ಬೆಂಗಳೂರು,ಆ.12-ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರುದಾರ ಗುರುತಿಸಿರುವ 13ನೇ ಸ್ಥಳದಲ್ಲಿ ಡ್ರೋನ್ ಜಿಪಿಆರ್ ಮೂಲಕ ಎಸ್‌ಐಟಿ ಇಂಚಿಂಚೂ ಕಾರ್ಯಾಚರಣೆ ನಡೆಸುತ್ತಿದೆ.
ದೆಹಲಿಯಿಂದ ನಾಲ್ವರ ಜಿಪಿಆರ್ ತಂಡ ಮಂಗಳೂರಿಗೆ ನಿನ್ನೆ ಬಂದಿದ್ದು, ಇಂದು ಎಸ್‌ಐಟಿ ತಂಡ ಈ ಸ್ಥಳದಲ್ಲಿ ಡ್ರೋನ್ ಜಿಪಿಆರ್ ಮೂಲಕ ಅಸ್ಥಿಪಂಜರದ ಅವಶೇಷಗಳೇನಾದರೂ ಪತ್ತೆಯಾಗಬಹುದೇ ಎಂಬುವುದನ್ನು ಎದುರು ನೋಡುತ್ತಿದೆ.
ದೂರುದಾರ ಗುರುತಿಸಿರುವ 13ನೇ ಸ್ಥಳ ನೇತ್ರಾವತಿ -ಅಜೆಕುರಿ ರಸ್ತೆಯ ನೇತ್ರಾವತಿ ನದಿ ಪಕ್ಕದಲ್ಲೇ ಇರುವ ಕಿಂಡಿ ಅಣೆಕಟ್ಟಿನ ಸಮೀಪವಿರುವುದರಿಂದ ಉತ್ಖನನ ಕಾರ್ಯಾ ಕ್ರಿಷ್ಟಕರವಾಗಿತ್ತು. ಆದ್ದರಿಂದ ಎಸ್‌ಐಟಿ ಜಿಪಿಆರ್ ತಂಡದ ನೆರವು ಪಡೆದುಕೊಂಡಿದೆ. ನಿನ್ನೆ ಮಧ್ಯಾಹ್ನ 3 ಗಂಟೆಯಿಂದ 3.30 ರವರೆಗೆ ಡ್ರೋನ್ ಜಿಪಿಆರ್‌ನ ಪ್ರಯೋಗಿಕ ಕಾರ್ಯಾಚರಣೆ ನಡೆಯಿತು.
ನಂತರ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ 30 ಅಡಿ ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿದ್ದರು. ಇದೀಗ ಸ್ಥಳದಲ್ಲಿ ಎಸ್‌ಐಟಿ ತಂಡದ ನೇತೃತ್ವದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ ನಡೆಯುತ್ತಿದೆ.
ಬಿಗಿ ಬಂದೋಬಸ್ತ್: ಜಿಪಿಆರ್ ಪರಿಶೀಲನೆ ನಡೆಸುತ್ತಿರುವುದರಿಂದ ನೇತ್ರಾವತಿ ಅಜಿಕುರಿ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ .ರಸ್ತೆಯ ಎರಡೂ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ.
- ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ : ಸಚಿವ ಮಧು ಬಂಗಾರಪ್ಪ
- ಧರ್ಮಸ್ಥಳ ಪ್ರಕರಣ : 13ನೇ ಸ್ಥಳದಲ್ಲಿ ಜಿಪಿಆರ್‌ನಿಂದ ಇಂಚಿಂಚೂ ಪರಿಶೀಲನೆ
- 12 ವರ್ಷದ ಬಾಲಕಿ ಮೇಲೆ 200 ಬಾರಿ ಅತ್ಯಾಚಾರ..!
- ಸಾಲ ತೀರಿಸಲು ಕೆಲಸ ನೀಡಿದ್ದ ಮಾಲೀಕರ ಮನೆಯಲ್ಲೇ ಕಳ್ಳತನ ಮಾಡಿದವನ ಸೆರೆ, 89 ಲಕ್ಷ ಮೌಲ್ಯದ ಚಿನ್ನಾಭರಣ ವಶ
- ಬೆಂಗಳೂರಿಗರೇ, ಡೇಟಾ ಸೆಂಟರ್ಗಳಿಗೆ ಬಾಡಿಗೆ ಕೊಡುವಾಗ ಎಚ್ಚರ