Thursday, December 26, 2024
Homeರಾಜ್ಯಸೋಮವಾರದಿಂದ ಬುಧವಾರದವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ : ಸ್ಪೀಕರ್

ಸೋಮವಾರದಿಂದ ಬುಧವಾರದವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ : ಸ್ಪೀಕರ್

Discussion on North Karnataka issues to be allowed from Monday to Wednesday: Speaker

ಬೆಳಗಾವಿ,ಡಿ.13-ಸೋಮವಾರದಿಂದ ಬುಧವಾರದವರೆಗೆ ಉತ್ತರ ಕರ್ನಾಟಕದ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನಸಭೆಯಲ್ಲಿ ಪ್ರಕಟಿಸಿದರು. ಈ ವಿಶೇಷ ಚರ್ಚೆಯಲ್ಲಿ ಎಲ್ಲಾ ಭಾಗದ ಶಾಸಕರು ಪಾಲ್ಗೊಂಡು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು, ಉಪಯುಕ ಸಲಹೆಗಳನ್ನು ನೀಡಬೇಕು ಎಂದರು.

ಸೋಮವಾರ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಸೋಮವಾರ ಉತ್ತರಕರ್ನಾಟಕದ ಕುರಿತ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡು ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆಗಳನ್ನು ಸರ್ಕಾರಕ್ಕೆ ನೀಡಬೇಕು ಎಂದರು.

ಮಂಗಳವಾರ ಉಳಿದೆಲ್ಲ ಶಾಸಕರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಬುಧವಾರ ಈ ವಿಶೇಷ ಚರ್ಚೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದು ಪ್ರಕಟಿಸಿದರು.

RELATED ARTICLES

Latest News