ಬೆಂಗಳೂರು,ಜು.1- ಕಳೆದ ಮೂರು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರ ಫಿನಿಷರ್ ಪಾತ್ರ ನಿಭಾಯಿಸಿದ್ದ ದಿನೇಶ್ ಕಾರ್ತಿಕ್, 2025ರ ವಿಶ್ವದ ಶ್ರೀಮಂತ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.
2024ರ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಸಾರಥ್ಯದ ಆರ್‌ಸಿಬಿ ತಂಡವು ರೋಚಕ ಗೆಲುವುಗಳನ್ನು ಸಾಧಿಸುವ ಮೂಲಕ ಎರಡನೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಈ ಹಂತದಲ್ಲಿ ರಾಜಸ್ಥಾನ್ ರಾಯಲ್‌್ಸ ವಿರುದ್ಧ ಸೋಲು ಕಂಡು ಫೈನಲ್ ಟಿಕೆಟ್ ತಪ್ಪಿಸಿಕೊಂಡ ನಂತರ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
ಕಳೆದ ಆವೃತ್ತಿಯಲ್ಲಿ ಆಡಿದ 15 ಪಂದ್ಯಗಳಿಂದ ದಿನೇಶ್ ಕಾರ್ತಿಕ್187.35 ಸ್ಟ್ರೈಕ್‌ರೇಟ್‌ನಲ್ಲಿ 2 ಅರ್ಧಶತಕಗಳ ನೆರವಿನಿಂದ 326 ರನ್ ಗಳಿಸಿದ್ದು, 83 ರನ್ ಗರಿಷ್ಠ ಸ್ಕೋರ್ ಆಗಿತ್ತು.` ನಮ ನಲೆಯ ವಿಕೆಟ್ ಕೀಪರ್ ಅನ್ನು ಮತ್ತೆ ತಂಡಕ್ಕೆ ಸ್ವಾಗತಿಸುತ್ತಿದ್ದೇವೆ. ಅವರು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಹೊಸ ಅವತಾರದಲ್ಲಿ ತಂಡಕ್ಕೆ ಸೇವೆ ನೀಡಲಿದ್ದಾರೆ.
ಒಬ್ಬ ವ್ಯಕ್ತಿ ಕ್ರಿಕೆಟಿನಿಂದ ದೂರ ಆಗಬಹುದು, ಆದರೆ ಆತನಿಂದ ಕ್ರಿಕೆಟ್ ಎಂದಿಗೂ ದೂರವಾಗಲಾರದು. ಆರ್‌ಸಿಬಿ ಅಭಿಮಾನಿಗಳೇ ನಿಮ ಪ್ರೀತಿಯ ಮಳೆ ಸುರಿಯಲಿ’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ ಎಕ್‌್ಸ (ಟ್ವಿಟ್ಟರ್) ಗೋಡೆ ಮೇಲೆ ಬರೆದುಕೊಂಡಿದೆ.
ದಿನೇಶ್ ಕಾರ್ತಿಕ್ ಅವರು ಇದುವರೆಗೂ 257 ಐಪಿಎಲ್ ಪಂದ್ಯಗಳನ್ನಾಡಿದ್ದು,22 ಅರ್ಧಶತಕ ಸೇರಿದಂತೆ 135.36 ಸ್ಟ್ರೈಕ್‌ರೇಟ್‌ನಲ್ಲಿ 4842 ರನ್ ಗಳಿಸಿದ್ದಾರೆ.