ಆರಂಭದಲ್ಲಿ ಬರೀ ಜಗಳ, ಅರಚಾಟ ಕಿರುಚಾಟಗಳಿಂದ ರೇಜಿಗೆ ಹಿಡಿಸಿದ್ದ ಬಿಗ್ ಬಾಸ್ ಶೋ, ಕೊನೆ ಕೊನೆಯಲ್ಲಿ ಭಿನ್ನವಾದ ಟಾಸ್ಕ್ ಗಳ ಮೂಲಕ ಜನರ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಹಲವು ತಿರುಗುಗಳ ಮೂಲಕ ಯಶಸ್ವಿ ಹಾದಿಯತ್ತ ಮುನ್ನೆಡೆಯುತ್ತಿದೆ. ಕಳೆದ ವಾರ ಬಿಗ್ ಫೈಟ್ ಮೂಲಕ ಫೈನಲ್ ಪ್ರವೇಶಿಸಿರುವ ಹಳ್ಳಿ ಹೈದ ಹನುಮಂತ ಜೊತೆ ದೋಸ್ತ ಧನಂಜಯ ಆಚಾರ್ ಕೂಡ ಟಾಸ್ಕ್ ಗಳ ಮೂಲಕವೇ ಮಿಡ್ ನೈಟ್ ಎಲಿಮಿನೇಷನ್ ನಿಂದ ಪಾರಾಗಿದ್ದಾರೆ.
ಈವರೆಗಿನ ಬಿಗ್ ಬಾಸ್ ಸರಣಿಯಲ್ಲಿ ಪ್ರಬಲ ಸ್ಪರ್ಧಿಗಳು ಎಂದು ಬಿಂಬಿಸಿಕೊಂಡಿದ್ದ ರಜತ್, ವಿಕ್ರಂ ಮತ್ತು ಉಗ್ರಂ ಮಂಜು ಫಿನಾಲೆ ಪ್ರವೇಶದ ಟಾಸ್ಕ್ ಗಳಲ್ಲಿ ಕಳಪೆ ಸಾಧನೆ ಮೂಲಕ ಕೊನೆಯವರಾಗಿ ಉಳಿದಿದ್ದಾರೆ. ಎಮೋಷನಲ್ ಕಂಟೆಂಟ್ ಮೂಲಕ ಜನಪ್ರಿಯಳಾಗಿದ್ದ ಭವ್ಯ ಗೌಡ ಪ್ರಬಲ ಪ್ರಬಲ ಕಂಟೆಸ್ಟ್ ಆಗಿ ಹೊರಹೊಮ್ಮಿದ್ದಾರೆ.
ಧನಂಜಯ್ ಆಚಾರ್ ಮತ್ತು ಭವ್ಯ ಅವರ ನಡುವೆ ಟಾಸ್ಕ್ ಗಳ ಅಂಕಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಧನಂಜಯ್ ಆಚಾರ್ ಒಂದು ಹೆಜ್ಜೆ ಮುಂದೆ ಹೋಗಿ, ಮೆರಿಟ್ ನಲ್ಲಿ ಆಯ್ಕೆಯಾಗಿದ್ದರು. ಆದರೂ ಬಿಗ್ ಬಾಸ್ ನೀಡಿದ ಮಾತಿನಂತೆ ಸಹಸ್ಪರ್ಧಿಗಳ ಅಂಕಗಳಲ್ಲಿ ಶೇ.50 ರಷ್ಟು ಕಸಿದುಕೊಳ್ಳುವ ವಿಶೇಷ ಅಧಿಕಾರ ನೀಡಿದಾಗ, ವಿಜೇತ ಧನಂಜಯ್ ಆಚಾರ್ ಗೆ ನೀಡಿತು ಅಳೆದು ತೂಗಿ ಭವ್ಯ ಅವರ ಬುಟ್ಟಿಗೆ ಕೈಹಾಕಿ ಅಂಕ ಕಸಿದರು. ಇದರಿಂದ ಎರಡನೇ ಸ್ಥಾನದಲ್ಲಿದ್ದ ಭವ್ಯ ಸಹಜವಾಗಿಯೇ ಮೂರನೇ ಸ್ಥಾನಕ್ಕೆ ಕುಸಿದ್ದಾರೆ.
ಈ ವಿಷಯವಾಗಿ ಭವ್ಯ ಅಸಹನ ವ್ಯಕ್ತಪಡಿಸಿದ್ದಾರೆ. ಧನಂಜಯ್ ಈಗಾಗಲೇ ಫೈನಲ್ ಪ್ರವೇಶಿಸುವ ಅರ್ಹತೆ ಹೊಂದಿದ್ದರು, ಹಾಗಿದ್ದ ಮೇಲೆ ನಾನು ಕಷ್ಟಪಟ್ಟು ಆಟವಾಡಿ ಗಳಿಸಿದ ಅಂಕಗಳನ್ನು ಕಸಿದುಕೊಳ್ಳುವ ಅಧಿಕಾರ ನೀಡುವ ಅಗತ್ಯ ಏನಿತ್ತು ಸಾತ್ವಿಕ ಸಿಟ್ಟನ್ನು ಹೊರ ಹಾಕಿದ್ದಾರೆ.
