Wednesday, August 13, 2025
Homeರಾಜ್ಯಧರ್ಮಸ್ಥಳ ಪ್ರಕರಣ : ನಾಳೆ ಎಸ್‌‍ಐಟಿ ಕೈಸೇರಲಿದೆ 13ನೇ ಸ್ಥಳದ ಜಿಪಿಆರ್‌ ವರದಿ

ಧರ್ಮಸ್ಥಳ ಪ್ರಕರಣ : ನಾಳೆ ಎಸ್‌‍ಐಟಿ ಕೈಸೇರಲಿದೆ 13ನೇ ಸ್ಥಳದ ಜಿಪಿಆರ್‌ ವರದಿ

Dharmasthala case: SIT to receive GPR report of 13th location tomorrow

ಬೆಂಗಳೂರು,ಆ.13- ಧರ್ಮಸ್ಥಳ ಸ್ನಾನ ಘಟ್ಟದ ಬಳಿ ಅನಾಮಿಕ ವ್ಯಕ್ತಿ ಗುರುತಿಸಿರುವ 13 ನೇ ಸ್ಥಳದಲ್ಲಿ ಜಿಪಿಆರ್‌ ಬಳಸಿ ನಡೆಸುತ್ತಿದ್ದ ಶೋಧ ಕಾರ್ಯ ಮುಗಿದಿದ್ದು ಅದರ ವರದಿಯನ್ನು ತಂಡ ಇಂದು ಅಥವಾ ನಾಳೆ ಎಸ್‌‍ಐಟಿಗೆ ನೀಡಲಿದೆ.

ಈ ತಂಡ ನೀಡುವ ವರದಿ ಆಧಾರದ ಮೇಲೆ ಎಸ್‌‍ಐಟಿ ಉತ್ಖನನವನ್ನು ಆರಂಭಿಸಲಿದೆ. ಸೋಮವಾರ ದೆಹಲಿಯಿಂದ ಮಂಗಳೂರಿಗೆ ಬಂದ ಜಿಪಿಆರ್‌ ತಂಡ ಅಂದು ಪ್ರಯೋಗಿಕವಾಗಿ 13ನೇ ಸ್ಥಳದಲ್ಲಿ ಪರಿಶೀಲಿಸಿತು.ಆ ಸ್ಥಳದಲ್ಲಿದ್ದ ಗಿಡಗಂಟೆಗಳನ್ನು ತೆರವುಗೊಳಿಸಿ ನಿನ್ನೆ ಅನಾಮಿಕ ತೋರಿಸಿರುವ ಜಾಗದಲ್ಲಿ ಇಂಚಿಂಚೂ ಪರಿಶೀಲಿಸಿದೆ.

ಈ ನಡುವೆ 13 ನೇ ಸ್ಥಳದಲ್ಲಿ ಎಸ್‌‍ಐಟಿ ಉತ್ಖನನ ಆರಂಭಿಸಿದ್ದು, 10 ಅಡಿ ಅಗಲ ಹಾಗೂ 10 ಅಡಿ ಆಳ ಗುಂಡಿ ತೆಗೆದರಾದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಕ್ಕಿಲ್ಲ. ಇದುವರೆಗೂ ಉತ್ಖನನ ಮಾಡಿರುವ 16 ಸ್ಥಳಗಳಲ್ಲಿ ದೂರುದಾರ ಹೇಳಿರುವಂತೆ ಯಾವುದೇ ಮಹತ್ವದ ಸಾಕ್ಷ್ಯಾಗಳು ಲಭ್ಯವಾಗದ ಕಾರಣ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌‍ಐಟಿ ಚಿಂತನೆ ನಡೆಸುತ್ತಿದೆ.

6ನೇ ಸ್ಥಳದಲ್ಲಿ ಮಾತ್ರ ಕೆಲವು ಮೂಳೆಗಳು ಸಿಕ್ಕಿದ್ದು, ಉಳಿದ ಯಾವುದೇ ಜಾಗಗಳಲ್ಲೂ ಮಹತ್ವರವಾದ ಕುರುಹುಗಳು ಸಿಕ್ಕಿಲ್ಲ.ದೂರುದಾರ ತೋರಿಸಿರುವ ಜಾಗಗಳಲ್ಲಿ ಎಸ್‌‍ಐಟಿ ಉತ್ಖನನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ.ಹಾಗಾಗಿ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌‍ಐಟಿ ನಿರ್ಧರಿಸುತ್ತಿದೆ.

ಉತ್ಖನನ ಆರಂಭ:
ನಿನ್ನೆ ಶೋಧ ನಡೆಸಿದ 13ನೇ ಸ್ಥಳದ ಪಕ್ಕದಲ್ಲಿ ಇಂದು ಎರಡು ಜೆಸಿಬಿಗಳಿಂದ ಉತ್ಖನನ ಕಾರ್ಯ ಆರಂಭವಾಗಿದೆ.

RELATED ARTICLES

Latest News