ಬೆಂಗಳೂರು, ಜ.11- ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಸ್ಯಾಂಡಲ್ವುಡ್ನಲ್ಲೂ ಸಂಭ್ರಮ ಮನೆ ಮಾಡುತ್ತದೆ. ಅದಕ್ಕೆ ಕಾರಣವಾಗಿರುವುದು ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ. ಚಿತ್ರರಂಗದಲ್ಲಿ ಸಾಕಷ್ಟು ಬ್ಯುಜಿಯಾಗಿರುವ ಧ್ರುವಸರ್ಜಾ ಈಗ ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಜಿಯಾಗಿದ್ದಾರೆ.
ಇನ್ನು ಟ್ರೈಲರ್ ಮೂಲಕವೇ ಅಭಿಮಾನಿಗಳಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಎ.ಪಿ.ಅರ್ಜುನ್ ನಿರ್ದೇಶನದ ಹಾಗೂ ಉದಯ್ ಮೆಹ್ತಾ ನಿರ್ಮಾಣದ ಮಾರ್ಟಿನ್ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಈಗ ಅದರ ಪೋಸ್ಟ್ ಪೆಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ವರ್ಷವೇ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಪ್ರೇಕ್ಷಕರನ್ನ ಭೇಟಿ ಮಾಡಲು ಮಾರ್ಟಿನ್ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದ್ದಾರೆ.
BREAKING : ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ, ನಡುಗಿದ ದೆಹಲಿ
ಇನ್ನು ಧ್ರುವಾ ಹಾಗೂ ಪ್ರೇರಣಾ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು, ಈ ಮಕ್ಕಳಿಗೆ ಇನ್ನೂ ನಾಮಕರಣ ಮಾಡಿಲ್ಲ. ಆದರೆ ಇದೇ 22 ರಂದು ರಾಮಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಸಮಾರಂಭ ನಡೆಸಲು ಆ್ಯಕ್ಷನ್ ಪ್ರಿನ್ಸ್ ಮುಂದಾಗಿದ್ದಾರೆ.
ತಮ್ಮ ಮಕ್ಕಳಿಗೆ ರಾಮಾಯಣ ಹಾಗೂ ಮಹಾಭಾರತದ ಮಹಾಕಾವ್ಯಗಳಲ್ಲಿನ ಹೆಸರುಗಳನ್ನೇ ಇಡುವುದಾಗಿ ಧ್ರುವಸರ್ಜಾ ಅವರು ಹೇಳುವ ಮೂಲಕ ಮತ್ತಷ್ಟು ಕ್ರೇಜ್ ಹುಟ್ಟಿಸಿದ್ದಾರೆ.