Monday, February 24, 2025
Homeರಾಷ್ಟ್ರೀಯ | Nationalವಿವಾದಿತ ಯೂಟ್ಯೂಬರ್ ರಣವೀರ್‌ಗೆ ಸ್ರುಪೀಂಕೋರ್ಟ್ ಹಿಗ್ಗಾಮುಗ್ಗಾ ಛೀಮಾರಿ

ವಿವಾದಿತ ಯೂಟ್ಯೂಬರ್ ರಣವೀರ್‌ಗೆ ಸ್ರುಪೀಂಕೋರ್ಟ್ ಹಿಗ್ಗಾಮುಗ್ಗಾ ಛೀಮಾರಿ

"Dirt On Mind": Supreme Court Relief, Scathing Rebuke For Ranveer Allahbadia

ನವದೆಹಲಿ,ಫೆ.18-ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಇಂಡಿಯಾ ಗಾಟ್ ಟ್ಯಾಲೆಂಟ್ ಶೋನದಲ್ಲಿ ಅಶ್ಲೀಲ ಪದ ಬಳಸಿ ಬಂಧನದ ಭೀತಿ ಎದುರಿಸುತ್ತಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾಗೆ ಸುಪ್ರೀಂಕೋರ್ಟ್ ಹಿಗ್ಗಾಮುಗ್ಗಾ ಝಾಡಿಸಿದ್ದು, ನಿಮ್ಮ ಕೊಳಕು ಬುದ್ದಿಯನ್ನು ದೇಶದ ಜನತೆಗೆ ತೋರಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದೆ.

ರಣವೀರ್ ಅಲಹಾಬಾದಿಯಾರ ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್, ರಣೇರ್ ಅನ್ನು ಬಂಧಿಸದಿರುವಂತೆ ಸೂಚಿಸಿದೆ. ಆದರೆ ರಣವೀರ್ ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಿದರೆ ಮಾತ್ರವೇ ಅವರನ್ನು ಬಂಧಿಸುವಂತಿಲ್ಲ, ಅಸ್ಸಾಂ, ಮುಂಬೈ ಪೊಲೀಸರು ರಣವೀರ್ನನನ್ನು ಬಂಧಿಸುವಂತಿಲ್ಲ ಎಂದಿರುವ ಸುಪ್ರೀಂ ನ್ಯಾಯಮೂರ್ತಿಗಳು, ಒಂದೊಮ್ಮೆ ಇದೇ ವಿಷಯದ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಸಹ ರಣವೀರ್ ಅನ್ನು ಬಂಧಿಸುವಂತಿಲ್ಲ ಎಂದಿದೆ.

ಅವನ(ರಣವೀರ್) ಮನಸ್ಸಿನಲ್ಲಿ ಏನೋ ಕೊಳಕು ಇದ್ದಿರಬಹುದು. ಅದಕ್ಕಾಗಿಯೇ ಅದನ್ನು ಯೂಟ್ಯೂಬ್‌ನಲ್ಲಿ ವಾಂತಿ ಮಾಡಿದ್ದಾನೆ. ನಿಮ್ಮ ತಂದೆತಾಯಿಗಳಿಗೆ ನೀವು ಇದೇ ಭಾಷೆಯನ್ನು ಬಳಸುತ್ತೀರ ಎಂದು ಆರೋಪಿಗಳ ಪರ ವಕೀಲರನ್ನು ಸುಪ್ರೀಂಕೋರ್ಟ್ ಖಾರವಾಗಿಯೇ ಪ್ರಶ್ನಿಸಿತು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೋಟೇಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ರಣವೀರ್ ಅಲಹಾಬಾದಿಯಾ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳ ಬಂಧನ ತಡೆಕೋರಿ ಅರ್ಜಿಯನ್ನು ಕೈಗೆತ್ತಿಕೊಂಡು, ಇದು ನಾಚಿಕೆಗೇಡಿನ ಸಂಗತಿ. ನಿಜಕ್ಕೂ ಇಂಥ ಕೊಳಕು ಮನಸ್ಸು ಇಟ್ಟುಕೊಂಡಿರುವವರ ಹೇಳಿಕೆ ಖಂಡನೀಯ. ನೀವು ನಿಮ್ಮ ಪೋಷಕರಿಗೆ ಮಾತ್ರ ಅವಮಾನಿಸಿಲ್ಲ. ದೇಶದ ಎಲ್ಲಾ ಪೋಷಕರನ್ನು ಅವಮಾನಿಸಿದ್ದೀರ ಎಂದು ತರಾಟೆಗೆ ತೆಗೆದುಕೊಂಡಿತು.

ಸಮಾಜದ ಮೌಲ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಮನಸ್ಸಿನ ಕೊಳಕನ್ನು ಶೋದಲ್ಲಿ ಪ್ರಸ್ತುತ ಪಡಿಸಲಾಗಿದೆ. ಸಮಾಜಕ್ಕೆ ಕೆಲವು ಸ್ವಯಂ-ವಿಕಸಿತ ಮೌಲ್ಯಗಳಿವೆ. ನೀವು ಅವುಗಳನ್ನು ಗೌರವಿಸಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ, ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಯಾರಿಗೂ ಏನು ಬೇಕಾದರೂ ಮಾತನಾಡಲು ಪರವಾನಗಿ ಇಲ್ಲ. ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದು ಅಶ್ಲೀಲವಲ್ಲದಿದ್ದರೆ ಮತ್ತೇನು? ನಾವು ನಿಮ್ಮ ವಿರುದ್ಧ ಎಫ್ ಐಆರ್ಗಳನ್ನು ಏಕೆ ರದ್ದುಗೊಳಿಸಬೇಕು? ಎಂದು ಖಾರವಾಗಿಯೇ ಪ್ರಶ್ನಿಸಿತು.

