್ರ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ದೇವೇಂದ್ರ ಫಡ್ನವೀಸ್‌‍ ಮತ್ತು ಹೊಸ ಮಹಾಯುತಿ ಸರ್ಕಾರಕ್ಕೆ ತಮ ಬೆಂಬಲವನ್ನು ಸಂತೋಷದಿಂದ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು, ಆದರೆ ಅವರು ಡಿಸಿಎಂ ಆಗಿ ಹೊಸ ಸರ್ಕಾರದ ಭಾಗವಾಗುತ್ತಾರೆಯೇ ಎಂದು ಕೇಳಿದಾಗ ಉತ್ತರಿಸಲಿಲ್ಲ. ಈ ಬಗ್ಗೆ ಯೋಚಿಸಲು ಸಮಯಾವಕಾಶ ಬೇಕಿದ್ದು, ಬೆಂಬಲಿಗರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮತ್ತೊಂದೆಡೆ, ದೇವೇಂದ್ರ ಫಡ್ನವೀಸ್‌‍ ಅವರು ತಮ ಸರ್ಕಾರದಲ್ಲಿ ಏಕನಾಥ್‌ ಶಿಂಧೆ ಅವರು ಕೂಡ ಇರಬೇಕೆಂದು ಬಯಸುತ್ತಿರುವುದಾಗಿ ಹೇಳಿದರು. ಮಹಾಯುತಿಯ ಮೂವರೂ ನಾಯಕರು ದೊಡ್ಡ ಗುರಿಯೊಂದಿಗೆ ಸರ್ಕಾರದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದು, ಶಿಂಧೆ ಕೂಡ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಭರವಸೆ ಇದೆ ಎಂದರು.

ಶಿಂಧೆ ಅವರು ಫಡ್ನವಿಸ್‌‍ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಬಯಸುತ್ತಾರೆ, ಆದರೆ ಗೃಹ ಖಾತೆಯನ್ನು ನೀಡಬೇಕು ಮತ್ತು ಅವರ ಸಚಿವಾಲಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಷರತ್ತು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಸೇನೆಯಿಂದ ಸಂಭಾವ್ಯ ಸಚಿವರ ಪಟ್ಟಿಯನ್ನು ಫಡ್ನವೀಸ್‌‍ ಅವರಿಗೆ ಹಸ್ತಾಂತರಿಸಲಾಗಿದೆ. ಆದರೆ ಫಡ್ನವೀಸ್‌‍ ಅವರು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಮಾತನಾಡುತ್ತಾರೆ ಮತ್ತು ಗೃಹ ಸಚಿವಾಲಯವನ್ನು ಬಿಟ್ಟುಕೊಡಲು ಹಾಗೂ ಶಿವಸೇನೆಯ ಶಾಸಕರಿಗೆ ಖಾತೆಗಳನ್ನು ನೀಡುವುದನ್ನು ಹಿಂತಿರುಗಿಸುವುದಾಗಿ ಶಿಂಧೆ ಅವರಿಗೆ ತಿಳಿಸಿದ್ದಾರೆ ಎಂದು ಶಿವಸೇನೆಯ ಮೂಲಗಳು ತಿಳಿಸಿವೆ.

ಹೊಸ ಸರ್ಕಾರದ ಭಾಗವಾಗುವಂತೆ ಶಿಂಧೆ ಅವರನ್ನು ವಿನಂತಿಸುತ್ತಿದ್ದೇವೆ ಎಂದು ಶಿವಸೇನಾ ಶಾಸಕ ಮತ್ತು ಮಾಜಿ ಸಚಿವ ಉದಯ್‌ ಸಾಮಂತ್‌ ಹೇಳಿದ್ದಾರೆ. ಶಿಂಧೆ ಅವರು ನಮ ಮಾತನ್ನು ಕೇಳುತ್ತಾರೆ ಮತ್ತು ಸರ್ಕಾರದ ಭಾಗವಾಗುತ್ತಾರೆ ಎಂಬ ಭರವಸೆ ನಮಗಿದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಜಿತ್‌ ಪವಾರ್‌, ಏಕನಾಥ್‌ ಶಿಂಧೆ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಅವರು ಡಿ.5ರಂದು ಆಜಾದ್‌ ಮೈದಾನದಲ್ಲಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹಾಸ್ಯಭರಿತವಾಗಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಏಕನಾಥ್‌ ಶಿಂಧೆ, ಅಜಿತ್‌ ಪವಾರ್‌ ಅವರು ಬೆಳಗ್ಗೆ-ಸಂಜೆ ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸುತ್ತಾರೆ. ಹೀಗಾಗಿ ಈ ಬಾರಿಯೂ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಏಕನಾಥ್‌ ಶಿಂಧೆ ಹೊಸ ಮಹಾಯುತಿ ಸರ್ಕಾರಕ್ಕೆ ಡಿಸಿಎಂ ಆಗಲಿದ್ದಾರೆ ಎಂದು ಬಿಜೆಪಿ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಹೊಸ ಸರ್ಕಾರದ ಭಾಗವಾಗುವಂತೆ ಶಿಂಧೆ ಮೇಲೆ ಅವರದೇ ಶಾಸಕರು ಮತ್ತು ಮಾಜಿ ಸಚಿವರು ಒತ್ತಡ ಹೇರುತ್ತಿದ್ದಾರೆ.

