ಬೆಂಗಳೂರು, ಆ.29- ಧರ್ಮಸ್ಥಳದ ವಿಚಾರಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ನ್ಯಾಯಾಲಯದ ಅದೇಶದ ಮೇರೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ಅದನ್ನು ತಪ್ಪು ಎನ್ನುವುದಾದರೆ, ನ್ಯಾಯಾಲಯದಲ್ಲೇ ಪ್ರಶ್ನೆ ಮಾಡಬೇಕಿತ್ತು ಎಂದು ಲೋಕೋ ಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ರಾಜ್ಯಸರ್ಕಾರವನ್ನು ಟೀಕಿಸಲು ಸರಿಯಾದ ವಿಚಾರಗಳಿಲ್ಲ. ಹೀಗಾಗಿ ಅನಗತ್ಯವಾಗಿ ವಿವಾದ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮೊದಲೆಲ್ಲಾ ಗ್ಯಾರಂಟಿ ಯೋಜನೆಗಳ ವಿರುದ್ದ ಟೀಕೆ ಮಾಡುವ ಪ್ರಯತ್ನ ಮಾಡಿದರು. ಅದನ್ನು ಯಾರೂ ಕೇಳಲಿಲ್ಲ. ಅನಂತರ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುವ ಪ್ರಯತ್ನ ಮಾಡಿದರು. ಅದರಿಂದ ಯಾವುದೇ ಪ್ರಯೋಜನವಾಗ ದಿದ್ದಾಗ, ಈಗ ಧರ್ಮಸ್ಥಳದ ವಿಚಾರ ಹಿಡಿದು ಕೊಂಡಿದ್ದಾರೆ ಎಂದರು.
ಇದರಲ್ಲಿ ಕಾಂಗ್ರೆಸ್‌ನ ಪಾತ್ರ ಏನೂ ಇಲ್ಲ. ರಾಜ್ಯಸರ್ಕಾರಕ್ಕೆ ಇದರಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ. ದೂರು ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದೆ. ಅದರ ಆಧಾರದ ಮೇಲೆ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ. ಬಿಜೆಪಿಯವರು ದಿಕ್ಕು ತಪ್ಪಿಸಲು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಬೂಕರ್ ಪ್ರಶಸ್ತಿ ಪಡೆದಿದ್ದ ಬಾನು ಮುಷ್ತಾಕ್ ರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಬಿಜೆಪಿ ಯವರು ಎಲ್ಲವನ್ನೂ ವಿರೋಧಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಈ ಹಿಂದೆಲ್ಲಾ ಹಲವಾರು ಸಾಹಿತಿಗಳು, ಚಿಂತಕರು ಹಾಗೂ ಪ್ರಶಸ್ತಿ ವಿಜೇತರನ್ನು ಆಹ್ವಾನಿಸಿ ದಸರಾವನ್ನು ಉದ್ಘಾಟಿಸಲಾಗಿದೆ. ಅದರಂತೆ ಈ ಬಾರಿಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.
ವಿಧಾನಮಂಡಲದಲ್ಲಿ ಆರ್‌ಎಸ್‌ಎಸ್‌ನ ಪ್ರಾರ್ಥನ ಗೀತೆ ಹಾಡಿದ ಕಾರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕ್ಷಮೆ ಕೇಳಿರುವುದು ಪಕ್ಷದ ಹಿತ ದೃಷ್ಠಿಯಿಂದ ಒಳ್ಳೆಯದು. ಇಲ್ಲವಾದರೆ ಅದು ಬೇರೆ ಬೇರೆ ರೀತಿಯ ವ್ಯಾಖ್ಯಾನ, ಚರ್ಚೆಗಳಿಗೆ ಕಾರಣವಾಗಿ ಗೊಂದಲಗಳಾಗುತ್ತಿದ್ದವು. ಕ್ಷಮೆ ಕೇಳುವ ಮೂಲಕ ಎಲ್ಲವೂ ಬಗೆ ಹರಿದಿದೆ ಎಂದರು.
ರಾಜಣ್ಣ ಅವರ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ತಮ ಸಹಮತ ಇದೆ. ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಕೊಟ್ಟಂತೆ, ರಾಜಣ್ಣ ಅವರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆಗಳ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.
- ಈ ಸಂಜೆ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಲಮಂಡಳಿಯಿಂದ ರಸ್ತೆ ದುರಸ್ತಿ
- ಅಭಿಮಾನ್ ಸ್ಟುಡಿಯೋ ಮುಟ್ಟುಗೋಲಿಗೆ ಡಿಸಿಗೆ ಅರಣ್ಯ ಇಲಾಖೆ ಪತ್ರ
- ಧರ್ಮಸ್ಥಳದ ಪ್ರಕರಣ : ಬಿಜೆಪಿಗೆ ಸತೀಶ್ ಜಾರಕಿಹೊಳಿ ತಿರುಗೇಟು
- ಟ್ರಂಪ್ ಆರೋಗ್ಯದ ಬಗ್ಗೆ ಊಹಾಪೋಹದ ಬೆನ್ನಲ್ಲೇ ಅಧ್ಯಕ್ಷನಾಗಲು ನಾನು ಸಿದ್ಧ ಎಂದ ವ್ಯಾನ್ಸ್
- ಆರ್ಥಿಕ ಸ್ಥಿರತೆಯಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ : ಪ್ರಧಾನಿ ಮೋದಿ