ನವದೆಹಲಿ, ಜೂ. 24 – ಭಾರತ ತಂಡದ ಮಾಜಿ ಸ್ಪಿನ್ನರ್ ದಿಲೀಪ್ ದೋಶಿ ಅವರು ಕಳೆದ ರಾತ್ರಿ ಲಂಡನ್‌ನಲ್ಲಿ ನಿಧನರಾಗಿದ್ದಾರೆ.ಟೀಮ್ ಇಂಡಿಯಾ ಪರ 33 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳನ್ನು ಆಡಿರುವ ದುಲೀಪ್ ದೋಶಿ ಅವರು ಒಬ್ಬ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ತಮ್ಮ 32ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ದೋಶಿ ಅವರು 1979-83ರವರೆಗೆ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. 33 ಟೆಸ್ಟ್ ಪಂದ್ಯಗಳಿಂದ 6 ಬಾರಿ 5 ವಿಕೆಟ್ ಸಾಧನೆ ಸೇರಿದಂತೆ ಒಟ್ಟಾರೆ 114 ವಿಕೆಟ್ ಕಬಳಿಸಿದ್ದರೆ, 15 ಏಕದಿನ ಪಂದ್ಯಗಳಿಂದ 22 ವಿಕೆಟ್ ಕೆಡವಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬೆಂಗಾಳ ಹಾಗೂ ಸೌರಾಷ್ಟ್ರ ತಂಡಗಳ ಪರ ಆಡಿದ್ದ ದುಲೀಪ್ ದೋಶಿ ಅವರು 238 ಪ್ರಥಮ ದರ್ಜೆ ಪಂದ್ಯಗಳಿಂದ 898 ವಿಕೆಟ್ ಪಡೆದಿದ್ದಾರೆ.
ಬಿಸಿಸಿಐ ಸಂತಾಪ:
ಲಂಡನ್ ನಲ್ಲಿ ಕಳೆದ ರಾತ್ರಿ ಭಾರತ ತಂಡದ ಮಾಜಿ ಸ್ಪಿನ್ನರ್ ದುಲೀಪ್ ದೋಶಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದ್ದು, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಬಿ ಎಂದು ಬಿಸಿಸಿಐ ತಮ್ಮ ಅಧಿಕೃತ ವೈಬ್ ಸೈಟ್ ಸಂತಾಪ ಸೂಚಿಸಿದೆ.ಕ್ರಿಕೆಟಿಗ ಚೇತೇಶ್ವರ್ ಪೂಜಾರ, ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ, ಎಸ್‌ಸಿಎ ಅಧ್ಯಕ್ಷ ಜೈದೇವ್ ಶಾ ಮುಂತಾದವರು ದುಲೀಪ್ ದೋಶಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2025)
- ರಾಜ್ಯದ ಅಧಿಕಾರಕ್ಕಾಗಿ ಕಾನೂನು ಹೋರಾಟ ಅನಿವಾರ್ಯ; ಸ್ಟಾಲಿನ್
- ಟಾರ್ಪಾಲ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
- ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮೋದಿ
- ಠಾತ್ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