Thursday, April 3, 2025
Homeರಾಷ್ಟ್ರೀಯ | Nationalಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು

ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಜಡ್ಜ್ ಅಮಾನತು

ನೈನಿತಾಲ್, ಜ 5 (ಪಿಟಿಐ) ಅಧೀನ ಅಧಿಕಾರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ರುದ್ರಪ್ರಯಾಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾೀಧಿಶರು ಮತ್ತು ಹೈಕೋರ್ಟ್‍ನ ಮಾಜಿ ರಿಜಿಸ್ಟ್ರಾರ್ (ವಿಜಿಲೆನ್ಸ್) ಅನುಜ್ ಕುಮಾರ್ ಸಂಗಲ್ ಅವರನ್ನು ಉತ್ತರಾಖಂಡ ಹೈಕೋರ್ಟ್ ಅಮಾನತುಗೊಳಿಸಿದೆ.

ಸಂಗಲ್ ಅವರ ನಿವಾಸದಲ್ಲಿ ನೇಮಕಗೊಂಡ ನಾಲ್ಕನೆ ವರ್ಗದ ಉದ್ಯೋಗಿಯನ್ನು ನಿಂದಿಸುವ ಮೂಲಕ ಕಿರುಕುಳ ನೀಡಿದ ಆರೋಪವಿದೆ ಮತ್ತು ಸೇವೆಯಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಲಾಗಿತ್ತು. ಇದು ಅಧಿಕಾರಿ ವಿಷ ಸೇವಿಸಲು ಕಾರಣವಾಯಿತು ಎಂದು ರಿಜಿಸ್ಟ್ರಾರ್ ಜನರಲ್ ಆಶಿಶ್ ನೈತಾನಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇಡಿ ದಾಳಿ ವೇಳೆ 5ಕೋಟಿ ನಗದು, ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆ

ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ತಿವಾರಿ ಅವರ ಸೂಚನೆ ಮೇರೆಗೆ ಹೊರಡಿಸಿರುವ ಆದೇಶದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರುದ್ರಪ್ರಯಾಗ ಅವರ ವಿರುದ್ಧದ ಆರೋಪಗಳ ಕುರಿತು ಶಿಸ್ತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಉತ್ತರಾಖಂಡ ಸರ್ಕಾರಿ ನೌಕರರ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳು 2003ರ ನಿಯಮ 7ರ ಅಡಿಯಲ್ಲಿ ಅವರ ವಿರುದ್ಧ ನಿಯಮಿತ ವಿಚಾರಣೆಯನ್ನು ಪ್ರಾರಂಭಿಸಲಾಗುವುದು.

ಅಧೀನ ಅಧಿಕಾರಿಗೆ ಕಿರುಕುಳ ನೀಡುವುದು ಮತ್ತು ಅವರನ್ನು ಸೇವೆಯಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕುವುದು ಅಮಾನವೀಯ ನಡವಳಿಕೆ ಮತ್ತು ನ್ಯಾಯಾಂಗ ಅಧಿಕಾರಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಆದೇಶದ ಪ್ರಕಾರ ಉತ್ತರಾಖಂಡ ಸರ್ಕಾರಿ ನೌಕರರ ನಡವಳಿಕೆ ನಿಯಮಗಳಿಗೆ ವಿರುದ್ಧವಾಗಿದೆ.

RELATED ARTICLES

Latest News