ಮಂಗಳೂರು, ಆ.1- ಧರ್ಮಸ್ಥಳ ಸುತ್ತಮುತ್ತ ಪ್ರದೇಶಗಳಲ್ಲಿ ಶವ ಹೂತಿಟ್ಟ ಸ್ಥಳಗಳ ಉತ್ಖನನ ಕಾರ್ಯ ಮುಂದುವರೆದಿದ್ದು, 6ನೇ ಪಾಯಿಂಟ್‌ನಲ್ಲಿ ಮತ್ತಷ್ಟು ಆಳವಾದ ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ. ಜೊತೆಗೆ 7ನೇ ಸ್ಥಳದಲ್ಲೂ ಉತ್ಖನನ ಆರಂಭಿಸಲಾಗಿದೆ.
6ನೇ ಜಾಗದಲ್ಲಿ 7 ಅಡಿ ಅಗೆದ ಬಳಿಕ 12 ಮೂಳೆಗಳಷ್ಟೇ ಅಲ್ಲ ಇಡೀ ಅಸ್ಥಿಪಂಜರವೇ ದೊರೆತಿವೆ ಎನ್ನಲಾಗಿದ್ದು, ಅದು ಪುರುಷ ವ್ಯಕ್ತಿಯದು ಎಂದು ಶಂಕಿಸಲಾಗಿದೆ. ಇಡೀ ಅಸ್ಥಿ ಪಂಜರದ ಪಳಯುಳಿಕೆಗಳನ್ನು ಸಂಗ್ರಹಿಸಲಾಗಿದೆ. ಉಡುಪಿಯ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಅಸ್ಥಿಗಳನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಅಧ್ಯಯನಕ್ಕೆ ಬೆಂಗಳೂರು ಅಥವಾ ಇತರೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸುವ ಸಾಧ್ಯತೆಯಿದೆ. ಅಸ್ಥಿ ಪಂಜರದ ಬಗ್ಗೆ ನಿಖರ ಮಾಹಿತಿ ಪಡೆದುಕೊಂಡು ಎಸ್‌ಐಟಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
6ನೇ ಸ್ಥಳದ ಉತ್ಖನದ ವೇಳೆ 3 ಅಡಿ ಅಗೆದಾಗ ಯಾವುದೇ ಕಳೇಬರಗಳು ದೊರೆಯದ ಕಾರಣಕ್ಕೆ ಅನಾಮಿಕ ದೂರುದಾರ ಉತ್ಖನನವನ್ನು ನಿಲ್ಲಿಸಿ, ಬೇರೆ ಜಾಗದಲ್ಲಿ ಅಗೆಯುವಂತೆ ಸಲಹೆ ನೀಡಿದ್ದ ಎನ್ನಲಾಗಿದೆ. ಅದರೆ ಅಧಿಕಾರಿಗಳು ಹಠ ಬಿಡದೆ ಜೆಸಿಬಿಯನ್ನೂ ಕರೆಸಿ ಸುಮಾರು 7 ಅಡಿ ಅಗೆದಾಗ ಅಸ್ಥಿಪಂಜರ ಪತ್ತೆಯಾಗಿದೆ.
ಇಂದು 6ನೇ ಪಾಯಿಂಟ್ ಜೊತೆಗೆ 7ನೇ ಪಾಯಿಂಟ್‌ನಲ್ಲೂ ಎಸ್‌ಐಟಿ ಅಧಿಕಾರಗಳು ಉತ್ಖನನ ನಡೆಸಿದ್ದಾರೆ. ಇನ್ನೂ ಮೊದಲ ಪಾಯಿಂಟ್‌ನಲ್ಲಿ ಸಿಕ್ಕಿದ್ದ ಗುರುತಿನ ಚೀಟಿಗಳನ್ನು ವಿಶ್ಲೇಷಣೆ ನಡೆಸಿದಾಗ ಅದರಲ್ಲಿ ಸುರೇಶ್ ಎಂಬ ವ್ಯಕ್ತಿಯ ಹೆಸರು ಪತ್ತೆಯಾಗಿದೆ. ಎಸ್‌ಐಟಿ ಅಧಿಕಾರಿಗಳು ಅದರಲ್ಲಿರುವ ನಂಬರ್‌ಗೆ ಕರೆ ಮಾಡಿದಾಗ ಫೋನ್ ಸ್ವಿಚ್‌ಆಫ್ ಬಂದಿದೆ. ಮಾಹಿತಿಯನ್ನು ಆಧರಿಸಿ, ಸುರೇಶ್ ಎಂಬ ವ್ಯಕ್ತಿಯನ್ನು ಹುಡುಕಿದಾಗ ಆತ ನೆಲಮಂಗಲ ತಾಲ್ಲೂಕಿನ ಗ್ರಾಮವೊಂದಕ್ಕೆ ಸೇರಿದವನು ಎಂದು ತಿಳಿದು ಬಂದಿದೆ.
