ಮಹಾಕುಂಭ ನಗರ (ಯುಪಿ), ಜ. 15 (ಪಿಟಿಐ) ಮೈ ಕೊರೆಯುವ ಚಳಿಯಲ್ಲೂ ಭಕ್ತರು ತ್ರಿವೇಣಿ ಸಂಗಮದಲ್ಲಿಂದು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿ ಗಮನ ಸೆಳೆದರು.
ಭಕ್ತರು ಅಸ್ಥಿ ತಣ್ಣಗಾಗುವ ನೀರಿನಲ್ಲಿ ಸ್ನಾನ ಮಾಡುವಾಗ ಹರಹರ ಮಹಾದೇವ್, ಜೈ ಶ್ರೀ ರಾಮ್, ಜೈ ಗಂಗಾ ಮೈಯ್ಯ ಎಂಬ ಘೋಷಣೆಗಳು ಕೂಗಿದರು.
ನಾನು ಮೊದಲ ಬಾರಿಗೆ ಸಂಗಮದಲ್ಲಿ ಸ್ನಾನ ಮಾಡಿದೆ. ಸ್ನಾನ ಮಾಡಿದ ನಂತರ ನಾನು ನಿಜವಾಗಿಯೂ ಉಲ್ಲಾಸ ಅನುಭವಿಸಿದೆ ಎಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಿವಾಸಿ ನಿಬಾರ್ ಚೌಧರಿ ಹೇಳಿದರು. 62 ವರ್ಷದ ಅವರು ಇಬ್ಬರು ಸಹಾಯಕರೊಂದಿಗೆ ಪವಿತ್ರ ಸ್ನಾನ ಮಾಡಿದರು.
ಚೌಧರಿ ಅವರ ಜೊತೆಗಿದ್ದ ಶಿವರಾಮ್ ವಮಾರ್ ಅವರು ಈ ಅನುಭವ ಉತ್ತಮವಾಗಿದೆ ಎಂದು ಹೇಳಿದರು, ಇಲ್ಲಿನ ಆಡಳಿತವು ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಮೊದಲ ಬಾರಿಗೆ ಇಲ್ಲಿಗೆ ಬಂದಿರುವ ಲಕ್ನೋ ನಿವಾಸಿ ನ್ಯಾನ್ಸಿ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದರು. ಮಹಾ ಕುಂಭದಲ್ಲಿ ನನ್ನ ಅನುಭವವು ಇಲ್ಲಿಯವರೆಗೆ ಉತ್ತಮವಾಗಿದೆ ಎಂದು ಅವರು ಹೇಳಿದರು.
ನೆರೆಯ ಫತೇಪುರ್ ಜಿಲ್ಲೆಯ ನಿವಾಸಿ ಅಭಿಷೇಕ್, ಒಟ್ಟಾರೆ ಅನುಭವ ಉತ್ತಮವಾಗಿದೆ ಮತ್ತು ಯಾವುದೇ ಸಮಸ್ಯೆಗಳನ್ನು ಎದುರಿಸಲಿಲ್ಲ ಎಂದು ಹೇಳಿದರು. ಕಾನ್ಪುರದ ನಿವಾಸಿ ವಿಜಯ್ ಕಥೇರಿಯಾ ಅವರು ಮಹಾಕುಂಭದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಶ್ಲಾಘಿಸಿದರು.ನನ್ನ ಅನುಭವ ಉತ್ತಮವಾಗಿತ್ತು. ಭಕ್ತರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಭದ್ರತೆಯ ದಷ್ಟಿಯಿಂದ ಸಾಕಷ್ಟು ಪೊಲೀಸ್ ಪಡೆಯನ್ನು ನಿರ್ವಹಿಸಲಾಗಿದೆ ಎಂದು ಅವರು ಹೇಳಿದರು.