ಟಾಸ್ಕ್ ಗಳಲ್ಲಿ ಧನಂಜಯ್ ಆಚಾರ್ಯ ಸ್ಟಾಟರ್ಜಿಗಳು ಚೆನ್ನಾಗಿ ಕೆಲಸ ಮಾಡಿವೆ. ಪಜಲ್ ಜೋಡಿಸುವುದರಲ್ಲಿ ದುರ್ಬಲ ಎನಿಸಿಕೊಂಡಿದ್ದ ವಿಕ್ರಂ ನನ್ನು ಎದುರಾಳಿಯಾಗಿ ಆಯ್ಕೆ ಮಾಡಿದ್ದು, ಗೆಲ್ಲಲು ನೋವನ್ನು ಮರೆತು ತೊಡಗಿಸಿಕೊಳ್ಳುವ ಮೋಕ್ಷಿತಾರನ್ನು ಸಹ ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಛಲಗಾತಿ ಎಂದೇ ಬಿಂಬಿಸಿಕೊಂಡಿರುವ ಭವ್ಯರನ್ನು ಉದ್ದೇಶಪೂರ್ವಕವಾಗಿ ದೂರ ಇಡುವ ಧನಂಜಯ ಅವರ ಲೆಕ್ಕಾಚಾರಗಳು ಫಲ ನೀಡಿದ್ದವು.
ಅಲ್ಟಿಮೇಟ್ ಕ್ಯಾಪ್ಟನ್ ಹಾಗೂ ಉಸ್ತುವಾರಿ ಹನುಮಂತು ಮೊದಲು ಮಾಡಿದ ಎಡವಟ್ಟು ಪುನರಾವರ್ತನೆಯಾಗಬಾರದು ಎಂಬ ಕಾರಣಕ್ಕೆ ರೂಲ್ಸ್ ಗಳನ್ನು ಕಣ್ಣಿಟ್ಟು ಓದುತ್ತಿದ್ದರು. ಆದರೂ ಒಂದೆರಡು ಸಣ್ಣಪುಟ್ಟ ಲೋಪಗಳಂತೂ ಉಸ್ತುವಾರಿಯಲ್ಲಿ ನಡೆಯಿತು. ಅದನ್ನು ಮೀರಿ ಬಿಗ್ ಬಾಸ್ ನ ದೋಸ್ತ್ ಗಳು ಫೈನಲ್ ಕಡಕಟೆಯಲ್ಲಿ ನಿಂತಿದ್ದಾರೆ.
ಉಗ್ರಂ ಮಂಜು ಅವರ ಆರ್ಭಟದ ಪ್ರಯೋಜನಕ್ಕೆ ಬರ್ಲಿಲ್ಲ. ನಿರೀಕ್ಷಿತ ಯಶಸ್ಸು ಪಡೆಯದ ಉಗ್ರಂ ಮಿಡ್ ನೈಟ್ ಎಲಿಮಿನೇಷನ್ ಮನೆಯಿಂದ ನಿರ್ಗಮಿಸಬಹುದು ಎಂಬ ವಿಷಾದದಲ್ಲಿದ್ದಂತಿದೆ. ತನ್ನ ಗೆಳತಿ ಹಾಗೂ ಮಾನಸ ಸಹೋದರಿಗೆ ನಿವಿಬ್ಬರೂ ಫೈನಲ್ ಉಳಿಯುತ್ತಿರಿ ಎಂದು ಬರೆದುಕೊಡುತ್ತೇನೆ ಎಂದು ಹೇಳುವ ಮೂಲಕ ತಾನು ಹೊರಟೆ ಎಂದು ಸಂದೇಶ ನೀಡಿದ್ದಾರೆ.
ಈವರೆಗೂ ಗೌತಮಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದ ಉಗ್ರಂ ಕೊನೆಗೆ ಮಾನಸ ಸಹೋದರಿ ಮೋಕ್ಷಿತ ಬಗ್ಗೆ ಮೃದುವಾದ ಮಾತುಗಳನಾಡಿದ್ದಾರೆ. ಆಕೆ ನನ್ನನ್ನು ಅಣ್ಣ ಎಂದು ಕರೆಯುತ್ತಿದ್ದಳು ಆಕೆಗಿರುವ ಮೆಚುರಿಟಿ ನನಗಿಲ್ಲದಾಯಿತು ಎಂದು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಈವರೆಗೂ ಗೆಳೆಯ ಗೆಳತಿಯ ಪಿಸುಗಾಟಗಳನ್ನೇ ಕೇಳಿದ್ದ ವೀಕ್ಷಕರಿಗೆ ಮಂಜು ಕೊನೆ ಹಂತದಲ್ಲಿ ತಂಗಿಯ ಹೆಸರಿನೊಂದಿಗೆ ಎಮೋಷನಲ್ ಗೇಮ್ ಆಡುತ್ತಿದ್ದಾರೆ ಎಂಬ ಅನುಮಾನ ಕಾಡಲಾರಂಭಿಸಿದೆ.