ಇನ್ನು ಇದೇ ಪ್ರಕರಣದಲ್ಲಿ ಬಂಧನದ ಭೀತಿಯಿಂದ ರಕ್ಷಣೆ ಕೋರಿ ರಣವೀರ್ ಅಲ್ಲಾಬಾದಿಯಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಬಂಧನದಿಂದ ತಾತ್ಕಾಲಿಕ ರಿಲೀಫ್ ಕೊಟ್ಟಿರುವ ಸುಪ್ರೀಂಕೋರ್ಟ್ ಹತ್ತು ಹಲವು ಷರತ್ತುಗಳನ್ನು ವಿಧಿಸಿದೆ. ರಣವೀರ್ ಅಲ್ಲಾಹಬಾಡಿಯಾ ಅವರು ಇನ್ನು ಮುಂದೆ ಯಾವುದೇ ಯೂಟ್ಯೂಬ್ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ, ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಸಂಚಿಕೆಯ ಆಧಾರದ ಮೇಲೆ ಅವರ ವಿರುದ್ಧ ಯಾವುದೇ ಬೇರೆ ಎಫ್‌ ಐಆರ್ ದಾಖಲಿಸಬಾರದು.

ಸುಪ್ರೀಂಕೋರ್ಟ್ ಅವರ ಪಾಸ್‌ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ಸೂಚಿಸಿತು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ಅವರು ದೇಶವನ್ನು ತೊರೆಯುವಂತಿಲ್ಲ, ಅಸಹ್ಯಕರ ಹೇಳಿಕೆಗಳ ಕುರಿತು ಮಹಾರಾಷ್ಟ್ರ, ಅಸ್ಸಾಂನಲ್ಲಿ ದಾಖಲಾಗಿರುವ ಎಫ್‌ಐರ್‌ಗಳ ತನಿಖೆಗೆ ಸಹಕರಿಸಬೇಕು.

ಕಾಮಿಡಿಯನ್ ಸಮಯ್ ರೈನಾ ಅತಿಥ್ಯದ ಇಂಡಿಯಾಸ್ ಗಾಟ್ ಲೇಟೆಂಟ್ ರಿಯಾಲಿಟಿ ಶೋನಲ್ಲಿ ಎಫ್‌ ಐರ್‌ಗಳ ವಿರುದ್ಧ ರಣವೀರ್ ಅಲಹಾಬಾದಿಯ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗಳನ್ನು ಒಗ್ಗೂಡಿಸಬೇಕು ಎಂದು ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ರಣವೀರ್ ಹೇಳಿಕೆಯನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ನೀನು ಜನಪ್ರಿಯ ಎಂದ ಮಾತ್ರಕ್ಕೆ ಈ ಸಮಾಜವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ತೋಚಿದ್ದೆಲ್ಲವನ್ನೂ ಹೇಳಬಹುದಾ? ಇದು ಅಶ್ಲೀಲ ಅಲ್ಲದೇ ಹೋದರೆ ಈ ದೇಶದಲ್ಲಿ ಇನ್ನು ಯಾವುದು ಅಶ್ಲೀಲ ಎಂದು ಸಹ ಸಿಟ್ಟಿನಿಂದ ಪ್ರಶ್ನೆ ಮಾಡಿದ್ದಾರೆ.

ರಣವೀರ್ ಪರ ವಕೀಲರು ಸಹ ತಮ್ಮ ಕಕ್ಷಿದಾರರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು ಆತ ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ, ಆದರೆ ಆ ಹೇಳಿಕೆ ಕ್ರಿಮಿನಲ್ ಅಪರಾಧದಡಿ ಒಳಪಡುತ್ತದೆಯೇ ಎಂಬುದನ್ನು ನಾವು ನೋಡಬೇಕಿದೆ ಎಂದಿದ್ದಾರೆ.

ರಣವೀರ್ ಬಂಧನ ಭೀತಿ ತಪ್ಪಿದ ಬೆನ್ನಲ್ಲೆ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಸಮಯ್ ರೈನಾಗೂ ಬಂಧನ ಭೀತಿಯಿಂದ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಇಂಡಿಯಾ ಗಾಟ್ ಲೇಟೆಂಟ್ ಶೋನಲ್ಲಿ ಭಾಗಿ ಆಗಿದ್ದ ರಣವೀರ ಅಲಹಾಬಾದಿಯಾ, ನಿನ್ನ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದು ನೋಡುತ್ತೀಯಾ ಅಥವಾ ನೀನೂ ಅವರೊಂದಿಗೆ ಭಾಗಿ ಆಗುತ್ತೀಯಾ ಎಂದು ಸ್ಪರ್ಧಿಯೊಬ್ಬನನ್ನು ಕೇಳಿದ್ದರು.

RELATED ARTICLES

Latest News