Friday, August 8, 2025
Homeರಾಜ್ಯಧರ್ಮಸ್ಥಳ ಪ್ರಕರಣ : 14ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರಗಳಿಗಾಗಿ ಎಸ್‌‍ಐಟಿ ಹುಡುಕಾಟ

ಧರ್ಮಸ್ಥಳ ಪ್ರಕರಣ : 14ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರಗಳಿಗಾಗಿ ಎಸ್‌‍ಐಟಿ ಹುಡುಕಾಟ

Dharmasthala case: SIT searches for skeletons at 13th point

ಬೆಂಗಳೂರು,ಆ.6- ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಸಾವುಗಳ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಇಂದು 14ನೇ ಪಾಯಿಂಟ್‌ನಲ್ಲಿ ಉತ್ಖನನ ನಡೆಸಲಿದ್ದಾರೆ.ಈ ಮೊದಲು ಬಂಗ್ಲಗುಡ್ಡದಲ್ಲಿ ತಾನು ತೋರಿಸಿದ್ದ ಜಾಗ ಹೊರತುಪಡಿಸಿ ಮತ್ತೊಂದು ಸ್ಥಳಕ್ಕೆ ಎಸ್‌‍ಐಟಿ ಅಧಿಕಾರಿಗಳನ್ನು ಅನಾಮಧೇಯ ವ್ಯಕ್ತಿ ಕರೆದುಕೊಂಡು ಹೋಗಿದ್ದ.

ಅಲ್ಲಿ ಭೂಮಿಯ ಮೇಲ್ಭಾಗದಲ್ಲೇ ಹಲವಾರು ಅಸ್ಥಿಗಳು ದೊರೆತ್ತಿದ್ದವು ಅವುಗಳನ್ನು ಜಪ್ತಿ ಮಾಡಿರುವ ಎಸ್‌‍ಐಟಿ ಅಧಿಕಾರಿಗಳು ಬಹುಶಃ ಬಂಗ್ಲಗುಡ್ಡದ ಮೇಲೆ ಆತಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿರಬಹುದು, ಹೀಗಾಗಿ ಭೂಮಿಯ ಮೇಲ್ಭಾಗದಲ್ಲಿ ಸಿಕ್ಕಿರುವ ಅಸ್ತಿಗಳ ಕುರಿತು ತನಿಖೆ ನಡೆಸಬೇಕೆ? ಬೇಡವೇ? ಎಂಬ ಗೊಂದಲದಲ್ಲಿ ಎಸ್‌‍ಐಟಿ ಅಧಿಕಾರಿಗಳು ಇದ್ದಾರೆ.

ಇದರ ನಡುವೆ 14ನೇ ಪಾಯಿಂಟ್‌ನಲ್ಲಿ ಬಹುತೇಕ ಕೊನೆಯ ಹಂತದ ಕಾರ್ಯಚರಣೆ ನಡೆಸಲಾಗುತ್ತಿದೆ. 13ನೇ ಪಾಯಿಂಟ್‌ನಲ್ಲಿ ಶವಗಳು ಸಿಕ್ಕೇ ಸಿಗುತ್ತವೆ ಎಂದು ಸುಜಾತಭಟ್‌ ಅವರ ವಕೀಲ, ಮಂಜುನಾಥ್‌ ಹೇಳಿರುವುದು ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

13ನೇ ಪಾಯಿಂಟ್‌ನಲ್ಲಿ ಸುತ್ತಲೂ ಹುಲ್ಲು ಬೆಳೆದಿದ್ದು, ಅನಾಮಿಕ ಗುರುತಿಸಿದ ಸ್ಥಳದಲ್ಲಿ ಮಾತ್ರ ಖಾಲಿ ಇದೆ. ಅದರ ಅರ್ಥ ಈ ಸ್ಥಳದಲ್ಲಿ ಪೂರ್ವನಿಯೋಜಿತವಾಗಿ ಅಸ್ತಿಗಳನ್ನು ತಂದಿಟ್ಟಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ತಕ್ತಪಡಿಸಿದ್ದಾರೆ. 2018-19ರ ಮೊದಲು 13ನೇ ಪಾಯಿಂಟ್‌ ಗುರುತಿಸಿದ ಸ್ಥಳ ನೀರಿನ ಹರಿವಿನ ಜಾಗವಾಗಿತ್ತು. ನೆರೆಯ ಹಾವಳಿನಿಂದ ಕೊರಕಲು ಉಂಟಾಗಿದ್ದು, ಮಣ್ಣನ್ನು ಹಾಕಿ ಕೃತಕವಾಗಿ ಅಲ್ಲಿ ಬಯಲು ಪ್ರದೇಶವನ್ನು ನಿರ್ಮಾಣಿಸಲಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.

ನೇತ್ರಾವತಿ ಸ್ನಾನದ ಕಿಂಡಿ ಅಣೆಕಟ್ಟು ಸಮೀಪ ರಸ್ತೆ ಬದಿಯಲ್ಲಿರುವ ಈ ಸ್ಥಳದಲ್ಲಿ ಶವಗಳು ಸಿಗುತ್ತವೆ ಎಂಬ ಅನಾಮಿಕ ದೂರುದಾರನ ಖಚಿತ ವಿಶ್ವಾಸ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತನ್ನು ಕೈಗೊಂಡಿದ್ದಾರೆ.

ಈವರೆಗೂ ಪರಿಶೀಲಿಸಲಾಗದ 13 ಸ್ಥಳಗಳ ಜೊತೆಗೆ 14ನೇ ಕಾರ್ಯಚರಣೆಯಾಗಿ 13ನೇ ಪಾಯಿಂಟ್‌ ಅನ್ನು ಅಗೆಯಲಾಗಿತ್ತು. ಈ ಮೊದಲಿನ ಉತ್ಖನದಲ್ಲಿ ಎಸ್‌‍ಐಟಿ ಅಧಿಕಾರಿಗಳು ತಮ ತನಿಖೆಗೆ ಗಂಭೀರ ಎಂದು ಪರಿಗಣಿಸಬಹುದಾದ ಮಾಹಿತಿಗಳು ಅಥವಾ ಪುರಾವೆಗಳು ಪತ್ತೆಯಾಗಿಲ್ಲ ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ.ಈ ನಡುವೆ ಅನಾಮಿಕ ದೂರುದಾರ ಮತ್ತೇ 17 ಸ್ಥಳಗಳನ್ನು ಗುರುತಿಸುವುದಾಗಿ ಹೇಳಿರುವುದು ಎಸ್‌‍ಐಟಿ ಅದನ್ನು ಪರಿಗಣಿಸದಿರುವುದು ಮತ್ತಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ.

ಆಡಳಿತ ಪಕ್ಷದ ವಕ್ತಾರರು ಆಗಿರುವ ವಕೀಲ ಸೂರ್ಯಮುಕುಂದ ರಾಜ್‌ ಎಸ್‌‍ಐಟಿಯ ಎಸ್‌‍ಪಿ ಜಿತೇಂದ್ರ ದಯಾಮ ಅವರ ಹಿನ್ನೆಲೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದು, ಎಸ್‌‍ಐಟಿ ತನಿಖೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.

RELATED ARTICLES

Latest News