ಆಟದಲ್ಲಿ ಗೆಲ್ಲುವವರನ್ನು ಊಹೆ ಮಾಡಿಕೊಳ್ಳುವ ಮೂಲಕ ಗೆಲ್ಲಬಹುದಾದ ಅಂಕಗಳ ಅವಕಾಶದಲ್ಲಿ ಗೌತಮಿ ಎರಡು ಬಾರಿ ಯಶಸ್ವಿಯಾಗಿ ಆಟ ಆಡಿದ್ದಕ್ಕಿಂತಲೂ ಹೆಚ್ಚು ಅಂಕ ಗಳಿಸಿ ಪ್ರಬಲರು ಎನಿಸಿಕೊಂಡವರಿಗಿಂತ ಮುಂದೆ ಇದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದುರ್ಬಲರು-ಪ್ರಬಲರು, ಸ್ಟ್ರಾಂಗ್-ವೀಕ್ ಎಂಬ ಲೆಕ್ಕಾಚಾರಗಳಲ್ಲಿ ಸಾಕಷ್ಟು ಎಡವಟ್ಟುಗಳಾಗಿವೆ. ಪ್ರಬಲ ಸ್ಪರ್ಧಿಗಳು ಎಂದು ಹೇಳಲಾಗಿದ್ದ ವಿಕ್ರಂ, ರಜತ್ ಅವರು ಕೊನೆಯ ಟಾಸ್ಕ್ ಗಳಲ್ಲಿ ನಿತ್ರಾಣರಾಗಿ ಕಂಡುಬಂದಿದ್ದಾರೆ. ಆರಂಭದಲ್ಲಿ ಒಂದಷ್ಟು ಆಟಗಳಿಂದ ಹೊರಗುಳಿಯಬೇಕಾದ ಸಂದರ್ಭ ಬಂದಾಗ ವಿಕ್ರಂ ಆಟ ಗೊತ್ತಿದ್ದವನು ಕೈಕಟ್ಟಿ ಸುಮ್ನೆ ಕೂರುವುದು ಕಷ್ಟದ ಕೆಲಸ ಎಂದು ಚಡಪಡಿಸಿದರು. ಆದರೆ ಆಟ ಆಡುವ ಅವಕಾಶ ಸಿಕ್ಕಾಗ ನಿರೀಕ್ಷಿತ ಸಾಮರ್ಥ್ಯ ತೋರಿಸದೆ ವೈಫಲ್ಯ ಅನುಭವಿಸಿದ್ದರು. ಈ ಹತಾಶೆಯನ್ನು ಜೋಡಿಹಕ್ಕಿ ಭವ್ಯಾರ ಮೇಲೆ ವಿಕ್ರಂ ವ್ಯಕ್ತಪಡಿಸಿದರು.
ವಿಕ್ರಂ ಬಳಸಿದ ಕೆಲ ಅಸಂಸದೀಯ ಪದಗಳಿಗೆ ಬಿಗ್ ಬಾಸ್ ಭೀಫ್ ಸೌಂಡ್ ಹಾಕಬೇಕಾದ ಪರಿಸ್ಥಿತಿ ಬಂತು. ಭವ್ಯ ನನ್ನನ್ನು ತನ್ನ ಗೆಲುವಿಗೆ ಮೆಟ್ಟಿಲಾಗಿ ಬಳಸಿಕೊಂಡರು ಎಂದು ವಿಕ್ರಂ ಹೇಳಿದಾಗ ಖುದ್ದು ಭವ್ಯ ಸಿಟ್ಟಾಗಿ ದೂರ ಹೋಗಿದ್ದರು ಗಮನ ಸೆಳೆಯಿತು.
ಆರಂಭದಲ್ಲಿ ಜಗಳದ ಮೂಲಕ ಜನರ ಗಮನ ಸೆಳೆಯಲು ಯತ್ನಿಸಿ ಅಪವಾದಕ್ಕೆ ಗುರಿಯಾಗಿದ್ದ ಬಿಗ್ ಬಾಸ್ ಕೊನೆಗೆ ಮನುಷ್ಯರ ಮುಖವಾಡಗಳನ್ನು ಕಳಚುವ, ಗೆಲುವು-ಸೋಲುಗಳಿಗೆ ಕಾರಣವಾಗುವ ಮಾನಸಿಕ ಸ್ಥಿತಿಗಳ ಪರಿಚಯ ಮಾಡುವ ಮೂಲಕ ಹೊಸ ಸ್ವರೂಪ ಪಡೆದಿದೆ.