ಬೆಂಗಳೂರು : ಆಕಸ್ಮಿಕ ಅಗ್ನಿ ಅವಘಡವಾದರೆ ಹೀಗೆ ಮಾಡಿ… ಅಗ್ನಿ ಅನಾಹುತದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತೆ ಕುರಿತಂತೆ ಅಗ್ನಿಶಾಮಕ ದಳದ ಅಧಿಕಾರಿಗಳು ಅಭಿಮಾನಿ ಸಮೂಹ ಸಂಸ್ಥೆಯ ಸಿಬ್ಬಂದಿಗಳಿಗೆ ಅರಿವು ಮೂಡಿಸಿದರು.
ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಅಭಿಮಾನಿ ಪ್ರಕಾಶನದ ಅರಗಿಣಿ ಭವನದ ಮೇಲ್ಪಾವಣಿಯಲ್ಲಿ ಡಿಎಫ್ ಒ ಪ್ರದೀಪ್ ಜಿ.ಸಿ. ಮತ್ತವರ ಸಿಬ್ಬಂದಿಗಳು ಪ್ರಾತ್ಯಕ್ಷಿಕೆ ಪ್ರದರ್ಶಿಸುವ ಮೂಲಕ ಅಗ್ನಿ ಅನಾಹುತದಿಂದ ಪಾರಾಗುವುದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅರಗಿಣಿ ಭವನದಲ್ಲಿರುವ ವಿವಿಧ ಕಂಪೆನಿಗಳ ಉದ್ಯೋಗಿಗಳು ಹಾಜರಿದ್ದರು.







