Saturday, September 6, 2025
Homeರಾಜ್ಯಧರ್ಮಸ್ಥಳ ಪ್ರಕರಣ : ಯೂಟ್ಯೂಬರ್‌ಗಳಿಗೆ ಸಂಕಷ್ಟ

ಧರ್ಮಸ್ಥಳ ಪ್ರಕರಣ : ಯೂಟ್ಯೂಬರ್‌ಗಳಿಗೆ ಸಂಕಷ್ಟ

Dharmasthala case: YouTubers in trouble

ಬೆಳ್ತಂಗಡಿ,ಸೆ.5- ಯೂ ಟ್ಯೂಬರ್‌ ಅಭಿಷೇಕ್‌ನನ್ನು ಎಸ್‌‍ಐಟಿ ಮೂರನೇ ದಿನವಾದ ಇಂದೂ ಸಹ ವಿಚಾರಣೆಗೊಳಪಡಿಸಿ ಬುರುಡೆ ಪ್ರಕರಣ ಸಂಬಂಧ ಹಲವು ಮಾಹಿತಿಗಳನ್ನು ಪಡೆದುಕೊಂಡಿದೆ.

ಯೂ ಟ್ಯೂಬ್‌ನಲ್ಲಿ ಬಿತ್ತರಗೊಂಡಿದ್ದ ವಿಡಿಯೋ ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್‌ಗೆ ಎಸ್‌‍ಐಟಿ ಅಧಿಕಾರಿಗಳು ನೋಟೀಸ್‌‍ ನೀಡಿದ್ದರು. ಹಾಗಾಗಿ ಮೊನ್ನೆ ಅಭಿಷೇಕ್‌ ಎಸ್‌‍ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾನೆ.

ಹೊರಗೆ ಹೋದರೆ ಜೀವ ಭಯವಿರುವುದಾಗಿ ಅಭಿಷೇಕ್‌ ಎಸ್‌‍ಐಟಿ ಕಚೇರಿಯಲ್ಲೇ ಉಳಿದುಕೊಂಡಿದ್ದಾನೆಂಬ ಮಾಹಿತಿ ಲಭ್ಯವಾಗಿದೆ.ನಿನ್ನೆ ಎಸ್‌‍ಐಟಿ ಕಚೇರಿಯಲ್ಲಿ ಮತ್ತೆ ಅಭಿಷೇಕ್‌ನನ್ನು ವಿಚಾರಣೆಗೊಳಪಡಿಸಿದ್ದ ಅಧಿಕಾರಿಗಳು ಇಂದು ಮತ್ತೆ ಆತನನ್ನು ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ ಎಂಬುದು ಗೊತ್ತಾಗಿದೆ.
ವಿಚಾರಣೆ ವೇಳೆ ಹೆಚ್ಚಿನ ಲೈಕ್ಸ್ ಗೋಸ್ಕರ ವಿಡಿಯೋ ಹರಿಬಿಟ್ಟಿದ್ದಾಗಿ ಎಸ್‌‍ಐಟಿ ಮುಂದೆ ಹೇಳಿ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಕೇರಳದ ಯೂ ಟ್ಯೂಬರ್‌ಗೆ ನೋಟೀಸ್‌‍ :
ಕೇರಳದ ಯೂ ಟ್ಯೂಬರ್‌ ಮನಾಫ್‌ಗೂ ಎಸ್‌‍ಐಟಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮನಾಫ್‌ ವಿಡಿಯೋ ಮಾಡಿ ಕೇರಳದಲ್ಲಿ ಭಾರೀ ಸಂಚಲನ ಮಾಡಿದ್ದನು.

ಲಾರಿ ಮಾಲೀಕನೂ ಆಗಿರುವ ಯೂ ಟ್ಯೂಬರ್‌ ಮನಾಫ್‌ ಈ ಪ್ರಕರಣದ ಚಿನ್ನಯ್ಯ, ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ತಂಗಿದ್ದಾಗ ಅಲ್ಲಿಗೂ ತೆರಳಿ ಚಿನ್ನಯ್ಯನನ್ನು ಮಾತನಾಡಿಸಿ, ಮಾಹಿತಿ ಪಡೆದುಕೊಂಡಿದ್ದ ಎಂಬುದು ಗೊತ್ತಾಗಿದೆ. ಹಾಗಾಗಿ ಮನಾಫ್‌ಗೂ ಸಹ ವಿಚಾರಣೆಗೆ ಹಾಜರಾಗುವಂತೆ ಇದೀಗ ನೋಟೀಸ್‌‍ ನೀಡಲಾಗಿದೆ.

ಒಟ್ಟಾರೆ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಯೂ ಟ್ಯೂಬರ್‌ಗಳು ಎಸ್‌‍ಐಟಿ ವಿಚಾರಣೆಗೊಳಪಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಹಲವಾರು ಯೂ ಟ್ಯೂಬರ್‌ಗಳು ಹೆಚ್ಚು ಹೆಚ್ಚು ಲೈಕ್ಸ್ ಗಳಿಗಾಗಿ ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಭಿನ್ನಭಿನ್ನವಾಗಿ ಬಿತ್ತರಿಸಿದ್ದರು.

RELATED ARTICLES

Latest News