ಆದರೆ ಕೆಲ ದಿನಗಳ ಹಿಂದೆ ಸುರೇಶ್ ಅಸ್ತಮ ಸಮಸ್ಯೆಯಿಂದ ಮೃತ ಪಟ್ಟಿದ್ದು, ಸ್ವಗ್ರಾಮದಲ್ಲೇ ಸಂಸ್ಕಾರ ಮಾಡಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದರು. ಆಗಿದ್ದರೆ ಮೊದಲ ಸ್ಥಳದಲ್ಲಿ ಸುರೇಶ್‌ಗೆ ಸಂಬಂಧಿಸಿದ ದಾಖಲಾತಿಗಳು ಪತ್ತೆ ಅಗಿದ್ದು ಹೇಗೆ ಎಂಬ ಅನುಮಾನ ಕಾಡಲಾರಂಭಿಸಿದೆ.
ಸುರೇಶ್ ಧರ್ಮಸ್ಥಳಕ್ಕೆ ಬಂದಿದಾಗ ಬಹುಶಃ ಜೇಬುಕಳ್ಳತನ ವಾಗಿರಬಹುದು ಅದನ್ನು ಕಳ್ಳರು ಎಸೆದಿದ್ದು ಅದು ಉತ್ಖನದ ವೇಳೆ ಪತ್ತೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
6ನೇ ಸ್ಥಳದ ಜೊತೆಗೆ ಇಂದು ಅನಾಮಿಕ ವ್ಯಕ್ತಿ ಗುರುತಿಸಿದ 7ನೇ ಸ್ಥಳದಲ್ಲೂ ಇಂದು ಉತ್ಖನನ ನಡೆಸಲಾಗುತ್ತಿದೆ. ಉತ್ಖನದ ವೇಳೆ ಪತ್ತೆಯಾಗುವ ಅಸ್ಥಿ ಹಾಗೂ ಇತರ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದ್ದು, ಸ್ಥಳದಲ್ಲೇ ಪಂಚನಾಮೆ ವರದಿಯನ್ನು ಸಿದ್ಧಪಡಿಸಿ, ಉಪ ವಿಭಾಗಾಧಿಕಾರಿ ತಹಸೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳ ಸಹಿ ಪಡೆಯಲಾಗುತ್ತಿದೆ.
ಎಸ್‌ಐಟಿಯ ಮುಖ್ಯಸ್ಥ ಪ್ರಣವ್ ಮೊಹಾಂತಿ ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ. ಈವರೆಗಿನ ಉತ್ಖನದಲ್ಲಿ ಲಭ್ಯವಾಗಿರುವ ಮಾಹಿತಿಗಳನ್ನು ಗೃಹ ಸಚಿವರ ಜೊತೆ ಹಂಚಿಕೊಂಡಿದ್ದಾರೆ. ಜೊತೆಗೆ ಕೇಂದ್ರ ಸೇವೆಗೆ ತೆರಳುವ ರಾಜ್ಯಸರ್ಕಾರದ ಅಧಿಕಾರ ಪಟ್ಟಿಯಲ್ಲಿ ಪ್ರಣವ್ ಮೊಹಾಂತಿ ಅವರ ಹೆಸರಿದೆ.
ಹೀಗಾಗಿ ಅವರು ಕೇಂದ್ರ ಸೇವೆಗೆ ತೆರಳಲಿದ್ದಾರೆಯೇ ಅಥವಾ ರಾಜ್ಯದಲ್ಲಿಯೇ ಉಳಿದು ಎಸ್‌ಐಟಿಯಲ್ಲಿ ಮುಂದುವರೆಯಲಿದ್ದಾರೆಯೇ ಎಂಬ ಗೊಂದಲಗಳಿವೆ.ಈ ಬಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿದ ಪ್ರಣವ್ ಮೊಹಾಂತಿ ತಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
- 14 ಜಿಲ್ಲೆಗಳ 42 ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಿದ ನಿಖಿಲ್ ಕುಮಾರಸ್ವಾಮಿ
- ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳುಹಿಸಿದ್ದ ಮೂವರು ಕಿಡಿಗೇಡಿಗಳ ಬಂಧನ
- ಚುನಾವಣಾ ಆಯೋಗವನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಿರುವುದೇಕೆ..? : ಡಿ.ಕೆ. ಸುರೇಶ್
- ಅರ್ಜುನ ಆನೆ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪನೆ : ಸಚಿವ ಖಂಡ್ರೆ
- ಗುಂಡಿ ಬಿದ್ದ ರಸ್ತೆಗಳಿಗೆ ಪ್ರಶಸ್ತಿ ನೀಡಿ ಬಿಬಿಎಂಪಿ ಕಾಲೆಳೆದ ಪ್ರಜ್ಞಾವಂತ ನಾಗರೀಕರು