ಬಿಜೆಪಿಯು ಗೃಹ ಸಚಿವಾಲಯದ ಬದಲು ನಗರಾಭಿವೃದ್ಧಿ ಮತ್ತು ಕಂದಾಯ ಖಾತೆಯನ್ನು ನೀಡಲು ಮುಂದಾಗಿದೆ, ಅವರು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಶಿಂಧೆ ಅವರು ಸಕಾರಾತಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗ ಮುಂಗಾರು ಕಡಿಮೆಯಾಗಿದೆ ಎಂದು ಕರಾವಳಿಯಲ್ಲಿ ನಿಮ ಮನೆ ಕಟ್ಟಲು ಧೈರ್ಯ ಮಾಡಬೇಡಿ. ನಾನು ಸಮುದ್ರ ಇದ್ದಂತೆ, ಮತ್ತೆ ಬಂದೇ ಬರುತ್ತೇನೆ ಎಂದು 2019ರಲ್ಲಿ ದೇವೇಂದ್ರ ಫಡ್ನವೀಸ್‌‍ ಅಂದಿನ ಸಿಎಂ ಉದ್ಧವ್‌ ಠಾಕ್ರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎಚ್ಚರಿಕೆ ನೀಡಿದ್ದರು.

ಅಂದು ಶಿವಸೇನೆಯ ನಡೆಯಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದ ದೇವೇಂದ್ರ ಫಡ್ನವೀಸ್‌‍ ಈಗ ಮತ್ತೊಮೆ ಮಹಾರಾಷ್ಟ್ರದ ಸಿಎಂ ಆಗುತ್ತಿದ್ದು, ಐದು ವರ್ಷದಲ್ಲಿ ತಮ ತಾಕತ್ತು ಏನು ಎಂಬುದನ್ನು ಉದ್ಧವ್‌ ಠಾಕ್ರೆ ಸೇರಿ ಮಹಾ ವಿಕಾಸ್‌‍ ಅಘಾಡಿಗೆ ತೋರಿಸಿದ್ದಾರೆ. ಈ ಮೂಲಕ ಐದು ವರ್ಷದ ಹಿಂದೆ ಸಮುದ್ರದಂತೆ ನಾನು ವಾಪಸ್‌‍ ಬರುತ್ತೇನೆ ಎಂದು ಮಾಡಿದ್ದ ಶಪಥವನ್ನು ಈಡೇರಿಸಿದ್ದಾರೆ.

2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ದ ನೇತೃತ್ವದ ಮಹಾಯುತಿ ಮೈತ್ರಿಕೂಟ ಅದ್ಭುತವಾದ ವಿಜಯ ಸಾಧಿಸಿದೆ. ಒಟ್ಟು 288 ಸ್ಥಾನಗಳ ವಿಧಾನಸಭೆಯಲ್ಲಿ ಮೈತ್ರಿಕೂಟ 235 ಸ್ಥಾನಗಳೊಂದಿಗೆ ಪ್ರಚಂಡ ಗೆಲುವು ಸಾಧಿಸಿದೆ. 132 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮಿದೆ. ಶಿವಸೇನೆ ಮತ್ತು ನ್ಯಾಷನಲಿಸ್ಟ್‌‍ ಕಾಂಗ್ರೆಸ್‌‍ ಪಕ್ಷವು ಸಹ ಗಮನಾರ್ಹವಾದ ಸಾಧನೆ ಮಾಡಿದ್ದು, ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಪಡೆದುಕೊಂಡಿವೆ.

ಇನ್ನು ಪ್ರತಿಪಕ್ಷಗಳ ಒಕ್ಕೂಟ ಮಹಾ ವಿಕಾಸ್‌‍ ಅಘಾಡಿ (ಎಂವಿಎ) ಕಾಂಗ್ರೆಸ್‌‍ ಕೇವಲ 16 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ದೊಡ್ಡ ಹಿನ್ನಡೆ ಅನುಭವಿಸಿವೆ. ಅದರ ಮೈತ್ರಿಕೂಟದ ಪಾಲುದಾರ ಶಿವಸೇನೆ (ಯುಬಿಟಿ) 20 ಸ್ಥಾನಗಳನ್ನು ಗೆದ್ದರೆ, ಎನ್ಸಿಪಿ (ಶರದ್‌ ಪವಾರ್‌ ಬಣ) ಕೇವಲ 10 ಸ್ಥಾನಗಳನ್ನು ಗಳಿಸಿವೆ.

RELATED ARTICLES

Latest News