ಹುಬ್ಬಳ್ಳಿ,ಆ.11- ಎಸ್‌ಐಟಿ ಹೆಸರಲ್ಲಿ ಧರ್ಮಸ್ಥಳ ಹಾಗೂ ಹಿಂದೂ ಧಾರ್ಮಿಕ ಶ್ರದ್ಧೆಯ ಮೇಲೆ ಮತ್ತು ನಂಬಿಕೆಯ ಮೇಲೆ ಆಘಾತವನ್ನುಂಟು ಮಾಡುತ್ತಿವೆ. ಲೆಪ್ಟಿಸ್ಟ್ ಗಳ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಅವರು, ಲೆಪ್ಟಿಸ್ಟ್‌ಗಳು ಹಿಂದೂತ್ವದ, ಹಿಂದೂ ಧಾರ್ಮಿಕತೆಗೆ ದಕ್ಕೆಯನ್ನುಂಟು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದಾಗ, ವ್ಯವಸ್ಥಿತ ರೀತಿಯಲ್ಲಿ ತನಿಖೆ ಮಾಡುವಂತೆ ಹೇಳಿದ್ದೇವು.
ಆದರೆ ಈಗ ಎಸ್‌ಐಟಿ ತನಿಖೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಮಾಸ್ಕ್ ಧರಿಸಿದ ವ್ಯಕ್ತಿ ರಾತ್ರಿ ಎಲ್ಲಿ ಹೋಗ್ತಾನೆ. ಏನು ಮಾಡ್ತಾನೆ ಎಂಬುವುದು ಗೊತ್ತಿಲ್ಲ. ಎಸ್‌ಐಟಿ ಹಾಗೂ ಪೊಲೀಸ್ ಕಸ್ಟಡಿಯಲ್ಲಿ ಇರಲ್ಲ. ಇದೆಲ್ಲವನ್ನೂ ನೋಡಿದರೇ ಷಡ್ಯಂತ್ರದಿಂದ ಹಿಂದುತ್ವದ ನಂಬಿಕೆಗೆ ದಕ್ಕೆ ಉಂಟು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ಇನ್ನೂ ಅನ್ಯಧರ್ಮದ ಜಾಗದಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೇ, ಒಡೆಯುವ ತಾಕತ್ತು ಇದೆಯಾ..? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
13ನೇ ಜಾಗದಲ್ಲಿ ಜಿಪಿಆರ್ ಯಂತ್ರದಿಂದ ಪರಿಶೀಲನೆ
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರದಾರ ತೋರಿಸಿರುವ 13ನೇ ಜಾಗದಲ್ಲಿ ಜಿಪಿಆರ್ ತಂಡ ಪರಿಶೀಲನೆ ನಡೆಸಲಿದೆ.ಜಿಪಿಆರ್ ತಂಡ ಇಂದು ಅಥವಾ ನಾಳೆ ದೆಹಲಿಯಿಂದ ಧರ್ಮಸ್ಥಳಕ್ಕೆ ಬರಲಿದೆ.
ದೂರುದಾರ ಗುರುತಿಸಿರುವ 13ನೇ ಸ್ಥಳವು ನೇತ್ರಾವತಿ ದಡದಲ್ಲಿದೆ. ನೇತ್ರಾವತಿ ಸ್ನಾನ ಘಟ್ಟದ ಸಮೀಪವಿರುವುದರಿಂದ ಉತ್ಖನನ ಮಾಡಿಲ್ಲ. ಹಾಗಾಗಿ ಜಿಪಿಆರ್ ನಿಂದ ಪರಿಶೀಲಿಸಿದ ನಂತರ ಅಸ್ಥಿಪಂಜರ ಇದೆಯೇ, ಇಲ್ಲವೇ ಎಂಬುವುದು ಗೊತ್ತಾಗಲಿದೆ.
ತದ ನಂತರವಷ್ಟೆ ಈ ಜಾಗದಲ್ಲಿ ಉತ್ಖನನ ನಡೆಯಲಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.ನಿನ್ನೆ ಭಾನುವಾರವಾದ್ದರಿಂದ ಉತ್ಖನನ ನಡೆದಿಲ್ಲ. ಶನಿವಾರ 16ನೇ ಜಾಗದಲ್ಲಿ ಉತ್ಖನನ ಮಾಡಿದಾಗ ಯಾವುದೇ ಅಸ್ಥಿಪಂಜರದ ಕುರುಹುಗಳು ಸಿಕ್ಕಿಲ್ಲ. 6ನೇ ಸ್ಥಳದಲ್ಲಿ ಉತ್ಖನನ ಮಾಡಿದಾಗ ಮಾನವನ ಅಸ್ಥಿಪಂಜರದ ಮೂಳೆಗಳು ಪತ್ತೆಯಾಗಿದ್ದವು . ಅವುಗಳನ್ನು ಈಗಾಗಲೇ ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ.ವರದಿ ಬಂದ ನಂತರವಷ್ಟೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ ಎಂದು ಅವರು ಹೇಳಿದ್ದಾರೆ.
ಇಂದು ದೂರುದಾರ ಗುರುತಿಸಿರುವ 17ನೇ ಸ್ಥಳದಲ್ಲಿ ಎಸ್‌ಐಟಿ ಉತ್ಖನನ ನಡೆಸಲಿದೆ.
- ರಕ್ತದ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾದ “ಕಾರ್ ಟಿ-ಸೆಲ್ ಥೆರಪಿ”: ಕಿರಣ್ ಮಂಜುಂದಾರ್ ಶಾ
- ಕೆ.ಎನ್.ರಾಜಣ್ಣ ತಲೆದಂಡ : ಸಚಿವ ಸ್ಥಾನದ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
- ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸ್ಪೀಕರ್ ಖಾದರ್ ಗರಂ
- ಸ್ಮಾರ್ಟ್ ಮೀಟರ್ ಅವ್ಯವಹಾರ : ಮೇಲ್ಮನೆಯಲ್ಲಿ ಗದ್ದಲ-ಕೋಲಾಹಲ
- ಗೋ ಹತ್ಯೆಗೈದು ವಿಕೃತಿ ಮೆರೆದ ಕಿಡಿಗೇಡಿಗಳು